ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಸೇನಾಪಡೆಯ ಕಮಾಂಡರ್​ಗಳು, ಗಣ್ಯಾತಿಗಣ್ಯರು  ಅಪರೂಪದ ಈ ಕ್ಷಣವನ್ನು ಕಣ್ತುಂಬಿಕೊಂಡರು.

ಇವತ್ತು ರಾಷ್ಟ್ರಪತಿ ಭವನವನ್ನು ಎರಡು ಕಣ್ಣುಗಳಿಂದ ನೋಡೋದಕ್ಕೆ ಸಾಲದಾಗಿತ್ತು. ಸ್ವರ್ಗವೇ ಧರೆಗಿಳಿದು ಬಂದಂತೆ ಭಾಸವಾಗುತಿತ್ತು. ಮೂರು ಸೇನೆಗಳ ಆಕರ್ಷಕ ಪಥಸಂಚಲನ ಇಡೀ ದೇಶವನ್ನು ತನ್ನತ್ತ ಸೆಳೆಯುವಂತೆ ಮಾಡಿತ್ತು.

ಇದು ರಾಷ್ಟ್ರಪತಿ ಆವರಣದಲ್ಲಿ ನಡೆದ ಬೀಟಿಂಗ್ ದಿ ರೀಟ್ರೀಟ್. ಅಂದರೆ ಗಣರಾಜ್ಯೋತ್ಸದ ಸಮಾರೋಪ ಸಮಾರಂಭ ಪ್ರಯುಕ್ತ ಭೂ ಸೇನೆ, ವಾಯು ಸೇನೆ ಹಾಗೂ ನೌಕಾ ಸೇನೆಯಿಂದ ನಡೆದ ಆಕರ್ಷಕ ಪಥಸಂಚಲನ. ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಸೇನಾಪಡೆಯ ಕಮಾಂಡರ್​ಗಳು, ಗಣ್ಯಾತಿಗಣ್ಯರು ಅಪರೂಪದ ಈ ಕ್ಷಣವನ್ನು ಕಣ್ತುಂಬಿಕೊಂಡರು.

ಈ ಬಾರಿ ಗಣರಾಜ್ಯೋತ್ಸವಕ್ಕೆ ವಿಶೇಷ ಅತಿಥಿಯಾಗಿ ಸೌದಿ ಯುವರಾಜ ಶೇಖ್ ಮೊಹಮ್ಮದ್ ಬಿನ್ ಜಾಯೇದ್ ಆಗಮಿಸಿದ್ದರಿಂದ ಈ ವರ್ಷ ಪಥಸಂಚಲನಕ್ಕೆ ವಿಶೇಷ ತಯಾರಿ ನಡೆದಿತ್ತು. ಅದೇ ಮಾದರಿಯಲ್ಲಿ ಇವತ್ತು ದೆಹಲಿಯ ವಿಜಯ್​ ಚೌಕ್​​​​​ನಲ್ಲಿ ಬೀಟಿಂಗ್​ ದಿ ರೀಟ್ರೀಟ್’​ ನಡೀತು.

ಮೂರು ಸೇನೆಯ 16 ಮಿಲಿಟರಿ ಪಡೆಗಳ ಆರ್ಕಷಕ ಪಥಸಂಚಲನಕ್ಕೆ ಸಾವಿರಾರು ಜನರು ಸಾಕ್ಷಿಯಾದರು. ಇನ್ನೂ ಸಂಜೆಯಾಗುತ್ತಿದಂತೆ ವಿದ್ಯುತ್ ದ್ಪೀಪಗಳಿಂದ ರಾಷ್ಟ್ರಪತಿ ಭವನ ಕಂಗೊಳಿಸಿತ್ತು. ಇದನ್ನು ನೋಡೋದಕ್ಕೆ ಎರಡು ಕಣ್ಣು ಸಾಲದಾಗಿತ್ತು. ಒಟ್ಟಿನಲ್ಲಿ ಬೀಟಿಂಗ್​ ದಿ ರೀಟ್ರೀಟ್’ ನೊಂದಿಗೆ 68ನೇ ಗಣ ರಾಜ್ಯೋತ್ಸವ ಸಡಗರಕ್ಕೆ ತೆರೆಬಿತ್ತು.