Asianet Suvarna News Asianet Suvarna News

ಇಂದು ನಾಡಿನಾದ್ಯಂತ ಬಸವ ಜಯಂತಿ ಸಂಭ್ರಮ: ಪ್ರಧಾನಿ ಮೋದಿಯವರಿಂದ ‘ವಚನ’ ಲೋಕಾರ್ಪಣೆ

ತಮ್ಮ ವಚನಗಳ ಮೂಲಕವೇ ಕತ್ತಲೆಯಲ್ಲಿರುವ ಜನರ ಮನಸ್ಥಿತಿಯನ್ನು ಬೆಳಕಿನಡೆಗೆ ತಂದ ಮಹಾನ್ ಪುರುಷ, ಸರ್ವರೂ ಸಮಾನರು ಎಂದು ತೊರಿಸಿಕೊಟ್ಟ ಮಹಾನ್ ಚೇತನ  ಗುರು ಬಸವಣ್ಣನವರ ಜಯಂತಿಯನ್ನು ಇಂದು ದೇಶಾದ್ಯಂತ ಸಂಭ್ರಮ ಸಡಗರದಿಂದ  ಆಚರಿಸಲಾಗುತ್ತದೆ.

Basava Jayanti Celebration

ಬೆಂಗಳೂರು(ಎ.29): ತಮ್ಮ ವಚನಗಳ ಮೂಲಕವೇ ಕತ್ತಲೆಯಲ್ಲಿರುವ ಜನರ ಮನಸ್ಥಿತಿಯನ್ನು ಬೆಳಕಿನಡೆಗೆ ತಂದ ಮಹಾನ್ ಪುರುಷ, ಸರ್ವರೂ ಸಮಾನರು ಎಂದು ತೊರಿಸಿಕೊಟ್ಟ ಮಹಾನ್ ಚೇತನ  ಗುರು ಬಸವಣ್ಣನವರ ಜಯಂತಿಯನ್ನು ಇಂದು ದೇಶಾದ್ಯಂತ ಸಂಭ್ರಮ ಸಡಗರದಿಂದ  ಆಚರಿಸಲಾಗುತ್ತದೆ.

880 ವರ್ಷಗಳ ಹಿಂದೆ ಸಾವಿರಾರು ವಚನ ರಚನೆ ಮಾಡುವ ಮೂಲಕ ಸಮಾಜದಲ್ಲಿನ ಕಂದಾಚಾರ, ಮೂಢಾಚಾರ, ಸ್ತ್ರೀ ಅಸಮಾನತೆ ತೊಡೆದು ಹಾಕಿ ನವ ಯುಗ ನಿರ್ಮಾಣ ಮಾಡಿದ ಕ್ರಾಂತಿಯ ಹರಿಕಾರ ಗುರು ಬಸವಣ್ಣನವರ  884ನಯ ಜನ್ಮದಿನವನ್ನು ಇಂದು ದೇಶಾದ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಗುವುದು. ವಚನಗಳ ಮೂಲಕ ಸಮಾನತೆಯನ್ನು ಸಾರಿದ  ಕ್ರಾಂತಿಯ ಹರಿಕಾರ ವಿಶ್ವಗುರು ಬಸವಣ್ಣನವರ  ಹಾಗೂ  ಅವರ ಸಮಕಾಲೀನ ಶರಣರ ವಚನಗಳನ್ನು  23 ಭಾಷೆಗಳಿಗೆ ಭಾಷಾಂತರಿಸಿದ  ‘ವಚನ’ ಪುಸ್ತಕವು ಇಂದು ದೆಹಲಿಯಲ್ಲಿ ಅನಾವರಣಗೊಳ್ಳಲಿದೆ. ಸಂಸತ್ ಭವನದ ಮುಂದಿರುವ ಗುರು ಬಸವಣ್ಣನವರ ಪುತ್ಥಳಿಗೆ ಪುಷ್ಪನಮನ ಸಲ್ಲಿಸುವ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಲೋಕಾರ್ಪಣೆ ಮಾಡಲಿದ್ದಾರೆ. 

ಸಾಹಿತ್ಯಕ ವಿದ್ವಾಂಸರಾದ ದಿ. ಎಂ. ಎಂ. ಕಲ್ಬರ್ಗಿ ಸಂಪಾದಿಸಿದ್ದ 23 ವಚನ ಸಂಪುಟ 20 ಜನರಿಂದ ಭಾಷಾಂತರಗೊಂಡಿದೆ. ವಚನ ಸಂಪುಟಗಳನ್ನು ಬಸವ ಸಮಿತಿ ಸಂಸ್ಥೆಯ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ದೆಹಲಿಯಲ್ಲಿ ನಡೆಯಲಿದ್ದು,  ಇದರ ಅಂಗವಾಗಿ ‘ವಚನ’ ಎನ್ನುವ ಬೃಹತ್ ವಚನ ಸಂಗ್ರಹ ಪುಸ್ತಕವನ್ನು  ಬಿಡುಗಡೆ ಮಾಡಲಾಗುವುದು. 

ಒಟ್ಟಿನಲ್ಲಿ, ಬಸವ ಜಯಂತಿಯಂದು ಬಸವ ತತ್ವದ ಜೊತೆ ಜೊತೆಗೆ  ಕರ್ನಟಕದ ವಚನ ಸಾಹಿತ್ಯವನ್ನು  ಪ್ರಧಾನಿ ದೇಶಕ್ಕೆ ಸಮರ್ಪಣೆ ಮಾಡುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ. ಸಮಾಜ ಸುಧಾರಕ  ಗುರು ಬಸವಣ್ಣನವರ  ವಚನಗಳು  ಇಡೀ ವಿಶ್ವದೆಲ್ಲಡೆ   ಹಬ್ಬಲಿ ಎನ್ನುವುದು ನಮ್ಮ ಆಶಯ.

Follow Us:
Download App:
  • android
  • ios