ಬೆಂಗಳೂರು : ಸಾಯೋದಕ್ಕೆ ನಿನಗೆ ಮೀಟರ್ ಇದೆಯಾ? ಎಂದು ಪ್ರಿಯಕರ ಕಳುಹಿಸಿದ ಚಾಲೆಂಜ್ ಸ್ವೀಕರಿಸಿ, ಇಲಿ ಪಾಷಾಣ ಸೇವಿಸಿದ್ದ ಯುವತಿಯೊಬ್ಬಳು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಮಹದೇವಪುರ ಕ್ಷೇತ್ರ ವ್ಯಾಪ್ತಿಯ ಕಿತ್ತಗನೂರು ಗ್ರಾಮದ ದಿವ್ಯಾ (19) ಪ್ರಾಣ ಕಳೆದುಕೊಂಡ ನತದೃಷ್ಟೆ. ಇದೇ ಗ್ರಾಮದ ಹರೀಶ್ (21) ಯುವತಿ ಸಾವಿಗೆ ಕಾರಣವಾದ ಆರೋಪಕ್ಕೆ ಗುರಿಯಾಗಿರುವ ಆಕೆಯ ಪ್ರೇಮಿ. ಹರೀಶ್ ಕಳುಹಿಸಿದ ಸಂದೇಶವನ್ನು ಗಂಭೀರವಾಗಿ ಸ್ವೀಕರಿಸಿದ ದಿವ್ಯಾ ಅ.೩೦ರಂದು ಇಲಿ ಪಾಷಾಣ ಸೇವಿಸಿದ್ದು, ಚಿಕಿತ್ಸೆ ಫಲಿಸದೆ ಅ.31ರಂದು ಮೃತಪಟ್ಟಿದ್ದಾಳೆ.

ಕಿತ್ತಗನೂರು ಗ್ರಾಮದವಳಾದ ದಿವ್ಯಾ, ಹಲಸೂ ರಿನ ಖಾಸಗಿ ಕಾಲೇಜೊಂದರ ಪ್ರಥಮ ವರ್ಷದ ಬಿಕಾಂ ವಿದ್ಯಾರ್ಥಿನಿಯಾಗಿದ್ದು, ಕಳೆದ ಒಂದೂವರೆ ವರ್ಷದಿಂದ ತನ್ನ ಎದುರಗಡೆ ಮನೆಯ ಹರೀಶ್ ಎಂಬಾತನನ್ನು ಪ್ರೀತಿಸುತ್ತಿದ್ದಳು ಎಂದು ತಿಳಿದು ಬಂದಿದೆ. ಕೆಲ ದಿನಗಳ ಹಿಂದೆ ಇಬ್ಬರು ಮನೆ ಬಿಟ್ಟು ಪರಾರಿಯಾಗಿದ್ದು, ಕೊನೆಗೆ ಪೊಲೀಸರ ಸಹಕಾರದಿಂದ ದಿವ್ಯಾ ಪೋಷಕರು ಇಬ್ಬರನ್ನು ಪತ್ತೆ ಮಾಡಿ ಮನೆಗೆ ಕರೆ ತಂದಿದ್ದರು. ಕೊನೆಗೆ ಗ್ರಾಮಸ್ಥರೆಲ್ಲರು ಸೇರಿ ಎರಡೂ ಕುಟುಂಬದವರನ್ನು ಸೇರಿಸಿ ರಾಜೀ ಪಂಚಾಯಿತಿ ಮಾಡಿದ್ದರು. 

ಕೊನೆಗೆ ದಿವ್ಯಾಳ ಪೋಷಕರು ಆಕೆ ಯನ್ನು ಕಾಲೇಜು ಬಿಡಿಸಿ ಮನೆಯಲ್ಲಿಟ್ಟುಕೊಂಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಇಷ್ಟೆಲ್ಲಾ ರದ್ಧಾಂತವಾಗಿದ್ದರೂ ಹರೀಶ್, ದಿವ್ಯಾಳ ಪೋಷಕರನ್ನು ಯಮಾರಿಸಿ ತನ್ನ ಸ್ನೇಹಿತರ ಮೂಲಕ ಆಕೆಗೊಂದು ಮೊಬೈಲ್ ಕೊಡಿಸಿ ಆಕೆ ಮೇಸೆಜ್  ಮಾ ಡುತ್ತಿದ್ದ. ಪ್ರತಿನಿತ್ಯ ಆಕೆಯೊಂದಿಗೆ ಚಾಟ್ ಮಾಡುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.