ಬೆಂಗಳೂರು, [ಆ.03]: ಮೈತ್ರಿ ಸರ್ಕಾರ ಮಾಡಿದ ತರಾತುರಿ ಒಂದೊಂದೇ ಕೆಲಸಗಳಿಗೆ ಬ್ರೇಕ್ ಹಾಕುತ್ತಿರುವ ನೂತನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಇದೀಗ ಬಿಬಿಎಂಪಿ ಮಂಡಿಸಿರುವ 2019-20ನೇ ಸಾಲಿನ ಬಜೆಟ್ ಅನ್ನು ಅನುಷ್ಠಾನ ಮಾಡದಂತೆ ಇಂದು [ಶನಿವಾರ] ಆದೇಶ ಹೊರಡಿಸಿದ್ದಾರೆ.

ಖಾತಾ ಬದಲಾವಣೆ ಲೆಕ್ಕಾಚಾರ: 12,755 ಕೋಟಿ ತಲುಪಿದ ಬಿಬಿಎಂಪಿ ಬಜೆಟ್‌!

ಸಂಪುಟ ಸಭೆ ಅನುಮೋದನೆ ಇಲ್ಲದೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ [ಬಿಬಿಎಂಪಿ]ಯ ಬಜೆಟ್ ಅನುಷ್ಠಾನ ಆಗ್ತಿರೋದಕ್ಕೆ ಆಕ್ಷೇಪ ಹಿನ್ನೆಲೆಯಲ್ಲಿ ಟೆಂಡರ್ ಕರೆಯುವ ಪ್ರಕ್ರಿಯೆ ನಿಲ್ಲಿಸಲು ಬಿಎಸ್ ವೈ ಆದೇಶಿಸಿದ್ದಾರೆ.

ಅನುಷ್ಠಾನಕ್ಕೆ ಯೋಗ್ಯವಲ್ಲ ಬಿಬಿಎಂಪಿ ಬಜೆಟ್‌!: ಆಯುಕ್ತರಿಂದಲೇ ಅಸಮಾಧಾನ!

2019-20ನೇ ಸಾಲಿನ 12,755 ಕೋಟಿ ರು. ಮೊತ್ತದ ಬಜೆಟ್ ಅನ್ನು ಫೆ.19 ರಂದು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಹೇಮಲತಾ ಗೋಪಾಲಯ್ಯ ಮಂಡಿಸಿದ್ದರು. ಆದ್ರೆ, ಬಜೆಟ್ ನ್ನು ಅನುಷ್ಠಾನ ಮಾಡದಂತೆ ಯಡಿಯೂರಪ್ಪ ಸೂಚಿಸಿದ್ದಾರೆ.

ಯಡಿಯೂರಪ್ಪ ಮಾತ್ರವಲ್ಲದೇ ಈ ಹಿಂದೆಯೇ ಖುದ್ದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅವರೇ ಬಜೆಟ್‌ ಅನುಷ್ಠಾನಕ್ಕೆ ಯೋಗ್ಯವಲ್ಲ ಎಂದು ಹೇಳಿದ್ದರು.ಅಷ್ಟೇ ಅಲ್ಲದೇ ಈ ಬಗ್ಗೆ ನಗರಾಭಿವೃದ್ಧಿ ಇಲಾಖೆಗೆ ಪತ್ರವನ್ನೂ ಸಹ ಬರೆದಿದ್ದನ್ನು ಇಲ್ಲಿ ಸ್ಮರಿಸಬಹುದು.