ವಿವಾಹಿತ ಮಹಿಳೆಯರಿಗಾಗಿ ಸೌಂದರ್ಯ ಸ್ಪರ್ಧೆ

Beauty contest For womens
Highlights

ವಿವಾಹಿತ ಮಹಿಳೆಯರಿಗಾಗಿ ಮಿಸೆಸ್ ಇಂಡಿಯಾ ಸ್ಪರ್ಧೆಗಾಗಿ ಕರ್ನಾಟಕದ ಆಡಿಷನ್ ಫೆ.3 ರಿಂದ ನಗರದ ಚಾನ್ಸೆರಿ ಪೆವಿಲಿಯನ್ ಹೋಟೆಲ್‌ನಲ್ಲಿ ನಡೆಯಲಿದೆ.

ಬೆಂಗಳೂರು (ಜ.11): ವಿವಾಹಿತ ಮಹಿಳೆಯರಿಗಾಗಿ ಮಿಸೆಸ್ ಇಂಡಿಯಾ ಸ್ಪರ್ಧೆಗಾಗಿ ಕರ್ನಾಟಕದ ಆಡಿಷನ್ ಫೆ.3 ರಿಂದ ನಗರದ ಚಾನ್ಸೆರಿ ಪೆವಿಲಿಯನ್ ಹೋಟೆಲ್‌ನಲ್ಲಿ ನಡೆಯಲಿದೆ.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಿಸೆಸ್ ಇಂಡಿಯಾ- ಕರ್ನಾಟಕದ ಸಂಘಟಕಿ ಪ್ರತಿಭಾ ಸೌಂಶಿಮಠ್, ಯಲಹಂಕದ ರಾಯಲ್ ಆರ್ಕಿಡ್ ರೆಸಾರ್ಟ್ ಮತ್ತು ಕನ್ವೆನ್ಷನ್ ಸೆಂಟರ್‌ನಲ್ಲಿ ಫೆ. 22ರಿಂದ 24ರವರೆಗೆ ಫೈನಲ್ ಸ್ಪರ್ಧೆ ನಡೆಯಲಿದೆ. ಸ್ಪರ್ಧೆಯಲ್ಲಿ 22 ರಿಂದ 40, 41 ರಿಂದ 60 ಮತ್ತು 60ಕ್ಕೂ ಹೆಚ್ಚು ವಯಸ್ಸಿನ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿದ್ದು, ಯಾವುದೇ ವಿವಾಹಿತ ಮಹಿಳೆ ನೋಂದಣಿ ಮಾಡಿಕೊಳ್ಳುವ ಮೂಲಕ ಅಥವಾ ನೇರವಾಗಿ ಪಾಲ್ಗೊಳ್ಳಬಹುದು ಎಂದರು.

ಈ ಕಾರ್ಯಕ್ರಮದ ಭಾಗವಾಗಿ ಸ್ಪರ್ಧಿಗಳು ರ್ಯಾಂಪ್ ಮೇಲೆ ನಡೆಯುತ್ತಾರೆ, ಅವರು ತಮ್ಮನ್ನು ಪರಿಚಯಿಸಿಕೊಳ್ಳುತ್ತಾರೆ ಮತ್ತು ತೀರ್ಪುಗಾರರ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ. ಸ್ಪರ್ಧಿಗಳ ನಡೆ, ದೇಹ ಭಾಷೆ, ಪ್ರಸ್ತುತಿ ಮತ್ತು ವಿಶ್ವಾಸದಿಂದ ಮುಂದಿನ ಸ್ಪರ್ಧಿಗಳನ್ನು ಅಳೆಯಲಾಗುತ್ತದೆ. ಆಯ್ಕೆಯಾದ ನಂತರ ಅವರು ಕರ್ನಾಟಕ ಫೈನಲ್‌ನಲ್ಲಿ ಭಾಗವಹಿಸಿ ನಂತರ ಮಿಸೆಸ್ ಇಂಡಿಯಾ ಮತ್ತು ಮಿಸೆಸ್ ಏಷ್ಯಾ, ಮಿಸೆಸ್ ವರ್ಲ್ಡ್ ಮತ್ತು ಮಿಸೆಸ್ ಪ್ಲಾನೆಟ್ ನಲ್ಲಿ ಭಾಗವಹಿಸುವ ಅವಕಾಶ ಪಡೆಯುತ್ತಾರೆ ಎಂದು ಹೇಳಿದರು.

ಮಹಿಳಾ ಸಾಧಕರಿಗೆ ಗೌರವ: ಪ್ರಸಕ್ತ ವರ್ಷ ನಡೆಯಲಿರುವ ಮಿಸೆಸ್ ಇಂಡಿಯಾ-ಕರ್ನಾಟಕ ಪ್ರತಿಷ್ಠಿತ ಕಿರೀಟವಾಗಿದ್ದು, ಇದು ಕರ್ನಾಟಕದ ವಿವಿಧ ಜಿಲ್ಲೆಗಳ ಸ್ಪರ್ಧಿಗಳಿಗೆ ಗೌರವವೂ ಆಗಿದೆ. ಈ ಸ್ಪರ್ಧೆ ಶೀರ್ಷಿಕೆಯನ್ನು ಗೆಲ್ಲುವುದರ ಜತೆಗೆ ಭಾಗವಹಿಸುವವರಿಗೆ ಮಿಸೆಸ್ ಹೆಲ್ದಿ, ಬೆಸ್ಟ್ ಐಸ್(ಕಣ್ಣು), ಬೆಸ್ಟ್ ಸ್ಮೈಲಿ(ನಗು), ಬೆಸ್ಟ್ ಸ್ಕಿನ್(ಚರ್ಮ ಸೌಂದರ್ಯ), ಮಿಸ್ಟ್ರೆಸ್ ಪರ್ಸನಾಲಿಟಿ, ಮಿಸೆಸ್ ಗ್ಲಾಮರ್, ಬೆಸ್ಟ್ ಹೇರ್, ಮಿಸೆಸ್ ಇಂಟೆಲೆಕ್ಚುಯಲ್, ಮಿಸೆಸ್ ಫೊಟೊಜೆನಿಕ್, ಬೆಸ್ಟ್ ವಾಕ್, ಮಿಸೆಸ್ ಇನ್ನರ್ ಬ್ಯೂ ಟಿ ಮತ್ತಿತರೆ ಶೀರ್ಷಿಕೆಗಳನ್ನು ಗೆಲ್ಲಬಹುದಾಗಿದೆ ಎಂದು ವಿವರಿಸಿದರು. ಹೆಚ್ಚಿನ ಮಾಹಿತಿಗೆ ww.misindiakarnataka.com ವೆಬ್‌ಸೈಟ್‌ಗೆ ಭೇಟಿ ನೀಡಬಹುದಾಗಿದೆ.

 

loader