ಕೋಲ್ಕತ್ತಾ(ಮಾ.03): ಇನ್ನು ಮುಂದೆ ಎಟಿಎಂ'ಗಳಲ್ಲಿ 4ಕ್ಕಿಂತ ಹೆಚ್ಚು ಬಾರಿ ವಿತ್'ಡ್ರಾ ಮಾಡಿದರೆ 150 ರೂ. ಕಡಿತಗೊಳ್ಳುತ್ತದೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ 150 ರೂ. ಕಡಿತಗೊಳ್ಳುವುದರ ಬಗ್ಗೆ ಬ್ಯಾಂಕುಗಳು ಸ್ಪಷ್ಟಿಕರಣ ನೀಡಿವೆ

ಕೋಲ್ಕತ್ತಾ(ಮಾ.03): ಇನ್ನು ಮುಂದೆ ಎಟಿಎಂ'ಗಳಲ್ಲಿ 4ಕ್ಕಿಂತ ಹೆಚ್ಚು ಬಾರಿ ವಿತ್'ಡ್ರಾ ಮಾಡಿದರೆ 150 ರೂ. ಕಡಿತಗೊಳ್ಳುತ್ತದೆ ಎಂಬ ಸುದ್ದಿ ಹರಿದಾಡುತ್ತಿದೆ.

ಆದರೆ 150 ರೂ. ಕಡಿತಗೊಳ್ಳುವುದರ ಬಗ್ಗೆ ಬ್ಯಾಂಕುಗಳು ಸ್ಪಷ್ಟಿಕರಣ ನೀಡಿವೆ

1) ವೇತನ ಖಾತೆ (salary account), ಹಿರಿಯ ನಾಗರಿಕರು ಹಾಗೂ 'ಆದ್ಯತೆ'ಗ್ರಾಹಕರಿಗೆ ಅನ್ವಯವಾಗುವುದಿಲ್ಲ.

2) ವೇತನ, ಹಿರಿಯ ನಾಗರಿಕರು ಹಾಗೂ ಆದ್ಯತೆಯ ಗ್ರಾಹಕರು ಎಟಿಎಂ'ನಲ್ಲಿ ಎಷ್ಟು ಬಾರಿ ಬೇಕಾದರೂ ವಿತ್'ಡ್ರಾ ಮಾಡಿಕೊಳ್ಳಬಹುದು.

3) ಸದ್ಯ ಹೆಚ್'ಡಿಎಫ್'ಸಿ, ಆಕ್ಸಿಸ್ ಹಾಗೂ ಐಸಿಐಸಿಐ ಬ್ಯಾಂಕ್'ಗಳಲ್ಲಿ 5ನೇ ಬಾರಿ ವಿತ್'ಡ್ರಾ ಮಾಡಿದರೆ ಹಣ ಕಡಿತಗೊಳ್ಳುತ್ತದೆ.

4) ಮೊದಲೆಲ್ಲ ಈ ಮೂರು ಬ್ಯಾಂಕ್'ಗಳಲ್ಲಿ ತಿಂಗಳಿಗೆ 5ನೇ ಬಾರಿ ವಿತ್'ಡ್ರಾ ಮಾಡುವಾಗ 100 ರೂ. ಹಣ ಕಡಿತಗೊಳ್ಳುತ್ತಿತ್ತು. ಈಗ 150 ರೂ. ಕಡಿತಗೊಳ್ಳುತ್ತದೆ.

5) ಆದ್ಯತಾ ಗ್ರಾಹಕರು: ಬ್ಯಾಂಕಿನಲ್ಲಿ ಕನಿಷ್ಠ ಒಂದು ಲಕ್ಷ ರೂ. ಠೇವಣಿಯಿಟ್ಟವರು ಆದ್ಯತಾ ಗ್ರಾಹಕರಾಗುತ್ತಾರೆ. ಇವರು ಎಷ್ಟು ಬಾರಿ ಬೇಕಾದರೂ ಎಟಿಎಂ'ನಲ್ಲಿ ವಿತ್'ಡ್ರಾ ಮಾಡಿಕೊಳ್ಳಬಹುದು. ಏಕೆಂದರೆ ಇವರಿಂದ ಆದಾಯ ಬರುವುದರಿಂದ ಬ್ಯಾಂಕು'ಗಳು ಆದ್ಯತಾ ಗ್ರಾಹಕರೆಂದು ಪರಿಗಣಿಸಿದೆ.

6) ಎಸ್'ಬಿಐ ಹಾಗೂ ಇತರ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್'ಗಳ ಗ್ರಾಹಕರು ತಮ್ಮ ಉಳಿತಾಯ ಖಾತೆಯಲ್ಲಿ ಕನಿಷ್ಠ 25 ಸಾವಿರ ಠೇವಣಿಯಿಟ್ಟಿದ್ದರೆ ಅವರ ಬ್ಯಾಂಕ್'ಗಳಲ್ಲಿ ಎಷ್ಟು ಸಾರಿ ಬೇಕಾದರೂ ಹಣ ಡ್ರಾ ಮಾಡಿಕೊಳ್ಳಬಹುದು. ಇತರ ಬ್ಯಾಂಕ್'ಗಳಲ್ಲಿ 3 ಬಾರಿ ಉಚಿತ ಅವಕಾಶವಿರುತ್ತದೆ. ಎಸ್'ಬಿಐ ಶುಲ್ಕ ಏಪ್ರಿಲ್ 1ರಿಂದ ಅನ್ವಯವಾಗಲಿದೆ

7) ಇತರ ಬ್ಯಾಂಕ್'ಗಳಲ್ಲಿ(ಖಾಸಗಿ) ಕನಿಷ್ಠ 1 ಲಕ್ಷ ರೂ. ಠೇವಣಿಯಿಟ್ಟಿದ್ದರೆ ಅವರು ಎಷ್ಟು ಬಾರಿ ಬೇಕಾದರೂ ಹಣ ಡ್ರಾ ಮಾಡಿಕೊಳ್ಳಬಹುದು. ಅವರಿಗೆ ಯಾವುದೇ ಶುಲ್ಕವಿರುವುದಿಲ್ಲ.

8) ಎಸ್'ಬಿಐ'ನಲ್ಲಿ ಒಂದು ಸಾವಿರಕ್ಕಿಂತ ಕಡಿಮೆ ಠೇವಣಿಯಿಟ್ಟಿದ್ದ ಖಾತೆದಾರರಿಗೆ 5 ಬಾರಿಗಿಂತ ಹೆಚ್ಚು ಬಾರಿ ಹಣ ಡ್ರಾ ಮಾಡಿಕೊಂಡರೆ ಅವರಿಗೆ ಹಣ ಕಡಿತಗೊಳ್ಳುತ್ತದೆ.