ಕೋಲ್ಕತಾ[ಸೆ.27]: 2016ರ ಪಶ್ಚಿಮ ಬಂಗಾಳ ಚುನಾವಣೆ ವೇಳೆ ತೃಣಮೂಲ ಕಾಂಗ್ರೆಸ್‌ ನಾಯಕರು ಹಾಗೂ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ನಡೆಸಲಾದ ನಾರದಾ ರಹಸ್ಯ ಕಾರ್ಯಾಚರಣೆ ಹಗರಣ ಸಂಬಂಧ ಸಿಬಿಐ ಗುರುವಾರ ಮೊದಲ ಬೇಟೆಯಾಡಿದ್ದು, ಹಿರಿಯ ಐಪಿಎಸ್‌ ಅಧಿಕಾರಿ ಎಸ್‌ಎಂಎಚ್‌ ಮಿರ್ಜಾರನ್ನು ಬಂಧಿಸಿದೆ.

ಮಾತೃಭೂಮಿಗಾಗಿ ಫ್ಯಾಶನ್ ಲೋಕ ಬಿಟ್ಟರು: ಲೆ. ಗರಿಮಾ ಯಾದವ್ ನಮಗೆಲ್ಲಾ ಗುರು!

ಈ ಹಿಂದೆ ಪ್ರಕರಣ ಸಂಬಂಧ ಮಿರ್ಜಾರನ್ನು ಹಲವು ಬಾರಿ ವಿಚಾರಣೆಗೊಳಪಡಿಸಲಾಗಿತ್ತು. ಇದೀಗ ಇನ್ನೊಂದು ಸುತ್ತಿನ ವಿಚಾರಣೆಗೆ ಅವರನ್ನು ಬಂಧಿಸಲಾಗಿದ್ದು, ಆರೋಗ್ಯ ತಪಾಸಣೆಯ ಬಳಿಕ ಅವರನ್ನು ಕೊಲ್ಕತಾ ವಿಶೇಷ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಪ್ರಕರಣ ನಡೆಯುವ ವೇಳೆ ಮಿರ್ಜಾ ಬುಧ್ರ್ವಾನ್‌ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನೈಜೀರಿಯಾಕ್ಕೆ ತೆರಳಲಿದ್ದಾರೆ ಐಜಿಪಿ ರೂಪಾ

2016ರ ಬಂಗಾಳ ಚುನಾವಣೆ ವೇಳೆ ತೃಣಮೂಲ ಕಾಂಗ್ರೆಸ್‌ ನಾಯಕರು ಹಾಗೂ ಅಧಿಕಾರಿಗಳು ಕೆಲಸ ಮಾಡಿಸಿಕೊಡಲು ಲಂಚ ಪಡೆದುಕೊಳ್ಳುತ್ತಾರೆ ಎಂದು ಆರೋಪಿಸಿ ನಾರದಾ ನ್ಯೂಸ್‌ ಪೋರ್ಟಲ್‌ನ ಮ್ಯಾಥ್ಯೂ ಸ್ಯಾಮುವೆಲ್ಸ್‌ ಎಂಬಾತ ರಹಸ್ಯ ಕಾರ್ಯಾಚರಣೆ ಮಾಡಿದ್ದ. ಭಾರಿ ವಿವಾದಕ್ಕೆ ಕಾರಣವಾಗಿದ್ದ ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲಾಗಿತ್ತು.