ಬೆಂಗಳೂರಿನ ಎಲೆಕ್ಟ್ರಾನಿಕ್‌ ಸಿಟಿ, ಇಸ್ರೇಲ್‌ ದೂತಾವಾಸ ಕಚೇರಿ ಸಹಿತ ದಕ್ಷಿಣ ಭಾರತದ ಹಲವು ಜನನಿಭಿಡ ಪ್ರದೇಶಗಳಲ್ಲಿ ಬಾಂಬ್‌ ಸ್ಫೋಟ ಸಂಚು ರೂಪಿಸಿದ್ದ ಆರೋಪಿ, ಶ್ರೀಲಂಕಾದಲ್ಲಿ ನಿಯೋಜಿತನಾಗಿದ್ದ ಪಾಕಿಸ್ತಾನ ರಾಯಭಾರಿ ವಿರುದ್ಧ ಎನ್‌ಐಎ, ತಮಿಳುನಾಡಿನ ವಿಶೇಷ ಕೋರ್ಟ್‌ನಲ್ಲಿ ದೋಷಾರೋಪ ದಾಖಲಿಸಿದೆ.

ಚೆನ್ನೈ: ಬೆಂಗಳೂರಿನ ಎಲೆಕ್ಟ್ರಾನಿಕ್‌ ಸಿಟಿ, ಇಸ್ರೇಲ್‌ ದೂತಾವಾಸ ಕಚೇರಿ ಸಹಿತ ದಕ್ಷಿಣ ಭಾರತದ ಹಲವು ಜನನಿಭಿಡ ಪ್ರದೇಶಗಳಲ್ಲಿ ಬಾಂಬ್‌ ಸ್ಫೋಟ ಸಂಚು ರೂಪಿಸಿದ್ದ ಆರೋಪಿ, ಶ್ರೀಲಂಕಾದಲ್ಲಿ ನಿಯೋಜಿತನಾಗಿದ್ದ ಪಾಕಿಸ್ತಾನ ರಾಯಭಾರಿ ವಿರುದ್ಧ ಎನ್‌ಐಎ, ತಮಿಳುನಾಡಿನ ವಿಶೇಷ ಕೋರ್ಟ್‌ನಲ್ಲಿ ದೋಷಾರೋಪ ದಾಖಲಿಸಿದೆ.

2014ರಲ್ಲಿ ಶ್ರೀಲಂಕಾದಲ್ಲಿ ಪಾಕಿಸ್ತಾನದ ರಾಯಭಾರಿಯಾಗಿದ್ದ ಅಮೀರ್‌ ಜುಬೇರ್‌ ಸಿದ್ದೀಕಿ ಮತ್ತು ಆತನ ಸಂಚಿನಲ್ಲಿ ಭಾಗೀದಾರಿಗಳಾಗಿದ್ದ ಇಬ್ಬರ ವಿರುದ್ಧ ದೋಷಾರೋಪ ದಾಖಲಾಗಿದೆ. ಸ್ಫೋಟದ ಸಂಚಿನ ಜೊತೆಗೆ ಭಾರತದಲ್ಲಿ ನಕಲಿ ಕರೆನ್ಸಿ ಹರಡುವ ಜಾಲವನ್ನೂ ಜುಬೇರ್‌ ರೂಪಿಸಿದ್ದ. 2012ರಲ್ಲಿ ತಮಿಳುನಾಡಿನ ತಿರುಚಿಯಲ್ಲಿ ತಂಜಾವೂರಿನ ತಮೀಮ್‌ ಅನ್ಸಾರಿ ಎಂಬಾತನನ್ನು ಬಂಧಿಸಿದಾಗ, ಸಿದ್ದಿಕಿ ಭಾರತದಲ್ಲಿ ಭಯೋತ್ಪಾದನಾ ಚಟುವಟಿಕೆ ನಡೆಸಲು ಜನರನ್ನು ಪ್ರಚೋದಿಸುತ್ತಿದ್ದ ಎಂಬ ವಿಷಯ ಬೆಳಕಿಗೆ ಬಂದಿತ್ತು.