ಪೋಷಕರೇ ಎಚ್ಚರ! ಭಿಕ್ಷೆ ಕೊಟ್ಟು ಮಕ್ಕಳ ಬಾಳು ಬರ್ಬಾದ್ ಮಾಡಬೇಡಿ. ಯಾಕೆಂದರೆ ನೀವು ಕೊಡುವ ಭಿಕ್ಷೆ ಒಂದು ಭಯಾನಕ ಮಾಫಿಯಾದ ಅಟ್ಟಹಾಸಕ್ಕೆ ಕಾರಣ ಆಗುತ್ತಿದೆ. ಅದು ಹೇಗೆ ಎನ್ನುವುದನ್ನು ಸುವರ್ಣ ನ್ಯೂಸ್ನ ಕವರ್ಸ್ಟೋರಿ ತಂಡ ಪತ್ತೆಹಚ್ಚಿದೆ. ಅದರ ಸಂಕ್ಷಿಪ್ತ ವರದಿ ಇಲ್ಲಿದೆ ನೋಡಿ.
ಬೆಂಗಳೂರು(ಜೂ.10): ಪೋಷಕರೇ ಎಚ್ಚರ! ಭಿಕ್ಷೆ ಕೊಟ್ಟು ಮಕ್ಕಳ ಬಾಳು ಬರ್ಬಾದ್ ಮಾಡಬೇಡಿ. ಯಾಕೆಂದರೆ ನೀವು ಕೊಡುವ ಭಿಕ್ಷೆ ಒಂದು ಭಯಾನಕ ಮಾಫಿಯಾದ ಅಟ್ಟಹಾಸಕ್ಕೆ ಕಾರಣ ಆಗುತ್ತಿದೆ. ಅದು ಹೇಗೆ ಎನ್ನುವುದನ್ನು ಸುವರ್ಣ ನ್ಯೂಸ್ನ ಕವರ್ಸ್ಟೋರಿ ತಂಡ ಪತ್ತೆಹಚ್ಚಿದೆ. ಅದರ ಸಂಕ್ಷಿಪ್ತ ವರದಿ ಇಲ್ಲಿದೆ ನೋಡಿ.
ಇಂಥಾ ಒಂದು ಎಚ್ಚರಿಕೆಯ ಸಂದೇಶವನ್ನ ನಾವಿವತ್ತು ನಿಮಗೆ ತುರ್ತಾಗಿ ನೀಡಲೇಬೇಕಾಗಿದೆ. ಯಾಕೆಂದರೆ ಕರುನಾಡಿಗೆ ಪ್ರವೇಶ ಕೊಟ್ಟಿದೆ ಒಂದು ವಿಚಿತ್ರ ಗ್ಯಾಂಗ್. ಇವರು ಪುಟ್ಟ ಮಕ್ಕಳನ್ನು ಟಾರ್ಗೆಟ್ ಮಾಡಿ, ಕಿಡ್ನಾಪ್ ಮಾಡ್ತಾರೆ. ಅಜ್ಞಾತ ಸ್ಥಳಕ್ಕೆ ಕದ್ದೊಯ್ದು ಮನಬಂದಂತೆ ಶೋಷಿಸಿ, ಮಕ್ಕಳನ್ನು ಭಿಕ್ಷಾಟನೆ ಎನ್ನುವ ನರಕ ಕೂಪಕ್ಕೆ ತಳ್ಳುತ್ತಾರೆ.
ರಂಜಾನ್ ಶುರುವಾಗಿದೆ, ಮುಂದೆ ಸಾಲು ಸಾಲು ಹಬ್ಬಗಳಿವೆ. ಈ ಹಬ್ಬದ ಲಾಭ ಪಡೆಯಲು ಈ ಗ್ಯಾಂಗ್ ರಾಜಧಾನಿ ಬೆಂಗಳೂರಿನ ಅಯಕಟ್ಟಿನ ಜಾಗ ಸೇರಿ ಮಕ್ಕಳಿಂದ ಭಿಕ್ಷೆ ಬೇಡಿಸುತ್ತಿದ್ದಾರೆ. ಈ ಭಿಕಾರಿ ಮಾಫಿಯಾದ ಬಣ್ಣ ಬಯಲು ಮಾಡಲು ಮುಂದಾದ ಕವರ್ಸ್ಟೋರಿ ತಂಡ ಭಿಕ್ಷುಕರನ್ನು ಚೇಸ್ ಮಾಡಿ ನಾನಾ ಅಡ್ಡಗಳಿಗೆ ನುಗ್ಗಿತು.
ಈ ರೀತಿ ಈ ಮಾಫಿಯಾ ಮಕ್ಕಳನ್ನ ಮುಂದಿಟ್ಟು ಭರ್ಜರಿ ಸಂಪಾದಿಸುತ್ತಿದೆ. ಈ ಗ್ಯಾಂಗ್ ಭಿಕ್ಷಾಟನೆ ಮಾತ್ರವಲ್ಲ ಮಕ್ಕಳ ಕಿಡ್ನಾಪ್ ಹಾಗೂ ಮಾರಾಟದಂಥಾ ದಂಧೆಗೂ ಪ್ರೋತ್ಸಾಹ ಕೊಡುತ್ತಿದೆ. ಇಂಥಾ ಮಾಫಿಯಾದ ವಿರುದ್ಧ ಕ್ಷಿಪ್ರ ಕ್ರಮಕೈಗೊಂಡು ಮಕ್ಕಳನ್ನ ರಕ್ಷಿಸಬೇಕಾಗಿದೆ. ಅಲ್ಲದೆ ಸಾರ್ವಜನಿಕರೂ ಭಿಕ್ಷೆ ಹಾಕೋದನ್ನ ನಿಲ್ಲಿಸಿ ಈ ಮಾಫಿಯಾಕ್ಕೆ ಬ್ರೇಕ್ ಹಾಕಬೇಕು.
