ಭಾರತ-ಚೀನಾ-ಪಾಕ್ ಸಹಕಾರದ ಪರಿಕಲ್ಪನೆ ಚೀನಾ ಹಿಂದೇಟುಸಹಕಾರದ ಪರಿಕಲ್ಪನೆಯನ್ನು ಪ್ರಸ್ತಾಪಿಸಿದ್ದ ಚೀನಾ ರಾಯಭಾರಿ ಕಚೇರಿ ಭಾರತದಲ್ಲಿರುವ ಚೀನಾದ ರಾಯಭಾರಿ ಕಚೇರಿ ಅಧಿಕಾರಿ ಹೇಳಿಕೆಸಹಕಾರದಲ್ಲಿ ಕೇವಲ ಭಾರತ-ಪಾಕ್ ಹೆಸರು ಪ್ರಸ್ತಾಪ

ಬೀಜಿಂಗ್(ಜೂ.20): ಭಾರತ-ಚೀನಾ-ಪಾಕ್ ತ್ರಿಪಕ್ಷೀಯ ಸಹಕಾರದ ಪರಿಕಲ್ಪನೆಯನ್ನು ಪ್ರಸ್ತಾಪಿಸಿದ್ದ ಚೀನಾದ ರಾಯಭಾರಿ ಕಚೇರಿ ಅಧಿಕಾರಿಯ ಹೇಳಿಕೆಯಿಂದ ಸ್ವತಃ ಚೀನಾ ಸರ್ಕಾರ ಅಂತರ ಕಾಯ್ದುಕೊಂಡಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಶಾಂಘೈ ಸಹಕಾರ ಒಕ್ಕೂಟದ ಅಡಿಯಲ್ಲಿ ತ್ರಿಪಕ್ಷೀಯ ಸಹಕಾರದ ಕುರಿತು ಭಾರತದಲ್ಲಿರುವ ಚೀನಾದ ರಾಯಭಾರಿ ಕಚೇರಿ ಅಧಿಕಾರಿ ಹೇಳಿಕೆ ನೀಡಿದ್ದರು. ಈ ಬಗ್ಗೆ ಚೀನಾ ಅಂತರ ಕಾಯ್ದುಕೊಂಡಿದ್ದರೂ ಭಾರತ-ಪಾಕಿಸ್ತಾನದ ನಡುವೆ ಮಾತುಕತೆಯನ್ನು ಬಲಪಡಿಸುವುದು ಮುಖ್ಯವಾಗಿದೆ, ಇದರಿಂದಾಗಿ ಉಭಯ ರಾಷ್ಟ್ರಗಳ ಹಿತಾಸಕ್ತಿಗಳೂ ಸುಧಾರಣೆಯಾಗಲಿವೆ ಎಂದು ಹೇಳಿದೆ. 

ಭಾರತ-ಪಾಕಿಸ್ತಾನದ ನಡುವೆ ಶಾಂತಿ ಮೂಡಿಸಲು ಶಾಂಘೈ ಸಹಕಾರ ಒಕ್ಕೂಟದ ಅಡಿಯಲ್ಲಿ ಭಾರತ-ಚೀನಾ-ಪಾಕ್ ತ್ರಿಪಕ್ಷೀಯ ಸಹಕಾರದ ಅಗತ್ಯವಿದೆ ಎಂದು ಚೀನಾ ರಾಯಭಾರಿ ಕಚೇರಿ ಅಧಿಕಾರಿ ಜೂ.18 ರಂದು ಹೇಳಿದ್ದರು. 

ಭಾರತ, ಪಾಕಿಸ್ತಾನ ಎರಡೂ ಚೀನಾದ ಮಿತ್ರ ರಾಷ್ಟ್ರಗಳು, ಮಿತ್ರರಾಷ್ಟ್ರಗಳ ನಡುವೆ ಉತ್ತಮ, ಸೌಹಾರ್ದಯುತ ವಾತಾವರಣವನ್ನುಂಟುಮಾಡಲು ಚೀನಾ ಬಯಸುತ್ತಿದೆ, ಈ ಮೂಲಕ ಪ್ರಾದೇಶಿಕವಾಗಿ ಸ್ಥಿರತೆ ಸಾಧ್ಯವಿದೆ ಎಂದು ಚೀನಾ ರಾಯಭಾರಿ ಕಚೇರಿ ಅಧಿಕಾರಿಗಳು ಹೇಳಿದ್ದರು.