ಟ್ಯಾಂಕರ್'ಗಳಿಂದ ಬಂಕ್'ಗಳಿಗೆ ಇಂಧನ ಹಾಕುವಾಗ ಆ್ಯಂಬುಲೆನ್ಸ್ ರೀತಿಯ ತುರ್ತು ಸೇವೆಗಳ ನಿಯೋಜನೆ ಹಾಗೂ ಒಬ್ಬ ವ್ಯಕ್ತಿ ನಿಯೋಜಿಸಲಾಗುವುದು.ಭಾನುವಾರ ಸ್ಥಗಿತಗೊಳಿಸುವುದರಿಂದ ನಷ್ಟದ ಸಮಸ್ಯೆ ಎದುರಾದರೆ ಒಕ್ಕೂಟದ ಸದಸ್ಯರು ಶೀಘ್ರದಲ್ಲೇ ಸಭೆ ಸೇರಿ ನಿರ್ಧಾರವನ್ನು ತಿಳಿಸುತ್ತೇವೆ'ಎಂದು ಕುಮಾರ್ ತಿಳಿದರು.
ಮುಂಬೈ(ಏ.18): ಪ್ರಧಾನಿ ನರೇಂದ್ರ ಮೋದಿ ತೈಲ ಸಂರಕ್ಷಣೆಗೆ ನಿರ್ದೇಶಿಸುವ ಹಿನ್ನೆಲೆಯಲ್ಲಿಭಾರತೀಯ ಪೆಟ್ರೋಲಿಯಂ ಮಾರಾಟಗಾರರ ಒಕ್ಕೂಟ ಕರ್ನಾಟಕ ಸೇರಿದಂತೆ ದೇಶದ ಒಟ್ಟು 8 ರಾಜ್ಯಗಳ ಆಯ್ದ ಪೆಟ್ರೋಲ್ ಬಂಕ್'ಗಳನ್ನು ಮೇ 14 ರಿಂದ ಪ್ರತಿ ಭಾನುವಾರ ಬಂದ್ ಮಾಡಲು ಬಂದ್ ಮಾಡಲು ನಿರ್ಧರಿಸಿದೆ.
ಕರ್ನಾಟಕ, ತಮಿಳುನಾಡು, ಕೇರಳ, ಪಾಂಡಿಚೆರಿ, ಆಂಧ್ರಪ್ರದೇಶ, ತೆಲಂಗಾಣ,ಮಹಾರಾಷ್ಟ್ರ ಹಾಗೂ ಹರ್ಯಾಣ ರಾಜ್ಯಗಳ 20 ಸಾವಿರ ಪೆಟ್ರೋಲ್ ಬಂಕ್'ಗಳನ್ನು ಬಂದ್ ಮಾಡಲಾಗುತ್ತಿದೆ ಎಂದು ಒಕ್ಕೂಟದ ಕಾರ್ಯಾಕಾರಿ ಸಮಿತಿಯ ಸದಸ್ಯ ಕುಮಾರ್ ತಿಳಿಸಿದ್ದಾರೆ.
ಟ್ಯಾಂಕರ್'ಗಳಿಂದ ಬಂಕ್'ಗಳಿಗೆ ಇಂಧನ ಹಾಕುವಾಗ ಆ್ಯಂಬುಲೆನ್ಸ್ ರೀತಿಯ ತುರ್ತು ಸೇವೆಗಳ ನಿಯೋಜನೆ ಹಾಗೂ ಒಬ್ಬ ವ್ಯಕ್ತಿ ನಿಯೋಜಿಸಲಾಗುವುದು.ಭಾನುವಾರ ಸ್ಥಗಿತಗೊಳಿಸುವುದರಿಂದ ನಷ್ಟದ ಸಮಸ್ಯೆ ಎದುರಾದರೆ ಒಕ್ಕೂಟದ ಸದಸ್ಯರು ಶೀಘ್ರದಲ್ಲೇ ಸಭೆ ಸೇರಿ ನಿರ್ಧಾರವನ್ನು ತಿಳಿಸುತ್ತೇವೆ'ಎಂದು ಕುಮಾರ್ ತಿಳಿದರು.
ಕೆಲವು ವರ್ಷಗಳ ಹಿಂದೆಯೇ ನಿರ್ಧರಿಸಲಾಗಿತ್ತು
ಕೆಲವು ವರ್ಷಗಳ ಹಿಂದೆಯೇ ಪ್ರತಿ ಭಾನುವಾರ ಬಂಕ್'ಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಿದ್ದೆವು. ಆದರೆ ತೈಲ ಮಾರುಕಟ್ಟೆ ಕಂಪನಿಗಳು ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಈ ಯೋಜನೆಯನ್ನು ಕೈಬಿಟ್ಟಿದ್ದೆವು. ಕೇವಲ ತಮಿಳುನಾಡಿನಿಂದಲೇ ಭಾನುವಾರ ಸ್ಥಗಿತಗೊಳಿಸುವುದರಿಂದ 150 ಕೋಟಿ ರೂ. ನಷ್ಟವುಂಟಾಗುತ್ತದೆ. ಪರಿಸರ ಮಾಲಿನ್ಯ ತಡೆಗಟ್ಟುವ ಕಾರಣಕ್ಕಾಗಿ ಇತ್ತೀಚಿಗಷ್ಟೆ ಪ್ರಧಾನಿ ನರೇಂದ್ರ ಮೋದಿ ಅವರು 'ಮನ್ ಕೀ ಬಾತ್' ಕಾರ್ಯಕ್ರಮದಲ್ಲಿ ಕರೆಕೊಟ್ಟ ಹಿನ್ನಲೆಯಲ್ಲಿ ನಿರ್ಧರಿಸಲಾಗುತ್ತಿದೆ.