Asianet Suvarna News Asianet Suvarna News

ಬೆಲೆ ಏರಿಕೆ ತಲೆಬಿಸಿಯಲ್ಲಿ ಬೊಮ್ಮಾಯಿ ಸರ್ಕಾರ, ಗೌಡರ ಮನೆಯಲ್ಲಿ ಸಡಗರ; ಸೆ.24ರ ಟಾಪ್ 10 ಸುದ್ದಿ!

ಕೋರ್ಟ್ ಆವರಣದಲ್ಲಿ ನಡೆದ ಗ್ಯಾಂಗ್‌ವಾರ್‌ಗೆ ದೆಹಲಿ ಬೆಚ್ಚಿ ಬಿದ್ದಿದೆ. ಅಮೆರಿಕ ಪ್ರವಾಸದಲ್ಲಿರುವ ಮೋದಿ ಉಳಿದುಕೊಳ್ಳಲು 204 ವರ್ಷದ ಹಳೇ ಹೊಟೆಲ್ ಆಯ್ಕೆ ಮಾಡಿಕೊಂಡಿದ್ದಾರೆ.  RCB vs CSK ಪಂದ್ಯದಲ್ಲಿ ಹಲವು ದಾಖಲೆ ನಿರ್ಮಾಣವಾಗುವುದು ಖಚಿತವಾಗಿದೆ. ಗಂಡು ಮಗುವಿನ ತಂದೆಯಾದ ನಿಖಿಲ್ ಕುಮಾರಸ್ವಾಮಿ, ಬೊಮ್ಮಾಯಿ ಸರ್ಕಾರಕ್ಕೆ ಇದೀಗ ಕಾಂಗ್ರೆಸ್‌ನಿಂದ ತೀವ್ರ ಪ್ರತಿಭಟನೆ ಬಿಸಿ ಸೇರಿದಂತೆ ಸೆಪ್ಟೆಂಬರ್ 24ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
 
Basavaraj Bommai Government to nikhil kumaraswamy top 10 News of september 24 ckm
Author
Bengaluru, First Published Sep 24, 2021, 4:42 PM IST
  • Facebook
  • Twitter
  • Whatsapp

ದೆಹಲಿ ಕೋರ್ಟ್‌ನಲ್ಲಿ ಗ್ಯಾಂಗ್‌ವಾರ್: ಗ್ಯಾಂಗ್‌ಸ್ಟರ್‌ ಮೇಲೆ ದಾಳಿ, 6 ಸಾವು!

Basavaraj Bommai Government to nikhil kumaraswamy top 10 News of september 24 ckm

ದೆಹಲಿಯ ರೋಹಿಣಿ ಕೋರ್ಟ್(Rohini Court) ಆವರಣದಲ್ಲಿ ನಡೆದ ಗ್ಯಾಂಗ್‌ವಾರ್(Gangwar) ಪ್ರಕರಣ ಬೆಚ್ಚಿ ಬೀಳಿಸುವಂತೆ ಮಾಡಿದೆ. ಶುಕ್ರವಾರ, ಗ್ಯಾಂಗ್‌ಸ್ಟರ್‌ ಜಿತೇಂದ್ರ ಗೋಗಿ ಅವರನ್ನು ಕೋರ್ಟ್‌ನಲ್ಲಿ ಹಾಜರುಪಡಿಸಲು ಪೊಲೀಸರು ಕರೆತಂದಿದ್ದರು. ಆದರೆ ಈ ಸಂದರ್ಭದಲ್ಲಿ ಜಿತೇಂದ್ರನ ಹತ್ಯೆಗೈಯ್ಯಲು ಬಂದಿದ್ದ ಇಬ್ಬರು ಶೂಟರ್‌ಗಳು ಗೋಗಿಯ ಮೇಲೆ ಗುಂಡು ಹಾರಿಸಿದ್ದಾರೆ. 

ಅಮೆರಿಕದಲ್ಲಿ ಉಳಿದುಕೊಳ್ಳಲು 204 ವರ್ಷ ಹಳೇ ಹೋಟೆಲ್‌ ಆಯ್ಕೆ ಮಾಡಿದ್ದೇಕೆ ಪಿಎಂ?

Basavaraj Bommai Government to nikhil kumaraswamy top 10 News of september 24 ckm

ಪ್ರಧಾನಿ ನರೇಂದ್ರ ಮೋದಿ(Narendra Modi) ಅಮೆರಿಕ ಪ್ರವಾಸದಲ್ಲಿದ್ದು, ಇಲ್ಲಿ ನಡೆಯಲಿರುವ ಕ್ವಾಡ್ ಮತ್ತು ಯುಎನ್ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಜೋ ಬೈಡೆನ್(Joe Biden) ಅಮೆರಿಕ ಅಧ್ಯಕ್ಷರಾದ ನಂತರ ಪ್ರಧಾನಿ ಮೋದಿ ಮೊದಲ ಬಾರಿ ಅಮೆರಿಕಕ್ಕೆ ಬಂದಿದ್ದಾರೆ. ಪಿಎಂ ಮೋದಿಯವರ ಈ ಭೇಟಿ ಮೇಲೆ ಇಡೀ ವಿಶ್ವದ ಕಣ್ಣು ನೆಟ್ಟಿವೆ.

IPL 2021 ಕೊಹ್ಲಿ, ಧೋನಿ, ಎಬಿಡಿ; RCB vs CSK ಪಂದ್ಯದಲ್ಲಿ ನಿರ್ಮಾಣವಾಗಲಿದೆ ಹಲವು ದಾಖಲೆ!

Basavaraj Bommai Government to nikhil kumaraswamy top 10 News of september 24 ckm

IPL 2021 ಟೂರ್ನಿಯ ಎರಡನೇ ಭಾಗವನ್ನು ಸೋಲಿನೊಂದಿಗೆ ಆರಂಭಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bengaluru) ತಂಡ ಇದೀಗ ಚೆನ್ನೈ ಸೂಪರ್ ಕಿಂಗ್ಸ್(CSK) ವಿರುದ್ಧ ಹೋರಾಟಕ್ಕೆ ಸಜ್ಜಾಗಿದೆ. ಇದು ಉಭಯ ತಂಡಗಳಿಗೂ ಮಹತ್ವದ ಪಂದ್ಯವಾಗಿದೆ. ಈ ಪಂದ್ಯದಲ್ಲಿ ಉಭಯ ತಂಡದ ಕ್ರಿಕೆಟಿಗರು ಹಲವು ದಾಖಲೆ ನಿರ್ಮಿಸಲು ಸಜ್ಜಾಗಿದ್ದಾರೆ.

ಗಂಡು ಮಗುವಿಗೆ ತಂದೆಯಾದ ನಿಖಿಲ್ ಕುಮಾರಸ್ವಾಮಿ!

Basavaraj Bommai Government to nikhil kumaraswamy top 10 News of september 24 ckm

ಸ್ಯಾಂಡಲ್‌ವುಡ್ ಯುವರಾಜ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿ(Nikhil Kumaraswamy) ಹಾಗೂ ಪತ್ನಿ ರೇವತಿ(Revathi) ಗಂಡು ಮಗುವನ್ನು(baby Boy) ಕುಟುಂಬಕ್ಕೆ ಬರ ಮಾಡಿಕೊಂಡಿದ್ದಾರೆ. ಮಗು ಆಗಮನದ ಬಗ್ಗೆ ಜೆಡಿಎಸ್ ಶಾಸಕ ಶರವಣ(Sharavana) ಟ್ಟೀಟ್ ಮೂಲಕ ತಿಳಿಸಿದ್ದಾರೆ. 

ಆಪಲ್‌ನಿಂದ ಹೊಸ ಟೆಕ್ನಾಲಜಿ; ಬಳಕೆದಾರರ ಆತಂಕ, ಖಿನ್ನತೆ ಗುರುತಿಸಲಿದೆ ಐಫೋನ್?

Basavaraj Bommai Government to nikhil kumaraswamy top 10 News of september 24 ckm

ಕ್ನಾಲಜಿಯ ಹೊಸ ಸಾಧ್ಯತೆಗಳನ್ನು ನಿರಂತರವಾಗಿ ಶೋಧಿಸುವ ಆಪಲ್ ಇದೀಗ ಮತ್ತೊಂದು ಹೊಸ ಪ್ರಯತ್ನವನ್ನು ಮಾಡುತ್ತಿದೆ ಎಂದು ಹೇಳಲಾಗುತ್ತಿದೆ. ಬಳಕೆದಾರರ ಖಿನ್ನತೆ ಮತ್ತು ಆತಂಕವನ್ನು ಐಫೋನ್‌ಗಳು ಪತ್ತೆ ಹಚ್ಚುವ ತಂತ್ರಜ್ಞಾನವನ್ನು ಆಪಲ್ ಅಭಿವೃದ್ಧಿ ಮಾಡುತ್ತಿದೆ. ಈ ಕೆಲಸ ಇನ್ನೂ ಪ್ರಾಥಮಿಕ ಹಂತದಲಿದೆ ಎಂದು ಜರ್ನಲ್‌ವೊಂದರಲ್ಲಿ ಪ್ರಕಟವಾದ ವರದಿಯಲ್ಲಿ ತಿಳಿಸಲಾಗಿದೆ.

ಅಂಬಾನಿ ಆಸ್ತಿ, ಒಂದೇ ದಿನದಲ್ಲಿ 16,765 ಕೋಟಿ ಏರಿಕೆ: ವಾರೆನ್ ಬಫೆಟ್ ಹಿಂದಿಕ್ಕಲು ಸಜ್ಜು!

Basavaraj Bommai Government to nikhil kumaraswamy top 10 News of september 24 ckm

ಏಷ್ಯಾ ಮತ್ತು ಭಾರತದ ಅತಿದೊಡ್ಡ ಶ್ರೀಮಂತ ಮುಖೇಶ್ ಅಂಬಾನಿಯ(Mukesh Ambani) ಒಟ್ಟು ಆಸ್ತಿ ಮೌಲ್ಯದಲ್ಲಿ ಗುರುವಾರ 2.27 ಬಿಲಿಯನ್ ಡಾಲರ್ (ಸುಮಾರು 16,765 ಕೋಟಿ) ಹೆಚ್ಚಾಗಿದೆ. Bloomberg Billionaires Index ಪ್ರಕಾರ, ಅವರ ನಿವ್ವಳ ಮೌಲ್ಯ ಈಗ 95.4 ಬಿಲಿಯನ್ ಡಾಲರ್ ತಲುಪಿದೆ.

ಬೆಲೆ ಏರಿಕೆಗೆ ವಿರೋಧ: ಬೊಮ್ಮಾಯಿ ಸರ್ಕಾರ ಕಟ್ಟಿಹಾಕಲು ಕಾಂಗ್ರೆಸ್‌ ನಿರ್ಧಾರ

Basavaraj Bommai Government to nikhil kumaraswamy top 10 News of september 24 ckm

 ಬೆಲೆ ಏರಿಕೆಯನ್ನ ವಿರೋಧಿಸಿದ ಕಾಂಗ್ರೆಸ್‌ ಇಂದು(ಶುಕ್ರವಾರ) ನಗರದಲ್ಲಿ ಟಾಂಗಾ ಚಲೋ ನಡೆಸಿದೆ. ಕೆಪಿಸಿಸಿ ಕಚೇರಿಯಿಂದ ಹೊರಟ ಜಾಥಾ ವಿಧಾನಸೌಧದವರೆಗೆ ಸಾಗಲಿದೆ. ಅಧಿವೇಶನದ ಕೊನೆ ದಿನ ಕಾಂಗ್ರೆಸ್‌ ಟಾಂಗಾ ಚಲೋ ನಡೆಸಿದೆ.

ಚೀನಾ ವಿರುದ್ಧ ಮೋದಿ ಕ್ವಾಡ್‌ ಸಮರ: ಪಿಎಂ ಭಾಷಣದ ಬಗ್ಗೆ ಕುತೂಹಲ!

Basavaraj Bommai Government to nikhil kumaraswamy top 10 News of september 24 ckm

ಇಂಡೋ-ಪೆಸಿಫಿಕ್‌ ವಲಯದಲ್ಲಿ ಹೆಚ್ಚುತ್ತಿರುವ ಚೀನಾ(China) ಪ್ರಭಾವ ತಗ್ಗಿಸಲು ರಚನೆಯಾಗಿರುವ ‘ಕ್ವಾಡ್‌’ (ಭಾರತ, ಅಮೆರಿಕ, ಆಸ್ಪ್ರೇಲಿಯಾ, ಜಪಾನ್‌) ದೇಶಗಳ ಮಹತ್ವದ ಶೃಂಗಸಭೆ ಶುಕ್ರವಾರ ಇಲ್ಲಿ ನಿಗದಿಯಾಗಿದೆ. 
 
Follow Us:
Download App:
  • android
  • ios