- ಈ ಬಾರಿ ಗಣೇಶ ಹಬ್ಬಕ್ಕೆ ಗಣೇಶ ಪ್ರತಿಷ್ಠಾಪನೆ ಮಾಡುವವರಿಗೆ ಬಿಬಿಎಂಪಿ ಶಾಕ್ !- ಹೊಸ ರೂಲ್ಸ್ ತರಲು ಮೂಮದಾಗಿದೆ ಬಿಬಿಎಂಪಿ   

ಬೆಂಗಳೂರು (ಆ. 13): ಈ ಬಾರಿ ಗಣೇಶ ಹಬ್ಬಕ್ಕೆ ಗಣೇಶ ಪ್ರತಿಷ್ಠಾಪನೆ ಮಾಡುವವರಿಗೆ ಬಿಬಿಎಂಪಿ ಶಾಕ್ ನೀಡಲು ಮುಂದಾಗಿದೆ. 

ಬೆಂಗಳೂರಿನಲ್ಲಿ‌ ಭಾಗಶಃ ಬಿಬಿಎಂಪಿ ರಸ್ತೆಗಳಲ್ಲೇ ಪೆಂಡಾಲ್ ಹಾಕಿ ಗಣೇಶ ಪ್ರತಿಷ್ಠಾಪನೆ ಮಾಡುತ್ತಾರೆ. ಹೀಗಾಗಿ ಪ್ರತಿಷ್ಟಾಪನೆ‌ ಮಾಡುವವರು ಬಿಬಿಎಂಪಿ ಪರ್ಮಿಶನ್ ಪಡೆದು ಬಾಡಿಗೆ ಕಟ್ಟಬೇಕು. ಎಷ್ಟು ಅಗಲ ಪೆಂಡಾಲ್ ಹಾಕುತ್ತಾರೋ ಅಷ್ಟು ಅಗಲ ಜಾಗಕ್ಕೆ ಬಾಡಿಗೆ ಕಟ್ಟಬೇಕು. ಒಂದಡಿ ಜಾಗಕ್ಕೆ ಈಗಾಗಲೇ ಬಾಡಿಗೆ ಫಿಕ್ಸ್ ಮಾಡಿದೆ ಬಿಬಿಎಂಪಿ‌.

ಮೂರು ದಿನಕ್ಕೆ ,ಐದು ದಿನಕ್ಕೆ ,ಏಳು ದಿನಕ್ಕೆ, ಹೀಗೆ ದಿನದ ಲೆಕ್ಕದಲ್ಲಿ ಬಾಡಿಗೆ ಫಿಕ್ಸ್ ಮಾಡಿದೆ ಬಿಬಿಎಂಪಿ. ಒಂದುವೇಳೆ ಪರ್ಮಿಶನ್, ಹಣ ಕಟ್ಟದಿದ್ದರೆ ಗಣೇಶ ಮೂರ್ತಿ ಸೀಜ್ ಮಾಡಲಾಗುತ್ತದೆ. ಈ ಬಾರಿ ಫುಲ್ ಸ್ಟ್ರೀಕ್ಟ್ ಆಗಿ ಜಾರಿಗೆ ತರಲು ಮುಂದಾಗಿದೆ ಬಿಬಿಎಂಪಿ.