ಬಂಗಾಳದ ನಾರ್ಥ್ 24 ಪರ್ಗಣಾಸ್ ಜಿಲ್ಲೆಯಲ್ಲಿ ಮೂರು ದಿನಗಳಿಂದ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿದೆ. ಪ್ರವಾದಿ ಮೊಹಮ್ಮದ್ ಬಗ್ಗೆ ಯುವಕನೊಬ್ಬ ಫೇಸ್ಬುಕ್'ನಲ್ಲಿ ಕೆಟ್ಟದಾಗಿ ಕಮೆಂಟ್ ಹಾಕಿದ್ದ. ಪೊಲೀಸರು ಆತನನ್ನು ಬಂಧಿಸಿದರಾದರೂ ಗಲಭೆಗಳಿಗೆ ಅದು ಪ್ರಚೋದನೆ ನೀಡುವುದನ್ನು ತಪ್ಪಿಸಲಾಗಲಿಲ್ಲ.

ಕೋಲ್ಕತಾ(ಜುಲೈ 06): ಬಂಗಾಳ ಕೋಮುಗಲಭೆ ಘಟನೆಗಳಿಗೆ ಇಂದು ಓರ್ವ ವ್ಯಕ್ತಿ ಬಲಿಯಾಗಿದ್ದಾನೆ. ಮೊನ್ನೆ ಬಸೀರ್'ಹತ್'ನಲ್ಲಿ ಗಂಭೀರವಾಗಿ ಗಾಯಗೊಂಡು ಕೋಲ್ಕತಾದ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದ 45 ವರ್ಷದ ಕಾರ್ತಿಕ್ ಘೋಷ್ ಇಂದು ಮೃತಪಟ್ಟಿದ್ದಾನೆ. ಗಾಯಾಳುವನ್ನು ನೋಡಲು ಹೋಗಿದ್ದ ಬಿಜೆಪಿ ನಾಯಕ ಲಾಕೆಟ್ ಚಟರ್ಜಿ ಅವರನ್ನು ಟಿಎಂಸಿ ಪಕ್ಷದ ಕಾರ್ಯಕರ್ತರು ಹೊರದಬ್ಬಿ ಕಳುಹಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಸರಕಾರದ ಆಡಳಿತ ಸಂಪೂರ್ಣ ವೈಫಲ್ಯವಾಗಿದೆ ಎಂದು ಬಿಜೆಪಿ ನಾಯಕ ಕೈಲಾಷ್ ವಿಜಯವರ್ಗೀವಾ ಟೀಕಿಸಿದ್ದಾರೆ.

ಏನಿದು ಪ್ರಕರಣ?
ಬಂಗಾಳದ ನಾರ್ಥ್ 24 ಪರ್ಗಣಾಸ್ ಜಿಲ್ಲೆಯಲ್ಲಿ ಮೂರು ದಿನಗಳಿಂದ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿದೆ. ಪ್ರವಾದಿ ಮೊಹಮ್ಮದ್ ಬಗ್ಗೆ ಯುವಕನೊಬ್ಬ ಫೇಸ್ಬುಕ್'ನಲ್ಲಿ ಕೆಟ್ಟದಾಗಿ ಕಮೆಂಟ್ ಹಾಕಿದ್ದ. ಪೊಲೀಸರು ಆತನನ್ನು ಬಂಧಿಸಿದರಾದರೂ ಗಲಭೆಗಳಿಗೆ ಅದು ಪ್ರಚೋದನೆ ನೀಡುವುದನ್ನು ತಪ್ಪಿಸಲಾಗಲಿಲ್ಲ. ಬದೂರಿಯಾ, ಬಸಿರ್'ಹತ್, ಹರೋವಾ, ಸ್ವರೂಪ್'ನಗರ್, ದೇಗಂಗಾ ಮೊದಲಾದ ಸ್ಥಳಗಳಲ್ಲಿ ಮಂಗಳವಾರ ಕೋಮುಗಲಭೆಗಳಾದವು. ದುಷ್ಕರ್ಮಿಗಳು ಹಲವು ಕಡೆ ಬಾಂಬ್'ಗಳನ್ನು ಸ್ಫೋಟಿಸಿದರು, ಸಾಕಷ್ಟು ವಾಹನಗಳನ್ನು ಸುಟ್ಟುಹಾಕಿದರು. ಗಲಭೆಗಳನ್ನು ನಿಯಂತ್ರಿಸಲು ಕೇಂದ್ರ ಸರಕಾರ ಸದ್ಯಕ್ಕೆ 400 ಬಿಎಸ್'ಎಫ್ ಸಿಬ್ಬಂದಿಯನ್ನು ಕಳುಹಿಸಿದೆ.