ಡಿಸೆಂಬರ್ 30ರ ಒಳಗೆ ಬ್ಯಾಂಕ್​ಗಳಲ್ಲಿ ಠೇವಣಿ 10 ಲಕ್ಷ ಕೋಟಿ ದಾಟುವ ಸಾಧ್ಯತೆ ಇದೆ. ಈ ಮಧ್ಯೆ 1000 ಮುಖಬೆಲೆಯ ಹಳೆ ನೋಟುಗಳ ಪುನರ್ ಚಲಾವಣೆಗೆ ಅವಕಾಶ ನೀಡಲಾಗುತ್ತದೆ ಎಂಬ ಗಾಳಿಸುದ್ದಿಯನ್ನು ಹಣಕಾಸು ಸಚಿವ ಅರುಣ್ ಜೇಟ್ಲಿ ತಳ್ಳಿಹಾಕಿದ್ದಾರೆ.

ನವದೆಹಲಿ (ನ.17): ರಾಜಕೀಯ ರಂಪ ರಗಳೆಗಳ ನಡುವೆಯೇ ದೇಶಾದ್ಯಂತ ಬ್ಯಾಂಕ್​ಗಳಲ್ಲಿ ಡೆಪಾಸಿಟ್ ಮೊತ್ತ ಹೆಚ್ಚುತ್ತಲೇ ಇದೆ.

ನವೆಂಬರ್ 9ರಿಂದ ನಿನ್ನೆಯವರೆಗೆ 4 ಲಕ್ಷ ಕೋಟಿಗೂ ಹೆಚ್ಚು ಡೆಪಾಸಿಟ್ ಬ್ಯಾಂಕ್​ಗೆ ಹರಿದುಬಂದಿದೆ. ಇದು ಮಾಮೂಲಿಗಿಂತ ಶೇ.24ರಷ್ಟು ಹೆಚ್ಚು.

ಡಿಸೆಂಬರ್ 30ರ ಒಳಗೆ ಬ್ಯಾಂಕ್​ಗಳಲ್ಲಿ ಠೇವಣಿ 10 ಲಕ್ಷ ಕೋಟಿ ದಾಟುವ ಸಾಧ್ಯತೆ ಇದೆ. ಈ ಮಧ್ಯೆ 1000 ಮುಖಬೆಲೆಯ ಹಳೆ ನೋಟುಗಳ ಪುನರ್ ಚಲಾವಣೆಗೆ ಅವಕಾಶ ನೀಡಲಾಗುತ್ತದೆ ಎಂಬ ಗಾಳಿಸುದ್ದಿಯನ್ನು ಹಣಕಾಸು ಸಚಿವ ಅರುಣ್ ಜೇಟ್ಲಿ ತಳ್ಳಿಹಾಕಿದ್ದಾರೆ.

ಪ್ರತಿಪಕ್ಷಗಳು ವಿನಾಕಾರಣ ಗದ್ದಲ ಮಾಡುತ್ತಿವೆ ಎಂದು ಟೀಕಿಸಿದ್ದಾರೆ.