Asianet Suvarna News Asianet Suvarna News

ಕೆಂಪೇಗೌಡ ಜಯಂತಿ ಈ ಬಾರಿಯೂ ವಿಳಂಬ

ಕೆಂಪೇಗೌಡ ಜಯಂತಿ ಸಮಾರಂಭಕ್ಕೆ ರಾಜಕೀಯ ಬೆಳವಣಿಗೆ ಕಾರ್ಮೋಡ | ದಿನಾಂಕ ನಿಗದಿ ಪ್ರಸ್ತಾಪಕ್ಕೆ ಶಾಸಕರ ರಾಜೀನಾಮೆ ಅಡ್ಡಿ | ಕೆಂಪೇಗೌಡ ಪ್ರಶಸ್ತಿಗೆ ಈಗಾಗಲೇ 700ಕ್ಕೂ ಹೆಚ್ಚು ಅರ್ಜಿಗಳು ಬಂದಿವೆ

BBMP likely to delay Kempegowda Jayanti due to political crisis
Author
Bengaluru, First Published Jul 10, 2019, 8:51 AM IST

 ಬೆಂಗಳೂರು (ಜು. 10): ಬಿಬಿಎಂಪಿಯಿಂದ ಆಚರಿಸುವ ನಾಡಪ್ರಭು ಕೆಂಪೇಗೌಡ ಜಯಂತಿ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಈ ಬಾರಿಯೂ ವಿಳಂಬವಾಗುವ ಲಕ್ಷಣ ಕಾಣುತ್ತಿವೆ.

ಕಳೆದ ವರ್ಷ ಕೆಂಪೇಗೌಡ ಜಯಂತಿ ಆಚರಣೆ ಸಮಾರಂಭದ ಸಂದರ್ಭದಲ್ಲಿ ತಮಿಳುನಾಡು ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಸೇರಿದಂತೆ ಮತ್ತಿತರ ಗಣ್ಯರ ನಿಧನದಿಂದ ತಡವಾಗಿ ಆಚರಣೆ ಮಾಡಲಾಗಿತ್ತು. ಈ ವರ್ಷ ಮುಖ್ಯಮಂತ್ರಿ ಕುಮಾರಸ್ವಾಮಿ ವಿದೇಶ ಪ್ರವಾಸದಿಂದ ಬಂದ ಮೇಲೆ ಈ ಬಗ್ಗೆ ಚರ್ಚಿಸಿ ದಿನಾಂಕ ನಿಗದಿ ಪಡಿಸಲು ಮೇಯರ್‌ ಹಾಗೂ ಸದಸ್ಯರು ತೀರ್ಮಾನಿಸಿದ್ದರು.

ಈ ಮಧ್ಯೆ ಮೈತ್ರಿ ಪಕ್ಷಗಳ ಅತೃಪ್ತ ಶಾಸಕರು ರಾಜೀನಾಮೆ ನೀಡಿರುವುದು ಕೆಂಪೇಗೌಡ ಜಯಂತಿ ಆಚರಣೆ ಬಗ್ಗೆ ಪ್ರಸ್ತಾಪ ಅಸಾಧ್ಯವಾಗಿದೆ. ಹೀಗಾಗಿ, ಸಮಾರಂಭ ವಿಳಂಬವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಕೆಂಪೇಗೌಡ ಪ್ರಶಸ್ತಿಗೆ ಈಗಾಗಲೇ 700ಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಈ ಅರ್ಜಿಗಳನ್ನು ಅಂತಿಮಗೊಳಿಸಲು ಸಮಿತಿ ರಚನೆಯಾಗಬೇಕಿದೆ. ಆದರೆ, ರಾಜ್ಯ ರಾಜಕೀಯ ಬೆಳವಣಿಗೆ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಕೆಂಪೇಗೌಡ ಜಯಂತಿ ಆಚರಣಾ ಸಮಿತಿ ಸದಸ್ಯರು ತಿಳಿಸಿದ್ದಾರೆ.

Follow Us:
Download App:
  • android
  • ios