ಎಂಬಿಎ ಪದವಿ ಪಡೆದ, ವಿದೇಶದ ಕ್ರೆಡಿಟ್ ಕಾರ್ಡ್‌ಗಳನ್ನು ಹೊಂದಿದ್ದ ಭಿಕ್ಷುಕರು ಇತ್ತೀಚೆಗೆ ಹೈದರಾಬಾದ್‌ನಲ್ಲಿ ಸಿಕ್ಕಿಬಿದ್ದಿದ್ದರು. ಆದರೆ ಇದೀಗ ವ್ಯಾಪಾರಿಗಳಿಗೇ ಸಾಲ ನೀಡುವ ಭಿಕ್ಷುಕರು ಹೈದರಾಬಾದ್‌ನಲ್ಲಿ ಪತ್ತೆಯಾಗಿದ್ದಾರೆ.

ಹೈದರಾಬಾದ್: ಎಂಬಿಎ ಪದವಿ ಪಡೆದ, ವಿದೇಶದ ಕ್ರೆಡಿಟ್ ಕಾರ್ಡ್‌ಗಳನ್ನು ಹೊಂದಿದ್ದ ಭಿಕ್ಷುಕರು ಇತ್ತೀಚೆಗೆ ಹೈದರಾಬಾದ್‌ನಲ್ಲಿ ಸಿಕ್ಕಿಬಿದ್ದಿದ್ದರು. ಆದರೆ ಇದೀಗ ವ್ಯಾಪಾರಿಗಳಿಗೇ ಸಾಲ ನೀಡುವ ಭಿಕ್ಷುಕರು ಹೈದರಾಬಾದ್‌ನಲ್ಲಿ ಪತ್ತೆಯಾಗಿದ್ದಾರೆ.

ನಗರದಲ್ಲಿರುವ ದೇವಸ್ಥಾನ, ಬಸ್ ನಿಲ್ದಾಣ ಸೇರಿದಂತೆ ಇತರೆಡೆಗಳಲ್ಲಿ ಭಿಕ್ಷಾಟನೆ ಮಾಡಿ ಸಂಪಾದಿಸಿದ ಹಣದಿಂದ ಭಿಕ್ಷುಕರು ಬಡ್ಡಿ ಸಂಪಾದನೆ ಮಾಡುತ್ತಿದ್ದು, ಈ ಭಿಕ್ಷುಕರು ದಿನದ ಮುಂಜಾನೆ ಅಥವಾ ದಿನದ ತಡರಾತ್ರಿ ಮಾತ್ರವೇ ದಿನದ ಬಡ್ಡಿಗೆ ಹಣ ನೀಡುತ್ತಾರೆ.

ಇಂದು ಬೆಳಗ್ಗೆ ಭಿಕ್ಷುಕರಿಂದ ಸಾಲ ಪಡೆದ ಹಣವನ್ನು ನಾಳೆ ಬೆಳಗ್ಗೆ ಬಡ್ಡಿ ಸಮೇತ ಮರು ಪಾವತಿ ಮಾಡಬೇಕು. ಈ ಭಿಕ್ಷುಕರ ಪೈಕಿ ಬಹುತೇಕ ಮಂದಿ ಫಲುಕ ನಾಮ ಪೊಲೀಸ್ ಠಾಣಾ ವ್ಯಾಪ್ತಿಯ ಕೊಳಗೇರಿ ಪ್ರದೇಶಗಳಲ್ಲಿ ವಾಸವಾಗಿದ್ದಾರೆ ಎಂದು ಪೊಲೀಸ್ ಇಲಾಖೆ ಮತ್ತು ಎನ್‌ಜಿಒ ಮೂಲಗಳು ತಿಳಿಸಿವೆ.

ಇನ್ನು ನಾಂಪಲ್ಲಿಯ ದರ್ಗಾ ಯೂಸಫೈನ್ ಶರೀಫೈನ್, ಮೆಕ್ಕಾ ಮಸೀದಿಯಿಂದ ಪಥೇರ್‌ಗಟ್ಟಿ, ಗೋಲ್ಕುಂಡಾ ದರ್ಗಾ ಸೇರಿದಂತೆ ಇತರ ಪ್ರದೇಶಗಳು ಭಿಕ್ಷುಕರ ಫೇವರೀಟ್ ಸ್ಪಾಟ್‌ಗಳಾಗಿವೆ.