ಟೀಂ ಇಂಡಿಯಾಗೆ ಒಪ್ಪೋ ಮೊಬೈಲ್ ಕಂಪನಿ ಪ್ರಾಯೋಜಕತ್ವ ನೀಡಲಿದೆ ಎಂದು ಬಿಸಿಸಿಐ ಇಂದು ಘೋಷಿಸಿದೆ. ಒಪ್ಪೋ ಕಂಒನಿ ಜೊತೆ ಬಿಸಿಸಿಐ 5 ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದ್ದು, ಇದೇ ಏಪ್ರಿಲ್ ನಿಂದ ಪ್ರಾಯೋಜಕತ್ವ ಶುರುವಾಗಲಿದೆ.
ನವದೆಹಲಿ (ಮಾ.07): ಟೀಂ ಇಂಡಿಯಾಗೆ ಒಪ್ಪೋ ಮೊಬೈಲ್ ಕಂಪನಿ ಪ್ರಾಯೋಜಕತ್ವ ನೀಡಲಿದೆ ಎಂದು ಬಿಸಿಸಿಐ ಇಂದು ಘೋಷಿಸಿದೆ. ಒಪ್ಪೋ ಕಂಒನಿ ಜೊತೆ ಬಿಸಿಸಿಐ 5 ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದ್ದು, ಇದೇ ಏಪ್ರಿಲ್ ನಿಂದ ಪ್ರಾಯೋಜಕತ್ವ ಶುರುವಾಗಲಿದೆ.
ಸ್ಟಾರ್ ಇಂಡಿಯಾದ 4 ವರ್ಷಗಳ ಒಪ್ಪಂದ ಮಾರ್ಚ್ 31 ರಂದು ಮುಗಿಯಲಿದ್ದು, ಏಪ್ರಿಲ್ 1 ರಿಂದ ಒಪ್ಪೋ ವಹಿಸಿಕೊಳ್ಳಲಿದೆ. ರೂ. 538 ಕೋಟಿಗೂ ಹೆಚ್ಚಿನ ಒಪ್ಪಂದವಾಗಿದ್ದು, ಮಹಿಳಾ ಹಾಗೂ ಪುರುಷ ಆಟಗಾರರ ಕಿಟ್ಸ್ ಮೇಲೆ ಒಪ್ಪೋ ಕಮರ್ಷಿಯಲ್ ಲೋಗೋ ಇರಲಿದೆ.
