ನಾಗರಿಕರೇ ಎಚ್ಚರ : 200, 2000 ರು. ನೋಟು ಬದಲಾಯಿಸಲು ಸಾಧ್ಯವಿಲ್ಲ

Banks will not accept soiled or mutilated Rs 200, Rs 2000
Highlights

ನಿಮ್ಮ ಬಳಿ ಕೊಳೆಯಾದ ಹಾಗೂ ಮಣ್ಣಾದ 200 ಹಾಗೂ 2000 ರು. ನೋಟುಗಳಿದ್ದಲ್ಲಿ ಅವನ್ನು ಬದಲಾವಣೆ ಮಾಡಲು ಬಯಸಿದಲ್ಲಿ ಅದು ಸಾಧ್ಯವಾಗುವುದಿಲ್ಲ. ಆದ್ದರಿಂದ ಈ ನಿಟ್ಟಿನಲ್ಲಿ ನೀವು ಎಚ್ಚರಿಕೆ ವಹಿಸುವುದು ಅತ್ಯಗತ್ಯ.

ನವದೆಹಲಿ [ಮೇ .14] : ನಿಮ್ಮ ಬಳಿ ಕೊಳೆಯಾದ ಹಾಗೂ ಮಣ್ಣಾದ 200 ಹಾಗೂ 2000 ರು. ನೋಟುಗಳಿದ್ದಲ್ಲಿ ನೀವು ಅವನ್ನು ಬದಲಾವಣೆ ಮಾಡಲು ಬಯಸಿದಲ್ಲಿ ಅದು ಸಾಧ್ಯವಾಗುವುದಿಲ್ಲ. ಆದ್ದರಿಂದ ಈ ನಿಟ್ಟಿನಲ್ಲಿ ನೀವು ಎಚ್ಚರಿಕೆ ವಹಿಸುವುದು ಅತ್ಯಗತ್ಯ.

ಇದಕ್ಕೆ ಕಾರಣ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ 2009ರ ನೋಟುಗಳ ಬದಲಾವಣೆ ನಿಯಮವಾಗಿದೆ. ಈ ನಿಯಮದ ಅಡಿಯಲ್ಲಿ 1, 2, 5, 10, 20, 50, 500, 1000 ನೋಟುಗಳನ್ನು ಮಾತ್ರವೇ ಬದಲಾವಣೆ ಮಾಡಲು ಅವಕಾಶವಿದೆ.  

ಆದ್ದರಿಂದ ಈ ನಿಯಮದ ಅಡಿಯಲ್ಲಿ ನೋಟು ಅಮಾನ್ಯೀಕರಣದ ನಂತರ ಹೊಸದಾಗಿ ಬಂದ 200 ಹಾಗೂ 2000 ನೋಟುಗಳು ಕೊಳೆಯಾಗಿದ್ದಲ್ಲಿ, ಹರಿದಲ್ಲಿ  ಯಾವುದೇ ಬ್ಯಾಂಕ್ ಗೆ ತೆರಳಿದರೂ  ಕೂಡ ಬದಲಾಯಿಸಿಕೊಡುವುದಿಲ್ಲ.

ಕಳೆದ 2016ರ ನವೆಂಬರ್ ತಿಂಗಳಲ್ಲಿ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ 500 ಹಾಗೂ 1000 ಮುಖ ಬೆಲೆಯ ನೋಟುಗಳನ್ನು ಅಮಾನ್ಯ ಮಾಡಿತ್ತು. ಅದಾದ ಬಳಿಕ ಹೊಸದಾಗಿ 200 ಹಾಗೂ 2000 ರು. ನೋಟುಗಳನ್ನು  ಆರ್ ಬಿಐ ಪರಿಚಯಿಸಿತ್ತು.

loader