ಬೆಂಗಳೂರು(ಸೆ.25): ಕಾಂಗ್ರೆಸ್, ಜೆಡಿಎಸ್ ಮೈತ್ರಿ ಮುಂದುವರಿಕೆಯಾದ ಕಾರಣ ಬಿಬಿಎಂಪಿ ಮೇಯರ್, ಉಪಮೇಯರ್​ ಆಯ್ಕೆ ಫಿಕ್ಸ್ ಆಗಿದೆ. ಶಾಂತಿನಗರ ಕಾರ್ಪೊರೇಟರ್ ಕಾಂಗ್ರೆಸ್​ನ ಸೌಮ್ಯ ಶಿವಕುಮಾರ್ ಮೇಯರ್​ ಆಗುವ ಸಾಧ್ಯತೆ ಹೆಚ್ಚಾಗಿದೆ. ಮೇಯರ್ ಚುನಾವಣೆ ಸೆ.25 ರಂದು ನಡೆಯಲಿದೆ. ಎರಡು ಪಕ್ಷಗಳ ನಾಯಕರಾದ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ , ಎಚ್​​ಡಿಕೆ ರಹಸ್ಯ ಸ್ಥಳದಲ್ಲಿ ಮಾತುಕತೆ ನಡೆಸಿ ಒಮ್ಮತದ ತೀರ್ಮಾನಕ್ಕೆ ಬಂದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಎರಡು ಸ್ಥಾಯಿ ಸಮಿತಿ ಹೆಚ್ಚಿಗೆ ನೀಡುವಂತೆ ಜೆಡಿಎಸ್ ಮನವಿ ಮಾಡಿದ್ದು, ಸಿಎಂ ಜೊತೆ ಚರ್ಚಿಸಿ ಕಾಂಗ್ರೆಸ್ ನಾಯಕರು ಅಂತಿಮ ತೀರ್ಮಾನ ಮಾಡಿದ್ದಾರೆ. ಮಾತುಕತೆ ವೇಳೆ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಸಚಿವ ರಾಮಲಿಂಗಾರೆಡ್ಡಿ, ಕುಪೇಂದ್ರ ರೆಡ್ಡಿ ಉಪಸ್ಥಿತರಿದ್ದರು. ಉಪಮೇಯರ್ ಅಭ್ಯರ್ಥಿ ಆಯ್ಕೆ ವಿಚಾರ ನಾಳೆ ಸಂಜೆಯೊಳಗೆ ಅಂತಿಮಗೊಳಿಸಲು ನಿರ್ಧರಿಸಲಾಗಿದೆ.