ಬೆಂಗಳೂರು(ಸೆ. 28): ತಾನು ಮೇಯರ್ ಆದರೆ ಪ್ರಾಮಾಣಿಕವಾಗಿ ಜನರ ಸೇವೆ ಮಾಡುತ್ತೇನೆ ಎಂದು ಬಿಬಿಎಂಪಿ ಮೇಯರ್ ಸ್ಪರ್ಧಿ ಕಾಂಗ್ರೆಸ್ ಕಾರ್ಪೊರೇಟರ್ ಪದ್ಮಾವತಿ ಭರವಸೆ ನೀಡಿದ್ದಾರೆ. ಇಂದು ಚುನಾವಣೆಗೆ ಮುನ್ನ ಸುವರ್ಣನ್ಯೂಸ್ ವರದಿಗಾರ ಜಿ.ಮಧುಸೂದನ್ ಅವರೊಂದಿಗೆ ನೀಡಿದ ಕಿರು ಸಂದರ್ಶನದಲ್ಲಿ ಮಾತನಾಡಿದ ಪದ್ಮಾವತಿ, ತಮಗೆ ಮುಖ್ಯಮಂತ್ರಿಗಳು ನೀಡುವ ಜವಾಬ್ದಾರಿಯನ್ನು ನಿರ್ವಹಿಸಲು ಬದ್ಧಳಾಗಿದ್ದೇನೆಂದು ಹೇಳಿದ್ದಾರೆ. ಕಾಂಗ್ರೆಸ್'ನ ಸೌಮ್ಯ ಶಿವಕುಮಾರ್ ಅವರು ಮತ್ತೊಬ್ಬ ಮೇಯರ್ ಸ್ಪರ್ಧಾಳುವಾಗಿದ್ದಾರೆ. ಮೂಲಗಳ ಪ್ರಕಾರ, ಪದ್ಮಾವತಿಯವರೇ ಮೇಯರ್ ಆಗಿ ಆಯ್ಕೆಯಾಗುವ ಸಾಧ್ಯತೆ ದಟ್ಟವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred