ರಾಷ್ಟ್ರೀಕೃತ ಬ್ಯಾಂಕುಗಳಿಂದ ಖಾಸಗಿ ಕಂಪನಿಗಳು ಸಾಲ ಪಡೆದುಕೊಂಡಿದ್ದು, ಇನ್ನೂ ಪಾವತಿಸದ ಹಣದ ಮೊತ್ತ  2 ಜಿ ಸ್ಪೆಕ್ಟ್ರಮ್ ಹಗರಣಕ್ಕಿಂತಲೂ 10 ಪಟ್ಟು ದೊಡ್ಡದಿದೆ ಎಂದು ಯೆಚೂರಿ ನುಡಿದಿದ್ದಾರೆ.

ನವದೆಹಲಿ (ಅ.15): ಕಾರ್ಪೋರೇಟ್ ಕಂಪನಿಗಳಿಗೆ ಸಾಲ ಮನ್ನಾ ಮಾಡಿರುವ ಕೇಂದ್ರ ಸರ್ಕಾರದ ನಡೆಯನ್ನು ಸಿಪಿಐ (ಎಂ) ಪ್ರಧಾನ ಕಾರ್ಯದರ್ಶಿ ಸಿತಾರಾಮ್ ಯೆಚೂರಿ ಖಂಡಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಾಷ್ಟ್ರೀಕೃತ ಬ್ಯಾಂಕುಗಳಿಂದ ಖಾಸಗಿ ಕಂಪನಿಗಳು ಸಾಲ ಪಡೆದುಕೊಂಡಿದ್ದು, ಇನ್ನೂ ಪಾವತಿಸದ ಹಣದ ಮೊತ್ತ 2 ಜಿ ಸ್ಪೆಕ್ಟ್ರಮ್ ಹಗರಣಕ್ಕಿಂತಲೂ 10 ಪಟ್ಟು ದೊಡ್ಡದಿದೆ ಎಂದು ಯೆಚೂರಿ ನುಡಿದಿದ್ದಾರೆ.

ಕಾರ್ಪೋರೇಟ್ ಕಂಪನಿಗಳು ರಾಷ್ಟ್ರೀಕೃತ ಬ್ಯಾಂಕುಗಳಿಂದ 11 ಲಕ್ಷ ಕೋಟಿಗಿಂತಲೂ ಹೆಚ್ಚು ಸಾಲವನ್ನು ಪಡೆದಿದೆ. ಆದರೆ ಇದುವರೆಗೂ ಅದನ್ನು ಮರು ಪಾವತಿಸಿಲ್ಲ. ಕಳೆದ 2 ವರ್ಷಗಳಲ್ಲಿ ಕಾರ್ಪೋರೇಟ್ ಕಂಪನಿಗಳು 1.12 ಲಕ್ಷ ಕೋಟಿ ಸಾಲ ಮನ್ನಾ ಪಡೆದಿದೆ. ಇದು 2 ಜಿ ಸ್ಪೆಕ್ಟ್ರಮ್ ಹಗರಣಕ್ಕಿಂತಲೂ 10 ಪಟ್ಟು ದೊಡ್ಡದಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಂಡಿದ್ದಾರೆ.