ಯಾರನ್ನೂ  ಮುಗಿಸಿ ರಾಜಕಾರಣ ಮಾಡುವ ಅಗತ್ಯ ನನಗಿಲ್ಲ; ಹಾಲಪ್ಪಗೆ ಟಾಂಗ್ ಕೊಟ್ಟ ಬೇಳೂರು

First Published 7, Apr 2018, 11:58 AM IST
Beluru Gopalakrishma Slams Halappa
Highlights

ಸಾಗರ ಬಿಜೆಪಿ ಟಿಕೆಟ್ ಹಂಚಿಕೆ ಗೊಂದಲ ವಿಚಾರವಾಗಿ ಬೇಳೂರು ಗೋಪಾಲಕೃಷ್ಣ ಹೇಳಿಕೆ ನೀಡಿದ್ದಾರೆ. 

ಶಿವಮೊಗ್ಗ (ಏ. 07): ಸಾಗರ ಬಿಜೆಪಿ ಟಿಕೆಟ್ ಹಂಚಿಕೆ ಗೊಂದಲ ವಿಚಾರವಾಗಿ ಬೇಳೂರು ಗೋಪಾಲಕೃಷ್ಣ ಹೇಳಿಕೆ ನೀಡಿದ್ದಾರೆ. 

ನಾನು ಯಾರ ನಗುವನ್ನು ಕಿತ್ತುಕೊಂಡಿಲ್ಲ.  ಅವರ ನಗುವನ್ನು ಅವರೇ ಕಿತ್ತುಕೊಂಡಿದ್ದಾರೆ.  ನಾನು ಸಿಗಂದೂರು ಪ್ರಸಾದ ಸ್ವೀಕರಿಸಿ ಆಣೆ ಮಾಡಲು ಸಿದ್ದ.  ಯಾರನ್ನೂ  ಮುಗಿಸಿ ರಾಜಕಾರಣ ಮಾಡುವ ಅಗತ್ಯ ನನಗಿಲ್ಲ.  ಬೇಳೂರಿಗೆ ತನ್ನದೆ ಆದ ಶಕ್ತಿ ಇದೆ.  ಯಾರೋ ಆರೋಪ ಮಾಡಿದ್ರೆ ನಾ ಉತ್ತರಿಸಬೇಕಿಲ್ಲ ಎಂದು ಹಾಲಪ್ಪ ಹೆಸರೆತ್ತದೆ ಪರೋಕ್ಷವಾಗಿ ಬೇಳೂರು ಗೋಪಾಲಕೃಷ್ಣ ಟಾಂಗ್ ನೀಡಿದ್ದಾರೆ. 

ಎಲ್ಲಾ ಪ್ರಶ್ನೆಗಳಿಗೆ ಜನ ಉತ್ತರಿಸುತ್ತಾರೆ. ನನ್ನ ಕ್ಷೇತ್ರದಲ್ಲಿ ನಾ ಟಿಕೆಟ್ ಕೇಳೊದು ನನ್ನ ಹಕ್ಕು.  ಪಕ್ಷದ ತಿರ್ಮಾನಕ್ಕೆ ನಾನು ಬದ್ಧವಾಗಿದ್ದೇನೆ.  ನಾನು ದೆಹಲಿಗೆ ಹೋಗಿದ್ದು ಟಿಕೆಟ್ ಕೇಳಲು ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 
 

loader