ಬಿಬಿಎಂಪಿ ಸದಸ್ಯರನ್ನೇ ಓವರ್​ಟೇಕ್​ ಮಾಡ್ತಿದ್ದಾರಾ ಆಯುಕ್ತರು? ವಿವಿಧ ಇಲಾಖೆಗಳಿಗೆ ನಿಯಮ ಬಾಹಿರವಾಗಿ ಕ್ರೀಯಾ ಯೋಜನೆಗೆ ಗ್ರೀನ್ ಸಿಗ್ನಲ್ ನೀಡುವಂತೆ ಸರ್ಕಾರಕ್ಕೆ ಕಮಿಷನರ್ ಸಲ್ಲಿಸಿರುವ ದಾಖಲೆಗಳು ಇಂತಹ ಪ್ರಶ್ನೆಗೆ ಕಾರಣವಾಗುತ್ತಿದೆ.

ಬೆಂಗಳೂರು(ಡಿ.22): ಬಿಬಿಎಂಪಿ ಸದಸ್ಯರನ್ನೇ ಓವರ್​ಟೇಕ್​ ಮಾಡ್ತಿದ್ದಾರಾ ಆಯುಕ್ತರು? ವಿವಿಧ ಇಲಾಖೆಗಳಿಗೆ ನಿಯಮ ಬಾಹಿರವಾಗಿ ಕ್ರೀಯಾ ಯೋಜನೆಗೆ ಗ್ರೀನ್ ಸಿಗ್ನಲ್ ನೀಡುವಂತೆ ಸರ್ಕಾರಕ್ಕೆ ಕಮಿಷನರ್ ಸಲ್ಲಿಸಿರುವ ದಾಖಲೆಗಳು ಇಂತಹ ಪ್ರಶ್ನೆಗೆ ಕಾರಣವಾಗುತ್ತಿದೆ. ಈ ಬಗ್ಗೆ ರಾಜ್ಯ ಸರ್ಕಾರದ ವಿರುದ್ಧ ಬಿಬಿಎಂಪಿ ಪುರ ಪಿತೃಗಳು ತೀವ್ರ ಕೋಪಗೊಂಡಿದ್ದಾರೆ.

ಬಿಬಿಎಂಪಿ ಸದಸ್ಯರು ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರುತ್ತಿದ್ದಾರೆ. ಬಿಬಿಎಂಪಿ ಆಯುಕ್ತರು ತಮ್ಮ ಅಧಿಕಾರವನ್ನೇ ಕಿತ್ತುಕೊಳ್ಳುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ, ಬಿಬಿಎಂಪಿ ಸದಸ್ಯರು ರಾಜ್ಯ ಸರ್ಕಾರದ ವಿರುದ್ಧ ಕೆಂಡ ಕಾರೋದಕ್ಕೆ ಕಾರಣ ಬಿಬಿಎಂಪಿ ಸದಸ್ಯರಿಗೇ ಗೊತ್ತಿಲ್ಲದಂತೆ ರಾಜ್ಯ ಸರ್ಕಾರಕ್ಕೆ ಸಲ್ಲಿಕೆಯಾಗಿರುವ ಕ್ರಿಯಾ ಯೋಜನೆಯಾಗಿದೆ.

ಬರೋಬ್ಬರಿ 2,191 ಕೋಟಿ ರೂಪಾಯಿಗಳ ಕ್ರಿಯಾ ಯೋಜನೆಗೆ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ವಿವಿಧ ಕಾಮಗಾರಿಗಳಿಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ಕೊಡುವಂತೆ ಸಲ್ಲಿಸಿರುವ ಕ್ರಿಯಾ ಯೋಜನೆ ತಪ್ಪು ಎಂದು ಬಿಬಿಎಂಪಿ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆಎಂಸಿ ಕಾಯ್ದೆಗೆ ವಿರುದ್ಧವಾಗಿ ಆಯುಕ್ತರು ಕ್ರಿಯಾ ಯೋಜನೆ ರೂಪಿಸಿ ಸರ್ಕಾರಕ್ಕೆ ಸಲ್ಲಿಸಿದ್ದು ತಮ್ಮ ಅಧಿಕಾರವನ್ನೇ ಮೊಟಕುಗೊಳಿಸಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.