Asianet Suvarna News Asianet Suvarna News

ವಿಶ್ವದ ಅಗ್ಗದ ನಗರಗಳಲ್ಲಿ ಬೆಂಗಳೂರಿಗೆ ನಂ.5ನೇ ಸ್ಥಾನ

ವಿಶ್ವದ ಅತ್ಯಂತ ಅಗ್ಗದ ನಗರಗಳ ಪೈಕಿ ಬೆಂಗಳೂರು 5ನೇ ಸ್ಥಾನ ಪಡೆದುಕೊಂಡಿದೆ. ಜೊತೆಗೆ ಅತೀ ಅಗ್ಗದ 10 ನಗರಗಳ ಪೈಕಿ ದೆಹಲಿ ಮತ್ತು ಚೆನ್ನೈ ನಗರಗಳೂ ಸ್ಥಾನ ಪಡೆದಿವೆ ಎಂದು ಎಕನಾಮಿಸ್ಟ್‌ ಇಂಟಲಿಜೆನ್ಸ್‌ ಯುನಿಟ್‌ (ಇಐಯು) ನಡೆಸಿದ ಸಮೀಕ್ಷೆ ತಿಳಿಸಿದೆ.

Bengaluru fifth Cheapest city in the world

ನವದೆಹಲಿ : ವಿಶ್ವದ ಅತ್ಯಂತ ಅಗ್ಗದ ನಗರಗಳ ಪೈಕಿ ಬೆಂಗಳೂರು 5ನೇ ಸ್ಥಾನ ಪಡೆದುಕೊಂಡಿದೆ. ಜೊತೆಗೆ ಅತೀ ಅಗ್ಗದ 10 ನಗರಗಳ ಪೈಕಿ ದೆಹಲಿ ಮತ್ತು ಚೆನ್ನೈ ನಗರಗಳೂ ಸ್ಥಾನ ಪಡೆದಿವೆ ಎಂದು ಎಕನಾಮಿಸ್ಟ್‌ ಇಂಟಲಿಜೆನ್ಸ್‌ ಯುನಿಟ್‌ (ಇಐಯು) ನಡೆಸಿದ ಸಮೀಕ್ಷೆ ತಿಳಿಸಿದೆ.

ಇಐಯುನ ವಿಶ್ವವ್ಯಾಪಿ ಜೀವನ ನಿರ್ವಹಣಾ ವೆಚ್ಚಕ್ಕೆ ಸಂಬಂಧಿಸಿದ 2018ರ ಸಮೀಕ್ಷೆ ಪ್ರಕಟಗೊಂಡಿದ್ದು, ವಾಸಕ್ಕೆ ಸಿಂಗಾಪುರ ಅತಿ ದುಬಾರಿ ನಗರ ಎನಿಸಿಕೊಂಡಿದೆ. ದಕ್ಷಿಣ ಏಷ್ಯಾ ನಗರಗಳು, ಅದರಲ್ಲೂ ಮುಖ್ಯವಾಗಿ ಭಾರತ ಮತ್ತು ಪಾಕಿಸ್ತಾನಗಳು ಹಣದ ಮೌಲ್ಯಕ್ಕೆ ತಕ್ಕಂತೆ ವಸತಿಯನ್ನು ಕಲ್ಪಿಸುತ್ತಿವೆ ಎಂದು ಸಮೀಕ್ಷೆ ತಿಳಿಸಿದೆ.

ಆಹಾರ, ಕಡಿಯುವ ನೀರು, ಬಟ್ಟೆ, ಗೃಹ ಬಳಕೆ ವಸ್ತುಗಳ ಪೂರೈಕೆ ಮತ್ತು ಮನೆ ಬಾಡಿಗೆ, ಸಾರಿಗೆ, ವಿದ್ಯುತ್‌ ಮತ್ತಿತರ ಗೃಹ ಬಳಕೆ ಬಿಲ್‌ಗಳು, ಖಾಸಗಿ ಶಾಲೆಗಳು, ಮೆನೆ ಕೆಲಸದ ಆಳುಗಳು ಮತ್ತು ಮನರಂಜನೆ ವೆಚ್ಚಗಳನ್ನು ಮಾನದಂಡವಾಗಿಟ್ಟುಕೊಂಡು ಅಗ್ಗದ ನಗರಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.

‘ಭಾರತದಲ್ಲಿ ಆರ್ಥಿಕ ಪ್ರಗತಿ ವ್ಯಾಪಕವಾಗಿ ನಡೆಯುತ್ತಿದೆ. ಆದರೆ, ತಲಾದಾಯ, ವೇತನ ಮತ್ತು ವ್ಯಯಿಸುವ ಸಾಮರ್ಥ್ಯ ಕಡಿಮೆ ಮಟ್ಟದಲ್ಲೇ ಇದೆ. ಕಡಿಮೆ ವೇತನ ಮನೆ ಮಂದಿಯ ವೆಚ್ಚಕ್ಕೆ ಕಡಿವಾಣ ಹಾಕಿದೆ. ಹಲವು ಸ್ತರದ ದರಗಳ ರಚನೆಗೆ ಕಾರಣವಾಗಿದೆ’ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಡಮಾಸ್ಕಸ್‌ ಅತಿ ಅಗ್ಗ:

ಸಿರಿಯಾದ ರಾಜಧಾನಿ ಡಮಾಸ್ಕಸ್‌ ವಿಶ್ವದಲ್ಲೇ ಅತ್ಯಂತ ಅಗ್ಗದ ನಗರ ಎನಿಸಿಕೊಂಡಿದೆ. ವೆನಿಜುವೆಲಾದ ರಾಜಧಾನಿ ಕ್ಯಾರಕಸ್‌ ಮತ್ತು ಕಜಕಿಸ್ತಾನದ ವ್ಯಾಪಾರಿ ಕೇಂದ್ರ ಅಲ್ಮಾಟಿ ನಗರಗಳು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದುಕೊಂಡಿವೆ. ಇನ್ನುಳಿದಂತೆ ಅತಿ ಅಗ್ಗದ 10 ನಗರಗಳ ಪೈಕಿ ಲಾಗೋಸ್‌ 4ನೇ ಸ್ಥಾನ, ಬೆಂಗಳೂರು (5ನೇ ಸ್ಥಾನ) ಕರಾಚಿ (6ನೇ ಸ್ಥಾನ), ಅಲ್ಗಿರಿಸ್‌ (7ನೇ ಸ್ಥಾನ), ಚೆನ್ನೈ (8ನೇ ಸ್ಥಾನ), ಬುಕಾರೆಸ್ಟ್‌ (9ನೇ ಸ್ಥಾನ) ಮತ್ತು ದೆಹಲಿ (10ನೇ ಸ್ಥಾನ) ಪಡೆದುಕೊಂಡಿವೆ.

ಭಾರತದ ಉಪಖಂಡದಲ್ಲಿ ವಸತಿ ರಚನಾತ್ಮಕವಾಗಿ ಅಗ್ಗವಾಗಿದ್ದರೂ, ವಾಸ ಸ್ಥಳಕ್ಕೆ ಸಂಬಂಧಿಸಿದ ವೆಚ್ಚವನ್ನು ಅಗ್ಗಗೊಳಿಸಲು ಅಸ್ಥಿರತೆ ಪ್ರಮುಖ ಪಾತ್ರ ವಹಿಸಿದೆ. ಅಂದರೆ ವಿಶ್ವದ ಕೆಲವು ಅಗ್ಗದ ನಗರಗಳು ಅಪಾಯವನ್ನೂ ಒಳಗೊಂಡಿದೆ ಎಂದು ವರದಿ ತಿಳಿಸಿದೆ.

ಸಿಂಗಾಪುರ ಅತಿ ದುಬಾರಿ ನಗರ:

ಇದೇ ವೇಳೆ, ಸಿಂಗಾಪುರ ವಿಶ್ವದ ಅತ್ಯಂತ ದುಬಾರಿ ನಗರ ಎಂಬ ಪಟ್ಟವನ್ನು ಸತತ 5ನೇ ವರ್ಷವೂ ಉಳಿಸಿಕೊಂಡಿದೆ. ಪ್ಯಾರಿಸ್‌ ಅತಿ ದುಬಾರಿ ನಗರಗಳ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದ್ದು, ಜ್ಯೂರಿಚ್‌ (3ನೇ ಸ್ಥಾನ)ಮತ್ತು ಹಾಂಕಾಂಗ್‌ (4ನೇ ಸ್ಥಾನ) ಪಡೆದಿವೆ. ಜಿವೆವಾ (6ನೇ), ಸೋಲ್‌ (7ನೇ), ಕೋಪನ್‌ ಹೆಗನ್‌ (8ನೇ), ಟೆಲ್‌ ಅವೀವ್‌ (9ನೇ) ಮತ್ತು ಸಿಡ್ನಿ (10ನೇ) ಸ್ಥಾನ ಪಡೆದುಕೊಂಡಿವೆ.

Follow Us:
Download App:
  • android
  • ios