ಬೆಂಗಳೂರು[ಜೂನ್ 18]  ಕಳ್ಳರು ಇದೀಗ ಹಿರಿಯ ಅಧಿಕಾರಿಗಳ ಮನೆಯನ್ನು ಟಾರ್ಗೆಟ್  ಮಾಡುತ್ತಿದ್ದಾರೆ. ಎರಡು ದಿನಗಳ ಹಿಂದೆ ನಿವೃತ್ತ ಐಜಿಪಿ ಎಂ.ವಿ.ಮೂರ್ತಿ ಅವರ ಮನೆಯಲ್ಲಿ ಕಳ್ಳತನ  ನಡೆದಿತ್ತು. ಇದೀಗ ನಿವೃತ್ತ ಐಎಎಸ್ ಅಧಿಕಾರಿ ಕೌಶಿಕ್ ಮುಖರ್ಜಿ ಮನೆಯಲ್ಲಿ ಕಳ್ಳತನವಾಗಿದೆ.

ಬೆಂಗಳೂರಿನ ಎಚ್​ಎಸ್​ಆರ್​ ಲೇಔಟ್​ನಲ್ಲಿರುವ ಮುಖರ್ಜಿ ಮನೆಗೆ ನುಗ್ಗಿದ ಕಳ್ಳರು 6 ದುಬಾರಿ ವಾಚ್​ಗಳು, 100 ಗ್ರಾಂ ಚಿನ್ನದ ಕಿವಿ ಓಲೆ, 100 ಗ್ರಾಂ ಚಿನ್ನದ ಬಳೆಗಳು, 2 ವಜ್ರದ ಉಂಗುರ, 3 ವಜ್ರದ ಕಿವಿ ಓಲೆ, 2 ದುಬಾರಿ ಪೆನ್​ಗಳು,​ ಸೇರಿ 25 ಲಕ್ಷ ಮೌಲ್ಯದ ವಸ್ತುಗಳ ಕದ್ದು ಪರಾರಿಯಾಗಿದ್ದಾರೆ.

ಜೂನ್ 16ರಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು ಎಚ್ಎಸ್ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ನಿವೃತ್ತ ಐಜಿಪಿ ಎಂ.ವಿ.ಮೂರ್ತಿ ಅವರ ಮನೆಯೂ ಎಚ್ಎಸ್ಆರ್ ಲೇಔಟ್‌ನಲ್ಲಿಯೇ ಇತ್ತು. ನಿವೃತ್ತ ಅಧಿಕಾರಿಗಳ ಮನೆಯಲ್ಲಿನ ಕಳ್ಳತನ ಪೊಲೀಸರಿಗೆ ಹೊಸ ತಲೆನೋವು ತಂದಿದೆ.