ರಾಜಧಾನಿ ಜನರ ಹಸಿವು  ನಿಗಿಸುವ ನಿಟ್ಟಿನಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಸರ್ಕಾರ ಮುಂದಾಗುತ್ತಿದೆ. ಅದರೆ ಪಾಲಿಕೆ ಕ್ಯಾಂಟೀನ್ ಅರಂಭದಲ್ಲೇ ಒಂದಿಲ್ಲೊಂದು ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿದೆ. ಇದೀಗ ಬ್ರಿಟಿಷರ ಕಾಲದಲ್ಲಿ ಕಟ್ಟಲಾದ ಲೈಬ್ರರಿಯನ್ನು ಕೆಡವಿ ಮತ್ತೊಂದು ಕಾಂಟ್ರವರ್ಸಿಯಲ್ಲಿ ಸಿಲುಕಿಕೊಂಡಿದೆ.

ಬೆಂಗಳೂರು(ಜುಲೈ 26): ಇಂದಿರಾ ಕ್ಯಾಂಟೀನ್ ಸ್ಥಾಪನೆಗಾಗಿ ಬ್ರಿಟಿಷರ ಕಾಲದ ಕಟ್ಟಡವೊಂದನ್ನು ಧರೆಗುರುಳಿಸಲಾಗಿದೆ. ಸಿವಿ ರಾಮನ್ ನಗರ ವಿಧಾನಸಭಾ ಕ್ಷೇತ್ರದ ಹೊಯ್ಸಳನಗರ ವಾರ್ಡ್'ನಲ್ಲಿ ಶತಮಾನದ ಹಿಂದಿನ ಪಾರಂಪರಿಕ ಗ್ರಂಥಾಲಯವನ್ನು ಕೆಡವಲಾಗಿದೆ. ಈ ಕಟ್ಟಡವು ಶಿಥಿಲಗೊಂಡಿದೆ ಎಂಬ ಕಾರಣವೊಡ್ಡಿ ಬಿಬಿಎಂಪಿಯು ಧ್ವಂಸ ಮಾಡಿ ಆ ಸ್ಥಳದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಮುಂದಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

1900 ಇಸವಿಯಲ್ಲಿ ನಿರ್ಮಾಣ ವಾಗಿದ್ದ ಈ ಕಟ್ಟಡವನ್ನು ರಾಜ್ಯ ಪುರಾತತ್ವ ಇಲಾಖೆ ನಗರದ ಪಾರಂಪರಿಕ ಕಟ್ಟಡಗಳ ಪಟ್ಟಿಗೆ ಸೇರಿಸಿತ್ತು. ಮರ್ಫಿ ಟೌನ್ ಮಾರುಕಟ್ಟೆ ಹಾಗೂ ಈ ಗ್ರಂಥಾಲಯ ಎರಡೂ ಪಾರಂಪರಿಕ ಕಟ್ಟಡಗಳ ಪಟ್ಟಿಯಲ್ಲಿವೆ. ಆದ್ರೀಗ ಗ್ರಂಥಾಲಯ ಕೆಡವಿಹಾಕಲಾಗಿದ್ದು, ಸ್ಥಳೀಯರು ಅಸಮಧಾನ ವ್ಯಕ್ತಪಡಿಸಿದ್ದಾರೆ..

ಸಿಎ ನಿವೇಶನ, ಪಾರ್ಕ್, ಮರಗಳ ಕಟಾವು ಹೀಗೆ ಕ್ಯಾಂಟೀನ್ ನಿರ್ಮಾಣ ವಿಚಾರದಲ್ಲಿ ಪಾಲಿಕೆ ಆಡಳಿತ ಪಕ್ಷ ಒಂದಾದ ಮೇಲೊಂದು ವಿರೋಧ ಕಟ್ಟಿಕೊಳ್ಳುತ್ತಲೇ ಬಂದಿದೆ. ಇದೀಗ ಪಾರಂಪಡಿಕ ಕಟ್ಟಡವನ್ನೂ ನೆಲಸಮ ಮಾಡಿ ಮತ್ತಷ್ಟು ವಿರೋಧಕ್ಕೆ ಕಾರಣವಾಗಿದ್ದಂತೂ ಸುಳ್ಳಲ್ಲ.

- ಗಣೇಶ ಹೆಗಡೆ, ಸುವರ್ಣ ನ್ಯೂಸ್, ಬೆಂಗಳೂರು