ಸೆಕ್ಸ್'ಗೆ ಒಲ್ಲೆ ಎಂದ ಮಾಜಿ ಸುಂದರಿಯನ್ನು ಗುಂಡಿಟ್ಟು ಕೊಂದ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 6, Aug 2018, 5:26 PM IST
Beauty queen shot dead after she refused to have sex
Highlights

ಈಕೆ ತನ್ನ ಹುಟ್ಟು ಹಬ್ಬ ಆಚರಿಸುವ ವೇಳೆಯಲ್ಲಿಯೇ ಘಟನೆ ನಡೆದಿದೆ. ಹಂತಕನ  ಪಿಸ್ತೂಲಿನಿಂದ  ಸುಂದರಿಗೆ 4 ಗುಂಡುಗಳು ಹೊಕ್ಕಿವೆ. ಘಟನೆಯಲ್ಲಿ ಪವೀನಾಳ ಗೆಳೆಯ ಸನಿಹದಲ್ಲಿದ್ದು ಯಾವುದೇ ರೀತಿಯ ಅಪಾಯ ಸಂಭವಿಸಿಲ್ಲ. 

ಬ್ಯಾಂಕಾಕ್[ಆ.06]: ಕ್ಲಬ್ ಮಾಲೀಕನೊಂದಿಗೆ  ಸೆಕ್ಸ್ ಗೆ ಒಲ್ಲೆ ಎಂದ ಮಾಜಿ ಸುಂದರಿಯೊಬ್ಬಳನ್ನು ಪ್ರಿಯಕರನೆ ಗುಂಡಿಟ್ಟು ಕೊಂದ ಘಟನೆ ಥೈಲ್ಯಾಂಡಿನ ಕೋನ್'ಬುರಿಯಲ್ಲಿ ನಡೆದಿದೆ. 

ಮೃತಳನ್ನು ಪವೀನಾ ನಾಮುಗ್ರಕ್ ಎಂದು ಗುರುತಿಸಲಾಗಿದೆ. ಈಕೆ ತನ್ನ ಹುಟ್ಟು ಹಬ್ಬ ಆಚರಿಸುವ ವೇಳೆಯಲ್ಲಿಯೇ ಘಟನೆ ನಡೆದಿದೆ. ಹಂತಕನ  ಪಿಸ್ತೂಲಿನಿಂದ  ಸುಂದರಿಗೆ 4 ಗುಂಡುಗಳು ಹೊಕ್ಕಿವೆ. ಘಟನೆಯಲ್ಲಿ ಪವೀನಾಳ ಗೆಳೆಯ ಸನಿಹದಲ್ಲಿದ್ದು ಯಾವುದೇ ರೀತಿಯ ಅಪಾಯ ಸಂಭವಿಸಿಲ್ಲ. ಹಂತಕನ ಕ್ಲಬ್ ಗೆ ಮೃತಳು 2 ವರ್ಷದ ಹಿಂದೆ ಕೆಲಸಕ್ಕೆ ಸೇರಿದ್ದಳು. ಪ್ರಿಯಕರ ಕ್ಲಬ್ ಮಾಲೀಕನೊಂದಿಗೆ ಸಹಕರಿಸು ಎಂದು ಒತ್ತಾಯಿಸುತ್ತಿದ್ದ. ಆದರೆ ಆಕೆ ನಿರಾಕರಿಸಿದ್ದಳು.

ತಕ್ಷಣವೇ ಪ್ರವಾಸಿಗರ ಮುಂದೆಯೇ ಗುಂಡಿಟ್ಟು ಭೀಕರವಾಗಿ ಕೊಂದಿದ್ದಾನೆ. ಪ್ರಿಯಕರ ಕ್ಲಬ್ ಮಾಲೀಕನ ಸಲಿಂಗಿಯಾಗಿದ್ದು ಹಣದ ಆಸೆಗಾಗಿ ಈ ಕೃತ್ಯವೆಸಗಿದ್ದಾನೆ ಎನ್ನಲಾಗಿದೆ. ಪೊಲೀಸರು ಆರೋಪಗಾಗಿ ಶೋಧ ನಡೆಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಲೀಕನ ಸಹಚರನನ್ನು ಬಂಧಿಸಲಾಗಿದೆ.

loader