ಬೆಳಗಾವಿ (ನ.23): ಬೆಳಗಾವಿ ಮಹಾರಾಷ್ಟ್ರದ ಅವಿಭಾಜ್ಯ ಅಂಗ.  ಬೆಳಗಾವಿ ಕರ್ನಾಟಕದ ಆಕ್ರಮಿತ ಪ್ರದೇಶವಾಗಿದೆ ಎಂದು  ಶಿವಸೇನಾ ಮುಖ್ಯಸ್ಥ ಉದ್ಧವ್​ ಠಾಕ್ರೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.   

ಬೆಳಗಾವಿಯನ್ನು ಮರಳಿ ಪಡೆಯಲು ಹೋರಾಟ ನಡೆಯುತ್ತಿದೆ. ಮಹಾರಾಷ್ಟ್ರ ಶಾಸಕರು, ಸಂಸದರಿಗೆ ಈ ಜವಾಬ್ದಾರಿ ಇದೆ ಎಂದು ಬೆಳಗಾವಿ ಗಡಿಯ ಶಿನ್ನೋಳಿ ಗ್ರಾಮದಲ್ಲಿ ಉದ್ಧವ್​ ಠಾಕ್ರೆ ವಿವಾದಾತ್ಮಕ ಮಾತುಗಳನ್ನಾಡಿದ್ದಾರೆ. ಶಿವಸೇನ ವಚನವಿದು. ಇದು ಮರಾಠಿಯ ಭೂಭಾಗ. ಇದನ್ನು ಮಹಾರಾಷ್ಟ್ರಕ್ಕೆ ಸೇರಿಸುತ್ತೇನೆ. ನಿಮ್ಮ ಸಮಸ್ಯೆಗಳಿಗೆ ಶಿವಸೇನೆ ಉತ್ತರಿಸುತ್ತದೆ ಎಂದು  ಉದ್ಧವ್​ ಠಾಕ್ರೆ ಹೇಳಿದ್ದಾರೆ.