ಚಳಿಗಾಲದ ಅಧಿವೇಶನದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯಲು ವಿರೋಧ ಪಕ್ಷ ಬಿಜೆಪಿ ಹಲವು ರಣತಂತ್ರ ರಚಿಸಿದೆ. ನಾಲ್ಕಾರು ಪ್ರಮುಖ ವಿಚಾರಗಳನ್ನ ಮುಂದಿಟ್ಟುಕೊಂಡಿ 10 ದಿನಗಳ ಕಾಲ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ತಯಾರಿ ನಡೆಸಿದೆ. ಈ ಬತ್ತಳಿಕೆಯ ಮೊದಲಿನ ವಿಷಯವೇ ಮಹದಾಯಿ ಯೋಜನೆ. ಇತ್ತೀಚೆಗೆ ಗೋವಾ ಸಿಎಂ ಸಭೆ ಕರೆಯುವ ವಿಚಾರ ಹಾಗೂ ಸಿಎಂ ಸಿದ್ರಾಮಯ್ಯ ನಿಲುವು ಹೆಚ್ಚು ಕೇಳಿ ಬರಲಿದೆ. ಆಮೇಲೆ ಸಂಘ ಪರಿವಾರ ಹಾಗೂ ಬಿಜೆಪಿ ಮುಖಂಡರ ಸರಣಿ ಹತ್ಯೆ. ಇತ್ತೀಚಿನ ಶಿವಾಜಿನಗರದ ರುದ್ರೇಶ್ ಹತ್ಯೆ ಪ್ರಮುಖವಾಗಿ ಕೇಳಿ ಬರಲಿದೆ. ಅದೇ ರೀತಿ ಕಬ್ಬು ಬೆಳೆಗಾರರಿಗೆ ಬಾಕಿ ಇರುವ ಹಣ ಬಿಡುಗಡೆ ಹಾಗೂ ಟಿಪ್ಪು ಜಯಂತಿ ಕಾರ್ಯಕ್ರಮದ ವೇದಿಕೆ ಮೇಲೆ ಶಿಕ್ಷಣ ಸಚಿವ ತನ್ವೀರ್ ಸೇಠ್​ ಅಶ್ಲೀಲ ಚಿತ್ರ ವೀಕ್ಷಣೆ ಕೂಡ ಬಿಜೆಪಿ ಬತ್ತಳಿಕೆಯಲ್ಲಿರೋ ಪ್ರಮುಖ ಅಂಶಗಳು.

ಬೆಳಗಾವಿ(ನ.20): ನಾಳೆಯಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಶುರುವಾಗಲಿದೆ. ಡಿಸೆಂಬರ್ 2ರ ತನಕ ನಡೆಯಲಿರುವ ಹತ್ತು ದಿನಗಳ ಕಾಲ ಪ್ರಮುಖ ವಿಚಾರಗಳ ಚರ್ಚೆ ನಡೆಯಲಿದೆ. ಮೊದಲ ದಿನವಾದ ನಾಳೆಯೇ ರಾಜ್ಯವನ್ನ ಕಾಡುತ್ತಿರೋ ಬರಗಾಲ ವಿಚಾರ ಪ್ರಮುಖವಾಗಿ ಸದ್ದು ಮಾಡಲಿದೆ. ಸದನದ ಒಳಗೆ ಪ್ರತಿಪಕ್ಷ ಬಿಜೆಪಿ ರಾಜ್ಯ ಸರ್ಕಾರದ ವಿರುದ್ಧ ಮುಗಿಬೀಳಲು ಸಿದ್ಧತೆ ಮಾಡಿಕೊಂಡಿದೆ. ಬರಗಾಲ ಪರಿಹಾರ ಕಾಮಗಾರಿಯಲ್ಲಿ ಸರ್ಕಾರದ ವೈಫಲ್ಯ ವಿಚಾರವಾಗಿ ನಿಲುವಳಿ ಸೂಚನೆ ಮಂಡಿಸಿ ಚರ್ಚೆಗೆ ಮುಂದಾಗಲು ರಣತಂತ್ರ ರೂಪಿಸಿದೆ. ಈ ಬಗ್ಗೆ ಇವತ್ತು ಹುಬ್ಬಳ್ಳಿಯಲ್ಲಿ ಮಾತಾಡಿದ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್​, ರೈತರ ಸಾಲಮನ್ನಾ ಮಾಡುವಂತೆ ಸರ್ಕಾರವನ್ನು ಒತ್ತಾಯಿಸುವುದಾಗಿ ಹೇಳಿದ್ದಾರೆ.

ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ವಿಪಕ್ಷಗಳು ಸಜ್ಜು: ಚಳಿಗಾಲದ ಅಧಿವೇಶನದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯಲು ವಿರೋಧ ಪಕ್ಷ ಬಿಜೆಪಿ ಹಲವು ರಣತಂತ್ರ ರಚಿಸಿದೆ. ನಾಲ್ಕಾರು ಪ್ರಮುಖ ವಿಚಾರಗಳನ್ನ ಮುಂದಿಟ್ಟುಕೊಂಡಿ 10 ದಿನಗಳ ಕಾಲ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ತಯಾರಿ ನಡೆಸಿದೆ. ಈ ಬತ್ತಳಿಕೆಯ ಮೊದಲಿನ ವಿಷಯವೇ ಮಹದಾಯಿ ಯೋಜನೆ. ಇತ್ತೀಚೆಗೆ ಗೋವಾ ಸಿಎಂ ಸಭೆ ಕರೆಯುವ ವಿಚಾರ ಹಾಗೂ ಸಿಎಂ ಸಿದ್ರಾಮಯ್ಯ ನಿಲುವು ಹೆಚ್ಚು ಕೇಳಿ ಬರಲಿದೆ. ಆಮೇಲೆ ಸಂಘ ಪರಿವಾರ ಹಾಗೂ ಬಿಜೆಪಿ ಮುಖಂಡರ ಸರಣಿ ಹತ್ಯೆ. ಇತ್ತೀಚಿನ ಶಿವಾಜಿನಗರದ ರುದ್ರೇಶ್ ಹತ್ಯೆ ಪ್ರಮುಖವಾಗಿ ಕೇಳಿ ಬರಲಿದೆ. ಅದೇ ರೀತಿ ಕಬ್ಬು ಬೆಳೆಗಾರರಿಗೆ ಬಾಕಿ ಇರುವ ಹಣ ಬಿಡುಗಡೆ ಹಾಗೂ ಟಿಪ್ಪು ಜಯಂತಿ ಕಾರ್ಯಕ್ರಮದ ವೇದಿಕೆ ಮೇಲೆ ಶಿಕ್ಷಣ ಸಚಿವ ತನ್ವೀರ್ ಸೇಠ್​ ಅಶ್ಲೀಲ ಚಿತ್ರ ವೀಕ್ಷಣೆ ಕೂಡ ಬಿಜೆಪಿ ಬತ್ತಳಿಕೆಯಲ್ಲಿರೋ ಪ್ರಮುಖ ಅಂಶಗಳು.

 ಶಿಕ್ಷಣ ಸಚಿವ ತನ್ವೀರ್ ಸೇಠ್‍ರಿಂದ ರಾಜೀನಾಮೆ ಪಡೆಯಲ್ಲ. ಉದ್ದೇಶಪೂರ್ವವಾಗಿ ಅವರು ಆಶ್ಲೀಲ ದೃಶ್ಯಗಳನ್ನು ನೋಡಿಲ್ಲವೆಂದು ಮತ್ತೊಮ್ಮೆ ಸಚಿವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ತನ್ವೀರ್ ಸೇಠ್ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಈಗಾಗಲೇ ಕ್ರೈಂ ಬ್ರಾಂಚ್ ತನಿಖೆ ನಡೆಸಿದೆ. ಅದರ ವರದಿ ನನಗೆ ತಲುಪಿಲ್ಲ. ಬಿಜೆಪಿಯವರು ಉದ್ದೇಶವಾಗಿಯೇ ಅಶ್ಲೀಲ ವಿಡಿಯೋಗಳನ್ನು ನೋಡಿದ್ದಾರೆ. ಆದರೆ ತನ್ವೀರ್ ಸೇಠ್ ಮೊಬೈಲ್ ನೋಡುವಾಗ ಆಕಸ್ಮಿಕವಾಗಿ ನೋಡಿದ್ದಾರೆ. ಹೀಗಾಗಿ ಅವರ ರಾಜೀನಾಮೆ ಪಡೆಯುವುದಿಲ್ಲವೆಂದು ಅವರು ಹೇಳಿದ್ದಾರೆ.