ದೇಶದಲ್ಲಿ ಪ್ರತಿವರ್ಷ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ. ಈ ಸಂದರ್ಭದಲ್ಲಿ ಲಕ್ಷಾಂತರ ಮಂದಿಯ ಬಳಿಯಿರುವ ನೋಟುಗಳಿಗೆ ಬಣ್ಣ ತಾಕುತ್ತದೆ. ಈ ಕಾರಣಕ್ಕಾಗಿಯೇ ಆರ್'ಬಿಐ ಸ್ಪಷ್ಟೀಕರಣ ನೀಡಿದೆ.

ಮುಂಬೈ(ಮಾ.10): ವ್ಯಾಟ್ಸಪ್'ನಲ್ಲಿ ಹೋಳಿ ಹಬ್ಬದ ಸಂದರ್ಭದಲ್ಲಿ ಬಣ್ಣ ತಾಕಿರುವ ನೋಟುಗಳು, ಬಣ್ಣ ಮೆತ್ತಿಕೊಳ್ಳುವ ನೋಟುಗಳನ್ನು ಬ್ಯಾಂಕುಗಳು ಸ್ವೀಕರಿಸುವುದಿಲ್ಲ' ಎಂಬ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ಆರ್'ಬಿಐ ಸ್ಪಷ್ಟಿಕರಣ ನೀಡಿದೆ.

'ಬಣ್ಣ ತಾಕಿರುವ ಹೊಸ 500 ಹಾಗೂ 2000 ರೂ. ನೋಟುಗಳನ್ನು ಸ್ವೀಕರಿಸುತ್ತವೆ. ಇದು ಆಕಸ್ಮಿಕ ಉದ್ದೇಶಕ್ಕೆ ಆಗಿರಬೇಕೆ ಹೊರತು ಉದ್ದೇಶಪೂರ್ವಕವಾಗಿ ಆಗಿರಬಾರದು. ಸಾರ್ವಜನಿಕರು ನೋಟುಗಳಿಗೆ ಸಾಧ್ಯವಾದಷ್ಟು ಬಣ್ಣ ಹಚ್ಚುವುದನ್ನು ತಡೆಯಬೇಕು. ಅಲ್ಲದೆ ನಾವು ನೋಟುಗಳು ಶುದ್ದವಾಗಿರಬೇಕೆಂದು ಬಯಸುತ್ತೇವೆ. ಆದರೆ ಯಾವುದೇ ಬ್ಯಾಂಕ್'ಗಳಿಗೆ ಬಣ್ಣ ತಾಕಿರುವ ನೋಟುಗಳನ್ನು ಸ್ವೀಕರಿಸಬಾರದೆಂಬ ಸುತ್ತೋಲೆಯನ್ನು ಹೊರಡಿಸಿಲ್ಲ' ಎಂದು ಆರ್'ಬಿಐ ಸ್ಪಷ್ಟಪಡಿಸಿದೆ.

ದೇಶದಲ್ಲಿ ಪ್ರತಿವರ್ಷ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ. ಈ ಸಂದರ್ಭದಲ್ಲಿ ಲಕ್ಷಾಂತರ ಮಂದಿಯ ಬಳಿಯಿರುವ ನೋಟುಗಳಿಗೆ ಬಣ್ಣ ತಾಕುತ್ತದೆ. ಇದು ಉದ್ದೇಶಪೂರ್ವಕವಾಗಿರಬಾರದೆಂಬ ಕಾರಣಕ್ಕಾಗಿಯೇ ಆರ್'ಬಿಐ ಸ್ಪಷ್ಟೀಕರಣ ನೀಡಿದೆ.