Asianet Suvarna News Asianet Suvarna News

ಇನ್ನು ಬ್ಯಾಂಕ್ ಅಕೌಂಟ್ ನಂಬರ್ ಪೋರ್ಟಬಲಿಟಿ!

ಮೊಬೈಲ್‌ ನಂಬರ್‌ ಪೋರ್ಟಬಲಿಟಿ ಆಯ್ತು. ಈಗ ಅಂತರ ಬ್ಯಾಂಕ್‌ ಅಕೌಂಟ್‌ ನಂಬರ್‌ ಪೋರ್ಟಬಲಿಟಿ ಬರಲಿದೆಯೇ? ಇಂಥದ್ದೊಂದು ಪ್ರಸ್ತಾಪ ಸರ್ಕಾರದ ಮುಂದೆ ಇದ್ದು, ಬ್ಯಾಂಕ್‌ಗಳನ್ನು ಚಿಂತೆಗೀಡು ಮಾಡಿದೆ. ಬ್ಯಾಂಕ್‌ ಖಾತಾ ಸಂಖ್ಯೆಗಳನ್ನು ಬದಲಿಸದೇ ಬ್ಯಾಂಕ್‌ ಬದಲಿಸುವ ಆಯ್ಕೆ ಗ್ರಾಹಕರಿಗೆ ಇರಬೇಕು ಎಂಬ ಪ್ರಸ್ತಾಪವನ್ನು ಆರ್‌ಬಿಐ ಉಪ ಗವರ್ನರ್‌ ಎಸ್‌.ಎಸ್‌. ಮುಂದ್ರಾ ಬ್ಯಾಂಕ್‌ಗಳ ಮುಂದಿಟ್ಟಿದ್ದಾರೆ.

Bank Account Number Portability

ಮುಂಬೈ(ಜೂ.01): ಮೊಬೈಲ್‌ ನಂಬರ್‌ ಪೋರ್ಟಬಲಿಟಿ ಆಯ್ತು. ಈಗ ಅಂತರ ಬ್ಯಾಂಕ್‌ ಅಕೌಂಟ್‌ ನಂಬರ್‌ ಪೋರ್ಟಬಲಿಟಿ ಬರಲಿದೆಯೇ? ಇಂಥದ್ದೊಂದು ಪ್ರಸ್ತಾಪ ಸರ್ಕಾರದ ಮುಂದೆ ಇದ್ದು, ಬ್ಯಾಂಕ್‌ಗಳನ್ನು ಚಿಂತೆಗೀಡು ಮಾಡಿದೆ. ಬ್ಯಾಂಕ್‌ ಖಾತಾ ಸಂಖ್ಯೆಗಳನ್ನು ಬದಲಿಸದೇ ಬ್ಯಾಂಕ್‌ ಬದಲಿಸುವ ಆಯ್ಕೆ ಗ್ರಾಹಕರಿಗೆ ಇರಬೇಕು ಎಂಬ ಪ್ರಸ್ತಾಪವನ್ನು ಆರ್‌ಬಿಐ ಉಪ ಗವರ್ನರ್‌ ಎಸ್‌.ಎಸ್‌. ಮುಂದ್ರಾ ಬ್ಯಾಂಕ್‌ಗಳ ಮುಂದಿಟ್ಟಿದ್ದಾರೆ.

ಬ್ಯಾಂಕ್‌ ಖಾತೆಗೆ ಆಧಾರ್‌ ಸಂಯೋಜನೆ ಯಿಂದ ಹಾಗೂ ತಂತ್ರಜ್ಞಾನ ಸುಧಾರಣೆಯಿಂದ ಬ್ಯಾಂಕ್‌ ನಂಬರ್‌ ಪೋರ್ಟಬಲಿಟಿ ಸುಲಭವಾಗಿದೆ ಎಂದು ಸಮಾರಂಭವೊಂದರಲ್ಲಿ ಮುಂದ್ರಾ ಹೇಳಿದರು. ಅಲ್ಲದೆ ಗ್ರಾಹಕರಿಗೆ ಜಾಸ್ತಿ ಬಡ್ಡಿದರ ವಿಧಿಸುವುದರ ವಿರುದ್ಧವೂ ಅವರು ಎಚ್ಚರಿಕೆ ನೀಡಿದರು.

ಒಂದು ಬ್ಯಾಂಕ್‌ನ ಸೇವೆಯಿಂದ ಬೇಸತ್ತ ಗ್ರಾಹಕ ಇನ್ನೊಂದು ಬ್ಯಾಂಕ್‌ಗೆ ವರ್ಗಾವಣೆಗೊಳ್ಳುವುದು ಭವಿಷ್ಯದಲ್ಲಿ ಸಾಕಾರವಾಗಲಿದೆ. ಈ ನಿಟ್ಟಿನಲ್ಲಿ ಭಾರತೀಯ ಬ್ಯಾಂಕ್‌ಗಳ ಸಂಘ ಕಾರ್ಯತತ್ಪರವಾಗಬೇಕು ಎಂದು ಅವರು ಕರೆ ನೀಡಿದರು.
ಆದರೆ ಪ್ರಸ್ತುತ ಬ್ಯಾಂಕ್‌ ಖಾತೆ ಪೋರ್ಟಬಲಿಟಿ ವಿಶ್ವದ ಯಾವುದೇ ಭಾಗದಲ್ಲೂ ಜಾರಿಯಲ್ಲಿಲ್ಲ. ಇದು ಅಷ್ಟುಸುಲಭವಲ್ಲ. ಕಾರಣ, ಒಂದೊಂದು ಬ್ಯಾಂಕ್‌ಗಳು ನಿರ್ದಿಷ್ಟಸಂಖ್ಯೆಯ ಸಂಖ್ಯೆಗಳನ್ನು ನೀಡುತ್ತದೆ. ಉದಾಹರಣೆಗೆ ಕೆಲವು ಬ್ಯಾಂಕ್‌ಗಳಲ್ಲಿ 10 ಅಂಕೆಯ ಅಕೌಂಟ್‌ ನಂಬರ್‌ ಇದ್ದರೆ, ಕೆಲವರದಲ್ಲಿ 11, ಇನ್ನು ಕೆಲವುದರಲ್ಲಿ 14 ಇದೆ. ಇದನ್ನೆಲ್ಲಾ ಸರಿದೂಗಿಸುವುದು ಕಷ್ಟ. ಜೊತೆಗೆ ಇದಕ್ಕಾಗಿ ಎಲ್ಲಾ ಬ್ಯಾಂಕ್‌ಗಳ ಕೋರ್‌ ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ಏಕರೂಪತೆ ತರಬೇಕಾಗುತ್ತದೆ. ಇದಕ್ಕೆ ಸಾಕಷ್ಟುವೆಚ್ಚ ಕೂಡ ಆಗಲಿದೆ. ಗ್ರಾಹಕನ ಇಡೀ ಕಡತ ಸ್ವರೂಪವನ್ನೇ ಬದಲಿಸಬೇಕು. ಇದು ಸವಾಲಿನದ್ದು ಎಂದು ಕೆಲವು ಬ್ಯಾಂಕರ್‌ಗಳು ಹೇಳಿದ್ದಾರೆ.

Follow Us:
Download App:
  • android
  • ios