ಯತ್ನಾಳ್’ಗೆ ಬಿಜೆಪಿ ನೋ ಎಂಟ್ರಿ

First Published 6, Mar 2018, 2:09 PM IST
basavana gowda Patil no Entry to BJP
Highlights

ಅಮಿತ್ ಶಾ ನಾಗಪುರಕ್ಕೆ ಹೋದಾಗ ಸ್ಥಳೀಯ ಸಂಘ ನಾಯಕರು  ಯಾವುದೇ ಕಾರಣಕ್ಕೂ ಬಸನಗೌಡ ಪಾಟೀಲ ಯತ್ನಾಳ್ ಅವರನ್ನು  ಪಕ್ಷಕ್ಕೆ ಕರೆದುಕೊಳ್ಳಬೇಡಿ ಎಂದು ಹೇಳಿದ್ದು ಬಹುತೇಕ ಯತ್ನಾಳ್  ಘರ್ ವಾಪಸಿ ಸಾಧ್ಯವಿಲ್ಲ ಎಂದು ಸೂಚನೆ ನೀಡಲಾಗಿದೆಯಂತೆ.

ಬೆಂಗಳೂರು (ಮಾ. 06): ಅಮಿತ್ ಶಾ ನಾಗಪುರಕ್ಕೆ ಹೋದಾಗ ಸ್ಥಳೀಯ ಸಂಘ ನಾಯಕರು  ಯಾವುದೇ ಕಾರಣಕ್ಕೂ ಬಸನಗೌಡ ಪಾಟೀಲ ಯತ್ನಾಳ್ ಅವರನ್ನು  ಪಕ್ಷಕ್ಕೆ ಕರೆದುಕೊಳ್ಳಬೇಡಿ ಎಂದು ಹೇಳಿದ್ದು ಬಹುತೇಕ ಯತ್ನಾಳ್
ಘರ್ ವಾಪಸಿ ಸಾಧ್ಯವಿಲ್ಲ ಎಂದು ಸೂಚನೆ ನೀಡಲಾಗಿದೆಯಂತೆ.

ಯತ್ನಾಳ್ ಅವರು ಸ್ಥಳೀಯ ಸಂಘ ನಾಯಕರಿಗೆ  ಏಕವಚನದಲ್ಲಿ ಬಯ್ಯುತ್ತಾರೆ, ಕ್ಯಾರೇ ಅನ್ನುವುದಿಲ್ಲ ಎನ್ನುವುದು  ಉತ್ತರ ಕರ್ನಾಟಕದ ಸಂಘ ನಾಯಕರ ಆಕ್ರೋಶಕ್ಕೆ  ಮುಖ್ಯ ಕಾರಣವಂತೆ. ಅಮಿತ್ ಶಾ ಸಂಘದ ನಾಯಕರಿಗೆ
‘ಯತ್ನಾಳ್‌ರನ್ನು ನಾನು ಫೋನ್ ಮಾಡಿ ಕರೆದಿಲ್ಲ, ಅವರೇ ಬಂದು  ಸೇರಿಸಿಕೊಳ್ಳಿ ಎಂದು ದುಂಬಾಲು ಬಿದ್ದಿದ್ದರು’ ಎಂದು ಹೇಳಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ವಿಜಯಪುರದಲ್ಲಿ ಗೆಲ್ಲಲು  ಬಸನಗೌಡರು ಬೇಕೇ ಬೇಕು ಎಂದು ಹೇಳುತ್ತಿದ್ದ ಯಡಿಯೂರಪ್ಪನವರಿಗೆ ಮಾತ್ರ ಯತ್ನಾಳ್ ಕೊನೆಯ ಗಳಿಗೆಯಲ್ಲಿ ಕಾಂಗ್ರೆಸ್ ಜೊತೆ ಕೈ ಜೋಡಿಸಿದರೆ ಏನು ಮಾಡುವುದು ಎಂಬ ಚಿಂತೆ ಶುರುವಾಗಿದೆ.  

ರಾಜಕಾರಣದ ಬಗ್ಗೆ ಹೆಚ್ಚಿನ ಮಾಹಿತಿಗೆ ಇಂಡಿಯಾ ಗೇಟ್ ಕ್ಲಿಕ್ ಮಾಡಿ 

loader