ಬಸವನಗೌಡ ಪಾಟೀಲ್ ಯತ್ನಾಳ ಬಿಜೆಪಿ ಸೇರುವುದು ನಿಶ್ಚಿತ: ಮತ್ತೊಬ್ಬ ಪ್ರಭಾವಿ ಮುಂಖಂಡನನ್ನು ಸೋಲಿಸಲು ತಂತ್ರ ?

First Published 24, Mar 2018, 7:13 PM IST
Basavanagowda Patil Yatnal soon join BJP
Highlights

ಬಿಜೆಪಿ ಹಿರಿಯ ಮುಖಂಡ ಪ್ರಕಾಶ ಜಾವಡೇಕರ್, ರಾಜ್ಯ ಉಸ್ತುವಾರಿ ಮುರಳಿಧರರಾವ್, ಜಗದೀಶ ಶೆಟ್ಟರ್, ಯಡಿಯೂರಪ್ಪ, ಪಿಯುಷ್ ಗೋಯಲ್ ನೇತೃತ್ವದಲ್ಲಿ ಸಭೆ ನಡೆಯಿತು

ಬೆಂಗಳೂರು(ಮಾ.24): ಉತ್ತರ ಕರ್ನಾಟಕದ ಪ್ರಭಾವಿ ನಾಯಕನನ್ನು ಸೋಲಿಸಲು ಬಿಜೆಪಿ ರಣತಂತ್ರ ಹೂಡುತ್ತಿದೆ.

ಅದೇ ಭಾಗದ ಪ್ರಮುಖ ನಾಯಕ ಬಸವನಗೌಡ ಪಾಟೀಲ್ ಯತ್ನಾಳ್ ಬೆಂಗಳೂರಿನ ಡಾಲರ್ಸ್ ಕಾಲೋನಿಯ ಯಡಿಯೂರಪ್ಪ ಅವರ ನಿವಾಸದಲ್ಲಿ ಬಿಜೆಪಿ ಸೇರ್ಪಡೆ ವಿಚಾರವಾಗಿ ಸಭೆ ಸೇರಿದ್ದರು. ಬಿಜೆಪಿ ಹಿರಿಯ ಮುಖಂಡ ಪ್ರಕಾಶ ಜಾವಡೇಕರ್, ರಾಜ್ಯ ಉಸ್ತುವಾರಿ ಮುರಳಿಧರರಾವ್, ಜಗದೀಶ ಶೆಟ್ಟರ್, ಯಡಿಯೂರಪ್ಪ, ಪಿಯುಷ್ ಗೋಯಲ್ ನೇತೃತ್ವದಲ್ಲಿ ಸಭೆ ನಡೆಯಿತು. ಶೆಟ್ಟರ್-ಯತ್ನಾಳ ಅವರ ಮಧ್ಯ ಇದ್ದ ವೈಮನಸ್ಸನ್ನು ನಿವಾರಿಸುವ ಪ್ರಕಾಶ್ ಜಾವಡೇಕರ್ ಮುಂದಾಗಿದ್ದು ಒಟ್ಟಾಗಿ ಚುನಾವಣೆ ಎದುರಿಸಿ ಅಧಿಕಾರಕ್ಕೆ ಬರೋಣ ಎಂದಿದ್ದಾರೆ' ಎನ್ನಲಾಗಿದೆ.

loader