ಕೇಂದ್ರ ಸರ್ಕಾರದ ನೋಟು ಅಮಾನ್ಯ ಕ್ರಮವು ದೇಶದ ಶೇ.90ರಷ್ಟು ಜನರನ್ನು ಕಂಗೆಡಿಸಿದೆ. ಅದರ ಪ್ರತಿಕೂಲ ಪರಿಣಾಮಗಳನ್ನು ಬಿಜೆಪಿ ಎದುರಿಸಲಿದೆ ಎಂದು ಲಕ್ನೋವಿನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾಯಾವತಿ ಹೇಳಿದ್ದಾರೆ.

ನವದೆಹಲಿ (ಜ.15): ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿರುವ ಬಹುಜನ ಸಮಾಜ ಪಕ್ಷದ ವರಿಷ್ಠೆ ಮಾಯಾವತಿ, ಬಿಜೆಪಿಯು ‘ಬುರೆ ದಿನ್’ (ಕೆಟ್ಟ ದಿನ)ಗಳನ್ನು ಎದುರಿಸಲು ತಯಾರಾಗುವಂತೆ ಎಚ್ಚರಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೇಂದ್ರ ಸರ್ಕಾರದ ನೋಟು ಅಮಾನ್ಯ ಕ್ರಮವು ದೇಶದ ಶೇ.90ರಷ್ಟು ಜನರನ್ನು ಕಂಗೆಡಿಸಿದೆ. ಅದರ ಪ್ರತಿಕೂಲ ಪರಿಣಾಮಗಳನ್ನು ಬಿಜೆಪಿ ಎದುರಿಸಲಿದೆ ಎಂದು ಲಕ್ನೋವಿನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾಯಾವತಿ ಹೇಳಿದ್ದಾರೆ.

ನೋಟು ಅಮಾನ್ಯ ಕ್ರಮ ಘೋಷಿಸಿ 50ಕ್ಕಿಂತ ಹೆಚ್ಚು ದಿವಸಗಳು ಕಳೆದಿವೆ. ಆದರೆ ವಾಪಸು ಬಂದ ಕಪ್ಪು-ಹಣದ ಪ್ರಮಾಣವೆಷ್ಟು ಎಂದು ಪ್ರಧಾನಿ ಮೋದಿ ಈವರೆಗೆ ಬಹಿರಂಗ ಪಡಿಸಿಲ್ಲವೆಂದು ಅವರು ಟೀಕಿಸದ್ದಾರೆ.

ಭರವಸೆಗಳ ‘ಅಚ್ಛೇ ದಿನ್’ಗಳು ಮುಗಿಯಿತು, ಬಿಜೆಪಿ ಈಗ ‘ಬುರೆ ದಿನ್ಗಳನ್ನು ಎದುರಿಸಲು ತಯಾರಿರಬೇಕು ಎಂದು ಮಾಯಾವತಿ ಹೇಳಿದ್ದಾರೆ.