ನವದೆಹಲಿ [ಜು.22] : ಬೆಂಗಾಲಿ ನಟಿ ಪರ್ನೋ ಮಿತ್ರಾ ಬಿಜೆಪಿ ಸೇರಿದ ಬೆನ್ನಲ್ಲೇ ಮತ್ತೋರ್ವ ನಟಿ ರಿಮ್ ಜಿಮ್ ಮಿತ್ರಾ ಕೂಡ  ಬಿಜೆಪಿ ಸೇರಿದ್ದಾರೆ. 

ಟಿವಿ ನಟಿಯಾಗಿರುವ ರಿಮ್ ಜಿಮ್ 2013ರ  ಜಲಕ್ ದಿಕಲಾಜ ಬಾಂಗ್ಲಾ ವಿಜೇತೆಯಾಗಿದ್ದು,  ಬಿಗ್ ಬಾಸ್ ನಲ್ಲಿಯೂ ಪಾಲ್ಗೊಂಡಿದ್ದರು. ಟೀನ್ ಯಾರಿ ಕಥಾ, ಕ್ರಾಸ್ ಕನೆಕ್ಷನ್ ಚಿತ್ರ ಹೆಚ್ಚು ಪ್ರಸಿದ್ಧಿ ಪಡೆದಿದ್ದವು. 

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಬಿಜೆಪಿ ಮುಖಂಡರ ಸಮ್ಮುಖದಲ್ಲಿ ಪಕ್ಷ ಸೇರಿದ ರಿಮ್ ಜಿಮ್, ಕೇವಲ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿರುವ ತಮಗೆ ಕೆಲಸದಲ್ಲಿ ಬದಲಾವಣೆ ಬೇಕೆನ್ನಿಸಿದ್ದು, ಈ ನಿಟ್ಟಿನಲ್ಲಿ ಬಿಜೆಪಿಯನ್ನು ಬೆಂಬಲಿಸುತ್ತಿದ್ದೇನೆ ಎಂದು ಹೇಳಿದ್ದಾರೆ. 

ಅಧಿಕೃತವಾಗಿ ಬಿಜೆಪಿ ಸೇರಿದ್ದು,  ನಾಯಕರು ತಮ್ಮನ್ನು ಸ್ವಾಗತಿಸಿದ್ದಾರೆ ಎಂದಿದ್ದಾರೆ. ಪಕ್ಷ ಸೇರಲು ತಮಗೆ ಯಾವುದೇರೀತಿಯ ಒತ್ತಡ, ಬೆದರಿಕೆಯೂ ಬಂದಿಲ್ಲ, ಮನಃಪೂರ್ವಕವಾಗಿಯೇ ಬಿಜೆಪಿ  ಸೇರಿದ್ದೇನೆ ಎಂದು ರಿಮ್ ಜಿಮ್ ಹೇಳಿದರು.

ಬಿಜೆಪಿಯಿಂದ ಪಕ್ಷ ಸೇರಲು ತೃಣಮೂಲಕ ಕಾಂಗ್ರೆಸಿಗರು ಸೇರಿದಂತೆ ಹಲವಿಂದ ಬಿಜೆಪಿಯಿಂದ ಬೆದರಿಕೆ ಒಡ್ಡಲಾಗುತ್ತಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಲಾಗುತ್ತದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪದ ಬೆನ್ನಲ್ಲೇ ಬಿಜೆಪಿ ಸೇರುವವರ ಸಂಖ್ಯೆಯೂ ಹೆಚ್ಚುತ್ತಿದ್ದು, ಇದಕ್ಕೆ ಯಾವುದೇ ಒತ್ತಡವಿಲ್ಲ ಎಂದೂ ಹೇಳಿದ್ದಾರೆ.