ಕಾರ್ಪೊರೇಷನ್ ಬಳಿಯ ಮಿಶ್ರ ಪೇಡಾ ತಯಾರಿಕಾ ಘಟಕದ ಮೇಲೆ ಬಿಬಿಎಂಪಿ ಆರೋಗ್ಯ ಸ್ಥಾಯಿ ಸಮಿತಿ ಮತ್ತು ಆಹಾರ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಬೆಂಗಳೂರಿನ ಪೇಡಾ ತಯಾರಿಕಾ ಘಟಕದ ಮೇಲೆ ಆಹಾರ ಇಲಾಖೆ ಅಧಿಕಾರಿಗಳು ದಾಳಿ ಮಾಡಿದಾಗ ಆರೋಗ್ಯಕ್ಕೆ ಮಾರಕವಾಗುವ ಪದಾರ್ಥಗಳಿರುವುದು ಕಂಡು ಬಂದಿದೆ.
ಕಾರ್ಪೊರೇಷನ್ ಬಳಿಯ ಮಿಶ್ರ ಪೇಡಾ ತಯಾರಿಕಾ ಘಟಕದ ಮೇಲೆ ಬಿಬಿಎಂಪಿ ಆರೋಗ್ಯ ಸ್ಥಾಯಿ ಸಮಿತಿ ಮತ್ತು ಆಹಾರ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಪೇಡಾ ತಯಾರಿಕಾ ಸ್ಥಳದಲ್ಲಿ ಜಿರಳೆ ಸೇರಿದಂತೆ ಕೆಟ್ಟ ಪದಾರ್ಥಗಳು ಪತ್ತೆಯಾಗಿವೆ. ಅಜಯ್ ದುಬೆ ಎಂಬುವರಿಗೆ ಸೇರಿದ ಈ ಪೇಡಾ ಘಟಕದಲ್ಲಿ ಸ್ವಚ್ಛತೆ ಇಲ್ಲದ ಕಾರಣ ಹಲವರು ದೂರು ನೀಡಿದ್ದರು. ಹೀಗಾಗಿ ದಾಳಿ ಮಾಡಿದ ಅಧಿಕಾರಿಗಳು ಪೇಡಾ ತಯಾರಿಕಾ ಘಟಕ ಸೀಜ್ ಮಾಡಿದ್ದಾರೆ.
