ಬೆಂಗಳೂರು[ಡಿ.07] ರಾಜಸ್ಥಾನ, ಛತ್ತೀಸ್‌ಘಡ, ಮಿಝೋರಾಂ, ತೆಲಂಗಾಣ ಮತ್ತು ಮಧ್ಯ ಪ್ರದೇಶದ ವಿಧಾನಸಭಾ ಚುನಾವಣಾ ಪ್ರಕ್ರಿಯೆ ಮುಗಿದಿದೆ.  ಚುನಾವಣಾ ಮತದಾನೋತ್ತರ ಸಮೀಕ್ಷೆ ಸಹ ಹೊರಬಂದಿದೆ. ಪ್ರಮುಖ ಸಂಸ್ಥೆಗಳು ಚುನಾವಣೆಯನ್ನು ತಮ್ಮದೆ ಆದ ರೀತಿಯಲ್ಲಿ ವಿಶ್ಲೇಷಣೆ ಮಾಡಿವೆ. 

ಸಮೀಕ್ಷೆಗಳ ಒಟ್ಟು ವಿಮರ್ಶೆ ಮಾಡಿದರೆ ಮೂರು ಕಡೆ ಕಾಂಗ್ರೆಸ್ ಮುನ್ನಡೆ ಸಾಧಿಸಿದ್ದು ಎರಡು ಕಡೆ ಬಿಜೆಪಿ  ಬಲ ಕಾಯ್ದುಕೊಳ್ಳುತ್ತಿದೆ. ಅಧಿಕಾರದಲ್ಲಿದ್ದ ರಾಜಸ್ಥಾನ ಮತ್ತು ಮಧ್ಯ ಪ್ರದೇಶದಲ್ಲಿ ಬಿಜೆಪಿಗೆ ಹಿನ್ನಡೆ ಆಗಲಿದೆ ಎಂದು ಸಮೀಕ್ಷೆಗಳು ಹೇಳಿವೆ.  ಮಧ್ಯಪ್ರದೇಶದ ಪ್ರಮುಖ ಸಮೀಕ್ಷಾ ವರದಿಗಳ ನೋಟ ಇಲ್ಲಿದೆ.