Asianet Suvarna News Asianet Suvarna News

ಹೌಡಿ ಮೋದಿಗೆ ಕಾರ್ಮೋಡ: ಪ್ರಧಾನಿ ಮೋದಿ ವಿರುದ್ಧ ದೂರು ದಾಖಲು!

ಹೌಡಿ ಮೋದಿ ಕಾರ್ಯಕ್ರಮಕ್ಕೂ ಮೊದಲೇ ಕವಿದ ಕಾರ್ಮೋಡ| ಪ್ರಧಾನಿ ಮೋದಿ ವಿರುದ್ಧ ಅಮೆರಿಕದಲ್ಲಿ ದೂರು ದಾಖಲು| ಕಾಶ್ಮೀರಿ ಹೋರಾಟಗಾರರು ಹಾಗೂ ಸಿಖ್ ಹೋರಾಟಗಾರರಿಂದ ಮೋದಿ ವಿರುದ್ಧ ದೂರು| ಪ್ರಧಾನಿ ಮೋದಿ ವಿರುದ್ಧ ಹೂಸ್ಟನ್‌ನಲ್ಲಿ ಪ್ರತಿಭಟನೆಗೆ ಮುಂದಾದ ಸಿಖ್ ಹೋರಾಟಗಗಾರರು| ಜಮ್ಮು ಮತ್ತು ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘಟನೆ ಆರೋಪ| 1991ರ ಟಾರ್ಚರ್ ವಿಕ್ಟಿಮ್ ಪ್ರೊಟೆಕ್ಷನ್ ಆ್ಯಕ್ಟ್‌ನಡಿ ಪ್ರಧಾನಿ ವಿರುದ್ಧ ದೂರು| 

Before Howdy Modi Event Lawsuit Against PM Modi in US
Author
Bengaluru, First Published Sep 21, 2019, 7:56 PM IST

ಹೂಸ್ಟನ್(ಸೆ.21): ಅಮೆರಿಕದ ಹೋಸ್ಟನ್‌ನಲ್ಲಿ ನಡೆಯಲಿರುವ ಪ್ರಧಾನಿ ಮೋದಿ ಅವರ ಹೌಡಿ ಮೋದಿ ಕಾರ್ಯಕ್ರಮಕ್ಕೆ ಕಾರ್ಮೊಡ ಕವಿದಿದೆ. ಪ್ರಧಾನಿ ಮೋದಿ ವಿರುದ್ಧ ಸಿಖ್ ಗುಂಪು ಹಾಗೂ ಕಾಶ್ಮೀರ ಹೋರಾಟಗಾರರು ಮೊಕದ್ದಮೆ ಹೂಡಿದ್ದಾರೆ.

ಕಾಶ್ಮೀರಿಗಳ ಹಕ್ಕನ್ನು ಪ್ರಧಾನಿ ನರೇಂದ್ರ ಮೋದಿ ಉಲ್ಲಂಘಿಸಿದ್ದು, ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಅಮೆರಿಕದಲ್ಲಿ ನೆಲೆಸಿರುವ ಇಬ್ಬರು ಕಾಶ್ಮೀರಿ ಹೋರಾಟಗಾರರು ಮೊಕದ್ದಮೆ ದಾಖಲಿಸಿದ್ದಾರೆ.

ಅದರಂತೆ ಸಿಖ್ ಹಾಗೂ ಪಾಕಿಸ್ತಾನಿಯರ ಗುಂಪೊಂದು ನಾಳೆ(ಸೆ.21) ಹೋಸ್ಟನ್‌ನಲ್ಲಿ ಪ್ರತಿಭಟನೆ ನಡೆಸಲು ಸಜ್ಜಾಗಿದ್ದು,  ಪ್ರಧಾನಿ ಭದ್ರತೆ ಕುರಿತು ಕೇಂದ್ರ ಸರ್ಕಾರ ಅಮೆರಿಕ ಸರ್ಕಾರದೊಂದಿಗೆ ಸಂಪರ್ಕದಲ್ಲಿದೆ.

ಪ್ರಧಾನಿ ಮೋದಿ ವಿರುದ್ಧ 73 ಪುಟಗಳ ಮೊಕದ್ದಮೆ ದಾಖಲಿಸಲಾಗಿದ್ದು, ಪ್ರಧಾನಿ ಮೋದಿ ವಿರುದ್ಧ ಹೂಡಿರುವ ಫೆಡರಲ್ ಮೊಕದ್ದಮೆಯ ಪರಿಣಾಮಗಳನ್ನು ತಿಳಿಯುವ ನಿಟ್ಟಿನಲ್ಲಿ ಭಾರತೀಯ ರಾಯಭಾರ ಕಚೇರಿ ಕಾರ್ಯೋನ್ಮುಖವಾಗಿದೆ.

ದೂರಿನಲ್ಲಿ ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ತೆಗೆದುಹಾಕುವ ಮೂಲಕ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶ ಹಾಗೂ ಭಾರತೀಯ ಸೇನೆಯ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಕನ್ವಾಲ್ ಜೀತ್ ಸಿಂಗ್ ದಿಲ್ಲೊನ್ ಕಾಶ್ಮೀರಿಗಳ ಮೇಲೆ ಕ್ರೂರ, ಅಮಾನವೀಯ ವರ್ತನೆ ತೋರಿಸಿದ್ದಾರೆ ಎಂದು ಆರೋಪಿಸಲಾಗಿದೆ.

1991ರ ಟಾರ್ಚರ್ ವಿಕ್ಟಿಮ್ ಪ್ರೊಟೆಕ್ಷನ್ ಆ್ಯಕ್ಟ್‌ನಡಿ ದೂರು ಸಲ್ಲಿಸಲಾಗಿದ್ದು, ಹತ್ಯೆ, ಹಿಂಸೆ, ಅಮಾನವೀಯ ವರ್ತನೆ ಆರೋಪದ ಮೇಲೆ ವಿದೇಶಿ ಅಧಿಕಾರಿಗಳು ಮತ್ತು ರಾಜಕೀಯ ನಾಯಕರ ವಿರುದ್ಧ ಅಮೆರಿಕದಲ್ಲಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

Follow Us:
Download App:
  • android
  • ios