ಅಲ್ಲದೆ ‘ಆಘಾತಕಾರಿ ಪಟ್ಟಿ! ವಿಶ್ವದ ಟಾಪ್ 10 ಭ್ರಷ್ಟ ರಾಜಕೀಯ ಪಕ್ಷಗಳಲ್ಲಿ ಭಾರತೀಯ ರಾಜಕೀಯ ಪಕ್ಷ ಕೂಡ ಸೇರಿದೆ’ ಎಂಬ ಒಕ್ಕಣೆಯನ್ನೂ ಬರೆದಿದ್ದಾರೆ.

2018ರಲ್ಲಿ ಜಗತ್ತಿನ ಟಾಪ್ 10 ಭ್ರಷ್ಟ ರಾಜಕೀಯ ಪಕ್ಷಗಳು ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಅದರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಎರಡನೇ ಸ್ಥಾನ ಪಡೆದಿದೆ ಎಂದು ಹೇಳಲಾಗಿದೆ. ಇದನ್ನು ಬಿಜೆಪಿ ಸಂಸದ, ಇನ್ಫೋಸಿಸ್ ಮಂಡಳಿಯ ಮಾಜಿ ಸದಸ್ಯ ಟಿ.ವಿ ಮೋಹನ್ ದಾಸ್ ಪೈ ಅವರೂ ಕೂಡ ಶೇರ್ ಮಾಡಿದ್ದಾರೆ. 

ಅಲ್ಲದೆ ‘ಆಘಾತಕಾರಿ ಪಟ್ಟಿ! ವಿಶ್ವದ ಟಾಪ್ 10 ಭ್ರಷ್ಟ ರಾಜಕೀಯ ಪಕ್ಷಗಳಲ್ಲಿ ಭಾರತೀಯ ರಾಜಕೀಯ ಪಕ್ಷ ಕೂಡ ಸೇರಿದೆ’ ಎಂಬ ಒಕ್ಕಣೆಯನ್ನೂ ಬರೆದಿದ್ದಾರೆ. ಬಿಬಿಸಿ ಹಬ್ ಡಾಟ್ ಕಾಂ ಈ ಸುದ್ದಿಯನ್ನು ಪ್ರಕಟಿಸಿದ್ದು, ಐಎನ್‌ಸಿ ಸೇರಿದಂತೆ ವಿಶ್ವದ ಅನೇಕ ರಾಜಕೀಯ ಪಕ್ಷಗಳ ಹೆಸರನ್ನು ಇದರಲ್ಲಿ ಉಲ್ಲೇಖಿಸಲಾಗಿದೆ.

ಆದರೆ ಬಿಬಿಸಿ ನ್ಯೂಸ್ ಹಬ್ ಈ ರೀತಿಯ ಸಮೀಕ್ಷೆ ನಡೆಸಿದ್ದು ಸತ್ಯವೇ ಎಂದು ಪರಿಶೀಲಿಸಿದಾಗ ಇದು ಸುಳ್ಳುಸುದ್ದಿ ಎಂಬುದು ಸಾಬೀತಾಗಿದೆ. ವಾಸ್ತವವಾಗಿ ಬಿಬಿಸಿ ನ್ಯೂಸ್ ಹಬ್‌ಗೂ, ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಕಾರ್ಪೋರೇಶನ್ (ಬಿಬಿಸಿ)ಗೂ ಯಾವುದೇ ಸಂಬಂಧ ಇಲ್ಲ. ಅಲ್ಲದೆ ಈ ವೆಬ್‌ಸೈಟ್ ತನ್ನ ಸಂಸ್ಥೆಯ ಬಗ್ಗೆ ಬರೆದಿರುವ ವಿವರಣೆಯಲ್ಲಿ ಹಲವಾರು ವ್ಯಾಕರಣ ದೋಷಗಳಿವೆ ಹಾಗೂ ಈ ಪಟ್ಟಿಯ ಕುರಿತ ಲೇಖನ ಕೂಡ ಹಾಸ್ಯಾಸ್ಪದ ರೀತಿಯಲ್ಲಿದೆ. ಇದು ಸುಳ್ಳು ಸುದ್ದಿ ಎಂದು ತಿಳಿದ ಬಳಿಕ ಮೋಹನ್ ದಾಸ್ ಪೈ ತಮ್ಮ ಟ್ವೀಟನ್ನು ಡಿಲೀಟ್ ಮಾಡಿದ್ದಾರೆ.

(ವೈರಲ್ ಚೆಕ್ ಅಂಕಣ)