ಫಿನಿಶಿಂಗ್‌ ಲೈನ್‌ನಲ್ಲಿ ಮದುವೆ | ಜೈಪುರದಲ್ಲಿ ವಿಶಿಷ್ಟಘಟನೆ
ಜೈಪುರದಲ್ಲಿ ಮ್ಯಾರಥಾನ್ನ ಫಿನಿಶಿಂಗ್ ಲೈನ್ನಲ್ಲೇ ಅವರು ತಮ್ಮ ಸ್ನೇಹಿತೆ ಕವಿತಾ ಬಾತ್ರಾರನ್ನು ವರಿಸಿದ್ದಾರೆ. ಜೈಪುರದ ಹಾಫ್ ಮ್ಯಾರಥಾನ್ನಲ್ಲಿ ಪಾಲ್ಗೊಂಡಿದ್ದ ಉದ್ಯಮಿ ತ್ರಿವೇದಿ ಅವರು ಮ್ಯಾರಥಾನ್ನ ಫಿನಿಶಿಂಗ್ ಲೈನ್ನಲ್ಲಿ ತನಗಾಗಿ ಹಾರ ಹಿಡಿದು ಕಾಯುತ್ತಿದ್ದ ಕವಿತಾ(28)ರನ್ನು ಮದುವೆಯಾದರು.
ಮ್ಯಾರಥಾನ್ನ ಓಟವನ್ನು ಮುಗಿಸುತ್ತಿದ್ದಂತೆಯೇ, ಹೊಸ ಬದುಕಿನ ಓಟವನ್ನು ಶುರುವಿಟ್ಟುಕೊಂಡರು. ಈ ಜೋಡಿ, ಮದುವೆ ದಿನವೇ ಮ್ಯಾರಥಾನ್ ಇದ್ದ ಕಾರಣ ಫಿನಿಶಿಂಗ್ ಲೈನ್ನಲ್ಲಿ ಮದುವೆಯಾಗಲು ನಿರ್ಧರಿಸಿದ್ದರು. ವಧು-ವರರ ಸ್ನೇಹಿತರು, ಇತರೆ ಮ್ಯಾರಥಾನ್ ಓಟಗಾರರು ಈ ವಿವಾಹಕ್ಕೆ ಸಾಕ್ಷಿಯಾದರು. ಅನಂತ್ ಬೆಂಗಳೂರಿನಲ್ಲಿ ಸ್ವಂತ ಉದ್ಯೊಗ ಹೊಂದಿದ್ದರೆ, ಕವಿತಾ ಐಟಿ ಉದ್ಯೋಗದಲ್ಲಿದ್ದಾರೆ.
