ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕೀಹೊಳಿ ಕ್ಷೇತ್ರದ ಜನರಿಗೆ ಅವಾಚ್ಯ ಶಬ್ದದಿಂದ ಬೈದಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬೆಳಗಾವಿ (ಸೆ.25): ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕೀಹೊಳಿ ಕ್ಷೇತ್ರದ ಜನರಿಗೆ ಅವಾಚ್ಯ ಶಬ್ದದಿಂದ ಬೈದಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಗೋಕಾಕ ತಾಲೂಕಿನ ಮೂಡಲಗಿ ಪಟ್ಟಣವನ್ನು ತಾಲೂಕು ದರ್ಜೆಯಿಂದ ಕೈ ಬಿಟ್ಟ ಹಿನ್ನಲೆಯಲ್ಲಿ ನಮ್ಮ ಊರು ತಾಲೂಕ ಆಗಿದ್ದನ್ನು ಯಾಕೆ ಕೈ ಬಿಟ್ಟಿದ್ದಿರಿ ಎಂದು ಕೇಳಿದ ಮೂಡಲಗಿ ಗ್ರಾಮದ ಯುವಕನೊಬ್ಬ ಸಚಿವರನ್ನು ಪ್ರಶ್ನಿಸಿದ್ದಾನೆ.
ಯುವಕನ ಪ್ರಶ್ನೆಗೆ ಸಮಾಧಾನವಾಗಿ ಉತ್ತರ ಕೊಡುವ ಬದಲು ಬೈಗುಳ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೋಳಿ ಉತ್ತರ ನೀಡಿದ್ದಾರೆ. ಸಚಿವರ ಬೈದ ಆಡಿಯೋ ಸಾಮಾಜಿಕ ಜಾಲತಾನದಲ್ಲಿ ವೈರಲ್ ಆಗಿದೆ.
