Asianet Suvarna News Asianet Suvarna News

ಪ್ರತಿಯೊಬ್ಬರೂ ತಮ್ಮ ಧರ್ಮ, ಪ್ರದೇಶದ ಬಗ್ಗೆ ಹೆಮ್ಮೆಪಡಬೇಕು: ನ್ಯಾ. ಖೆಹರ್

ಭಾರತದ ಪ್ರಜಾತಂತ್ರ ವ್ಯವಸ್ಥೆ ಹಾಗೂ ಜಾತ್ಯಾತೀತ ಮೌಲ್ಯಗಳನ್ನು ಪ್ರಶಂಸಿಸಿರುವ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಜೆ.ಎಸ್.ಖೆಹರ್, ಪ್ರತಿಯೊಬ್ಬ ಭಾರತೀಯ ಪ್ರಜೆಯು ತನ್ನ ಧರ್ಮ, ಪ್ರದೇಶ ಹಾಗೂ ಜನಾಂಗದ ಬಗ್ಗೆ ಹೆಮ್ಮೆ ಪಡಬೇಕು ಎಂದು ಹೇಳಿದ್ದಾರೆ.

Be proud of your religion region and ethnicity says CJI JS Khehar

ನವದೆಹಲಿ: ಭಾರತದ ಪ್ರಜಾತಂತ್ರ ವ್ಯವಸ್ಥೆ ಹಾಗೂ ಜಾತ್ಯಾತೀತ ಮೌಲ್ಯಗಳನ್ನು ಪ್ರಶಂಸಿಸಿರುವ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಜೆ.ಎಸ್.ಖೆಹರ್, ಪ್ರತಿಯೊಬ್ಬ ಭಾರತೀಯ ಪ್ರಜೆಯು ತನ್ನ ಧರ್ಮ, ಪ್ರದೇಶ ಹಾಗೂ ಜನಾಂಗದ ಬಗ್ಗೆ ಹೆಮ್ಮೆ ಪಡಬೇಕು ಎಂದು ಹೇಳಿದ್ದಾರೆ.

ಸಂವಿಧಾನವು ಪ್ರತಿಯೊಬ್ಬರಿಗೂ ಸಮಾನ ಹಕ್ಕುಗಳನ್ನು ನೀಡುವುದರಿಂದ ಇಲ್ಲಿ ಎಲ್ಲರೂ ಸಮಾನರು, ಇಲ್ಲಿ ಯಾರೂ ಮೇಲಲ್ಲ ಅಥವಾ ಕೀಳಲ್ಲ ಎಂದಿದ್ದಾರೆ.

ಸುಪ್ರೀಂ ಕೋರ್ಟ್ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ವಾತಂತ್ರ್ಯೋತ್ಸವ ಸಂಭ್ರಮಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ನ್ಯಾ. ಖೆಹರ್, ಭಾರತವು ಎಲ್ಲರಿಗೂ ಸಮಾನವಾದ ಅವಕಾಶ ಕಲ್ಪಿಸುವ ವಿಶಿಷ್ಟ ರಾಷ್ಟ್ರವಾಗಿದೆ ಎಂದು ಹೇಳಿದ್ದಾರೆ.

ಅದಕ್ಕೆ ದೇಶದ ಹಾಲಿ ರಾಷ್ಟ್ರಪತಿ, ಉಪ-ರಾಷ್ಟ್ರಪತಿ ಹಾಗೂ ಪ್ರಧಾನಿಯವರೇ ಉದಾಹರಣೆಯಾಗಿದ್ದಾರೆ; ಸಾಮಾನ್ಯ ಹಿನ್ನೆಲೆಯಿಂದ ಬಂದಿದ್ದರೂ, ದೇಶದ ಉನ್ನತ ಸಾಂವಿಧಾನಿಕ ಹುದ್ದೆಗಳನ್ನು ಅವರು ಅಲಂಕರಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಎಲ್ಲಾ ಪ್ರಜೆಗಳು ಸಮಾನರು, ಯಾರು ಮೇಲಲ್ಲ, ಅಥವಾ ಕೀಳಲ್ಲ. ಆದುದರಿಂದ ನಾವು ಇಂದು ಗುಡಿಸಲಿನಲ್ಲಿ ಬಾಲ್ಯವನ್ನು ಕಳೆದ ದಲಿತ ರಾಷ್ಟ್ರಪತಿಯನ್ನು ಹೊಂದಿದ್ದೇವೆ, ರೈತನಾಗಿದ್ದು ಪೋಸ್ಟರ್’ಗಳನ್ನು ಹಚ್ಚುತ್ತಿದ್ದವರು ಉಪ-ರಾಷ್ಟ್ರಪತಿಯಾಗಿದ್ದಾರೆ, ಹಾಗೂ ಟೀ ಮಾರುತ್ತಿದ್ದವರು ದೇಶದ ಪ್ರಧಾನಿಯಾಗಿದ್ದಾರೆ ಎಂದು ನ್ಯಾ.ಖೆಹರ್ ಹೇಳಿದ್ದಾರೆ.

ನಾನು ಹುಟ್ಟಿದಾಗ ಈ ದೇಶದ ಪ್ರಜೆಯಾಗಿರಲಿಲ್ಲ, ಆದರೆ ಪ್ರಜೆಯಾದ ಬಳಿಕ ಎಲ್ಲರಂತೆ ನಾನು ಸಮಾನನಾದೆ. ಈಗ ದೇಶದ ಮುಖ್ಯ ನ್ಯಾಯಾಧೀಶನಾಗಿದ್ದೇನೆ, ಎಂದು ಅವರು ವಿವರಿಸಿದರು.

Latest Videos
Follow Us:
Download App:
  • android
  • ios