ಬೆಳಗಾವಿ[ಫೆ.17] ದೇಶದ್ರೋಹದ ಪೋಸ್ಟ್ ಹಿನ್ನೆಲೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುರಗೋಡ ಹೋಬಳಿ ಬಂದ ಕರೆ ನೀಡಲಾಗಿದೆ. ಸಾರ್ವಜನಿಕರು ಶಿಕ್ಷಕಿ ಜುಬೇರಾ ಕ್ರಮ ಖಂಡಿಸಿ ಬಂದ್‌ಗೆ ಕರೆ ನೀಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಶಿಕ್ಷಕಿ ಪಾಕಿಸ್ತಾನ ಜಿಂದಾಬಾದ್ ಎಂಬ ಪೋಸ್ಟ್ ಹಾಕಿದ್ದಳು. ಇದಾದ ಮೇಲೆ ಗ್ರಾಮಸ್ಥರು ಆಕೆಯ ಮನೆಗೆ ಬೆಂಕಿ ಹಾಕುವ ಯತ್ನ ಮಾಡಿದ್ದರು. ಈ ವೇಳೆ ಪೊಲೀಸರು ನಾಲ್ವರನ್ನು ಬಂಧಿಸಿದ್ದರು.

ಪಾಕಿಸ್ತಾನ ಜಿಂದಾಬಾದ್ ಎಂದ ಶಿಕ್ಷಕಿ ಯಾರು?

ಬಂಧಿಸಿದ ಯುವಕರನ್ನು ಬಿಡುಗಡೆ ಮಾಡಬೇಕು. ದೇಶದ್ರೋಹದ ಪೋಸ್ಟ್ ಹಾಕಿದ ಯುವತಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಬಂದ್ ಹಿನ್ನೆಲೆಯಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದ್ದು 2 ಡಿ ಆರ್, ವಾಹನ, ಎರಡು ಡಿ ಎಸ್ ಪಿ, ನಾಲ್ಕು ಪಿ ಎಸ್ ಐ, 100ಕ್ಕೂ ಹೆಚ್ಚು ಕೆ ಎಸ್ ಆರ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.  ಮುರಗೋಡ ಬಸ್ ಸ್ಟ್ಯಾಂಡ್ ಸರ್ಕಲ್ ನಲ್ಲಿ ಗ್ರಾಮಸ್ಥರು ಧಿಕ್ಕಾರ ಕೂಗುತ್ತಿದ್ದಾರೆ.