ತಮಿಳುನಾಡಿನ ಮದುರೈನ ದೇವಸ್ಥಾನವೊಂದರಲ್ಲಿ, ಸಂಪ್ರದಾಯದ ಹೆಸರಲ್ಲಿ ಕೆಲವು ಹುಡುಗಿಯರನ್ನು ಬಲವಂತವಾಗಿ ಎದೆ ಮೇಲೆ ಬಟ್ಟೆಯಿಲ್ಲದೆ, 15 ದಿನ ಇರಿಸಿದ್ದ ಆಘಾತಕಾರಿ ಘಟನೆ ನಡೆದಿದೆ. ಏಳು ಮಂದಿ ಹುಡುಗಿಯರಿಗೆ ಎದೆಯ ಮೇಲೆ ಆ‘ರಣ ಮಾತ್ರ ಧರಿಸಲು ಅವಕಾಶ ನೀಡಿ, ದೇವತೆಯ ರೀತಿ ಸಿಂಗರಿಸಿ, ಪುರುಷ ಅರ್ಚಕರ ನಡುವೆ 15 ದಿನ ಕಳೆಯಲು ಬಿಡಲಾಗಿದೆ.
ಮದುರೈ(ಸೆ.28): ತಮಿಳುನಾಡಿನ ಮದುರೈನ ದೇವಸ್ಥಾನವೊಂದರಲ್ಲಿ, ಸಂಪ್ರದಾಯದ ಹೆಸರಲ್ಲಿ ಕೆಲವು ಹುಡುಗಿಯರನ್ನು ಬಲವಂತವಾಗಿ ಎದೆ ಮೇಲೆ ಬಟ್ಟೆಯಿಲ್ಲದೆ, 15 ದಿನ ಇರಿಸಿದ್ದ ಆಘಾತಕಾರಿ ಘಟನೆ ನಡೆದಿದೆ. ಏಳು ಮಂದಿ ಹುಡುಗಿಯರಿಗೆ ಎದೆಯ ಮೇಲೆ ಆ‘ರಣ ಮಾತ್ರ ಧರಿಸಲು ಅವಕಾಶ ನೀಡಿ, ದೇವತೆಯ ರೀತಿ ಸಿಂಗರಿಸಿ, ಪುರುಷ ಅರ್ಚಕರ ನಡುವೆ 15 ದಿನ ಕಳೆಯಲು ಬಿಡಲಾಗಿದೆ.
ಇದೊಂದು ವಾರ್ಷಿಕ ಆಚರಣೆ ಎನ್ನಲಾಗಿದ್ದು, ಹೆತ್ತವರು ಸ್ವಯಂ ಪ್ರೇರಿತರಾಗಿ ತಮ್ಮ ಹೆಣ್ಣು ಮಕ್ಕಳನ್ನು ಕಳುಹಿಸಿದ್ದಾರೆ. ಮೈ ನೆರೆಯದ ಹುಡುಗಿಯರನ್ನಷ್ಟೇ ದೇವಸ್ಥಾನಕ್ಕೆ ಕಳುಹಿಸಲಾಗಿದೆ ಎನ್ನಲಾಗಿದೆ. ‘ಇದೊಂದು ಪುರಾತನ ಸಂಪ್ರದಾಯ. ಹೆತ್ತವರು ಸ್ವಯಂ ಪ್ರೇರಿತರಾಗಿ ತಮ್ಮ ಹುಡುಗಿಯರನ್ನು ಕಳುಹಿಸುತ್ತಾರೆ’ ಎಂದು ಮದುರೈ ಜಿಲ್ಲಾಧಿಕಾರಿ ಕೆ. ವೀರ ರಾಘವರಾವ್ ಹೇಳಿದ್ದಾರೆ. ವಿಷಯಕ್ಕೆ ಸಂಬಂಧಿಸಿ ಜಿಲ್ಲಾಡಳಿತ ಮಧ್ಯಪ್ರವೇಶಿಸಿದ್ದು, ಹುಡುಗಿಯರಿಗೆ ದೇಹಪೂರ್ತಿ ಬಟ್ಟೆ ಧರಿಸುವಂತೆ ಮತ್ತು ಅವರಿಗೆ ಯಾವುದೇ ನಿಂದನೆ ಅಥವಾ ಕಿರುಕುಳವಾಗದಂತೆ ಎಚ್ಚರಿಕೆ ನೀಡಿದೆ. ಎದೆಯ ಮೇಲೆ ಬಟ್ಟೆ ‘ರಿಸದ ಹುಡುಗಿಯರು ದೇವಸ್ಥಾನದೊಳಗೆ ಪ್ರಾರ್ಥನೆ ಸಲ್ಲಿಸುವುದು ಮತ್ತು ದೇವಸ್ಥಾನದ ಆವರಣದೊಳಗೆ ಸ್ನಾನ ಮಾಡುತ್ತಿರುವ ವಿಡಿಯೋವೊಂದನ್ನು ಸುದ್ದಿ ಸಂಸ್ಥೆಯೊಂದು ಪ್ರಕಟಿಸಿದ ಬಳಿಕ, ವಿಷಯ ಹೆಚ್ಚಿನ ಚರ್ಚೆಗೆ ಬಂದಿದೆ.
