ಬಿಜೆಪಿ ಮುಖಂಡ ಶಿವನಗೊಡ ಪಾಟೀಲ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ತುರಕರಶೀಗಿಹಳ್ಳಿ ಗ್ರಾಮದ ನಿವಾಸಿ. ಎಂದಿನಂತೆ ಗ್ರಾಮದ ದೇವಸ್ಥಾನಕ್ಕೆ ಹೋದ ಆತ ಅಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದಾನೆ. ಗ್ರಾಮದ ಗಿರಿಮಲ್ಲೇಶ್ವರ  ದೇವಾಲಯದ ಗರ್ಭ ಗುಡಿಯಲ್ಲಿ ತನ್ನದೇ ಲೈಸನ್ಸ್‌ ರಿವಾಲ್ವರ್‌'ನಿಂದ ಹಣೆಗೆ ಗುಂಡು ಹಾರಿಸಿಕೊಂಡಿದ್ದಾನೆ. ಗುಂಡಿನ ಶಬ್ಧ ಕೇಳಿಸುತ್ತಿದಂತೆ ದೇವಾಲಯದ ಪೂಜಾರಿಗಳು, ಗ್ರಾಮದ ಜನರು ಸ್ಥಳಕ್ಕೆ ಬಂದು ನೋಡಿದಾಗ ದೇವಾಲಯದ ಗರ್ಭಗುಡಿಯಲ್ಲಿ  ಶಿವನಗೌಡನ ಉಸಿರು ನಿಂತುಹೋಗಿತ್ತು.

ಬೆಂಗಳೂರು(ಜು.19): ಬಿಜೆಪಿ ಮುಖಂಡ ಶಿವನಗೊಡ ಪಾಟೀಲ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ತುರಕರಶೀಗಿಹಳ್ಳಿ ಗ್ರಾಮದ ನಿವಾಸಿ. ಎಂದಿನಂತೆ ಗ್ರಾಮದ ದೇವಸ್ಥಾನಕ್ಕೆ ಹೋದ ಆತ ಅಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದಾನೆ. ಗ್ರಾಮದ ಗಿರಿಮಲ್ಲೇಶ್ವರ ದೇವಾಲಯದ ಗರ್ಭ ಗುಡಿಯಲ್ಲಿ ತನ್ನದೇ ಲೈಸನ್ಸ್‌ ರಿವಾಲ್ವರ್‌'ನಿಂದ ಹಣೆಗೆ ಗುಂಡು ಹಾರಿಸಿಕೊಂಡಿದ್ದಾನೆ. ಗುಂಡಿನ ಶಬ್ಧ ಕೇಳಿಸುತ್ತಿದಂತೆ ದೇವಾಲಯದ ಪೂಜಾರಿಗಳು, ಗ್ರಾಮದ ಜನರು ಸ್ಥಳಕ್ಕೆ ಬಂದು ನೋಡಿದಾಗ ದೇವಾಲಯದ ಗರ್ಭಗುಡಿಯಲ್ಲಿ ಶಿವನಗೌಡನ ಉಸಿರು ನಿಂತುಹೋಗಿತ್ತು.

ಕಿತ್ತೂರು ತಾಲೂಕಿನಲ್ಲಿ ಶಿವನಗೌಡ ಪಾಟೀಲ ಬಿಜೆಪಿಯ ಸಕ್ರಿಯ ಮುಖಂಡ. ಬಿಜೆಪಿ ಬ್ಲಾಕ್‌ನ ಉಪಾಧ್ಯಕ್ಷರಾಗಿ ಪಕ್ಷ ಸಂಘಟಿಸಿದ್ದರು. ನಾಲ್ವರು ಹೆಣ್ಣು ಮಕ್ಕಳು ಹಾಗೂ ಪತ್ನಿ ಇದ್ದಾರೆ. ನಾಲ್ಕು ಎಕರೆ ಜಮೀನು ಹೊಂದಿದ್ದ ಈತ, ಮೈ ತುಂಬ ಸಾಲ ಮಾಡಿಕೊಂಡಿದ್ದ ಎನ್ನಲಾಗಿದೆ ಸಾಲಬಾಧೆಯಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಸ್ಥಳಕ್ಕೆ ಎಸ್ಪಿ ರವಿಕಾಂತೇಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಒಟ್ಟ್ನಲ್ಲಿ ಸಾಲದಬಾಧೆಗೆ ಹೆದರಿ ಬಿಜೆಪಿ ಮುಖಂಡನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದು ದುರಂತವೇ ಸರಿ. ನಾಲ್ಕು ಜನರಿಗೆ ಧ್ವನಿಯಾಗಬೇಕಿದ್ದ ಕೇಸರಿ ಮುಖಂಡನ ಆತ್ಮಹತ್ಯೆ ನಿರ್ಧಾರ ಆತನ ಕುಟುಂಬವನ್ನ ಅನಾಥಗೊಳಿಸಿದೆ.