'ಚುನಾವಣಾ ತಯಾರಿ ಸೂರ್ಯ-ಚಂದ್ರರಿರುವ ತನಕ ಬೆಳಗಾವಿ ರಾಜ್ಯದ ಅಂಗ' 

ಬೆಳಗಾವಿ: ಮೊರಾರ್ಜಿ ದೇಸಾಯಿ ಅವರು ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿದ್ದಾಗಲೇ ಬೆಳಗಾವಿ ಗಡಿ ವಿಷಯ ಮುಗಿದುಹೋಗಿದ್ದು, ಎಂಇಎಸ್ ವಿನಾಕಾರಣ ತಗಾದೆ ತೆಗೆಯುವುದು ಸರಿಯಲ್ಲ ಎಂದು ಜೆಡಿಎಸ್ ವರಿಷ್ಠರಾಗಿರುವ ಎಚ್.ಡಿ. ದೇವೇಗೌಡ ಗುಡುಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಜೆಡಿಎಸ್ ಆಯೋಜಿಸಿದ್ದ ಉತ್ತರ ಕರ್ನಾಟಕ ಸ್ವಾಭಿಮಾನಿ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದ ಅವರು, ಬೆಳಗಾವಿ ಸೂರ್ಯಚಂದ್ರರಿರುವ ತನಕವೂ ಕರ್ನಾಟಕದ ಅವಿಭಾಜ್ಯ ಅಂಗ ಎಂದರು.

ಬೆಳಗಾವಿಗೆ ಪ್ರಧಾನಿ ಸೇರಿದಂತೆ ಬಿಜೆಪಿ ನಾಯಕರು ಆಗಮಿಸಿ ದೊಡ್ಡ ದೊಡ್ಡ ಸಮಾವೇಶಗಳನ್ನು ಆಯೋಜಿಸಿ ಭಾಷಣ ಮಾಡಿ ಹೋಗುತ್ತಾರೆ ಅಷ್ಟೆ. ಅವರೆಲ್ಲ ಮಹದಾಯಿ ಬಗ್ಗೆ ಮಾತನಾಡುವುದಿಲ್ಲ. ಕೇಂದ್ರ ಸರ್ಕಾರ ಮನಸು ಮಾಡಿದರೆ ಮಹದಾಯಿಯನ್ನು ಇತ್ಯರ್ಥಪಡಿಸಬಹುದು. ಆದರೆ ಅದು ಮನಸು ಮಾಡುತ್ತಿಲ್ಲ ಎಂದರು.

ಕೆಜೆಪಿಯಲ್ಲಿದ್ದಾಗ ಬಿಎಸ್‌ವೈ ಮಾತಾಡಿದ ವಿಡಿಯೋ ಪ್ರದರ್ಶನ: ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರ ಬೀಳಲು ಬಿಜೆಪಿಯವರೇ ಕಾರಣ ಎಂದು ಯಡಿಯೂರಪ್ಪ ಹೇಳಿದ್ದ ವೀಡಿಯೋ ಕ್ಲಿಪ್ಪಿಂಗ್ ಅನ್ನು ಕುಮಾರಸ್ವಾಮಿ ಪ್ರದರ್ಶಿಸಿದರು.

ಜೆಡಿಎಸ್- ಬಿಜೆಪಿ ಸಮಿಶ್ರ ಸರ್ಕಾರದ ಅವಧಿಯ ನಂತರ ಬಿಜೆಪಿ ಅಧಿಕಾರ ನೀಡಿಲ್ಲ ಎಂದು ರಾಜ್ಯದ ಜನರು ತಪ್ಪು ತಿಳಿದುಕೊಂಡು ನಮಗೆ ಶಿಕ್ಷೆ ನೀಡಿದ್ದೀರಿ ಎಂದರು.