ಬೆಂಗಳೂರಿನಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಬಾಂಗ್ಲಾದೇಶೀಯರು ಅಕ್ರಮವಾಗಿ ವಾಸಿಸುತ್ತಿರುವುದನ್ನ ಸುವರ್ಣನ್ಯೂಸ್'ನ ಕವರ್ ಸ್ಟೋರಿ ತಂಡ ಬೆಳಕಿಗೆ ತಂದಿತ್ತು. ಈ ಬಾಂಗ್ಲಾದೇಶೀಯರು ಉಗ್ರ ಚಟುವಟಿಕೆಯ ಸ್ಲೀಪರ್ ಸೆಲ್'ಗಳಾಗಿ ಕಾರ್ಯನಿರ್ವಹಿಸುವ ಅಪಾಯದ ಕುರಿತು ಕವರ್ ಸ್ಟೋರಿಯಲ್ಲಿ ಎಚ್ಚರಿಸಲಾಗಿತ್ತು. ಇದೀಗ ಈ ಭಯವನ್ನು ಇನ್ನಷ್ಟು ಹೆಚ್ಚಿಸುವ ಸುದ್ದಿಯೊಂದು ಬಂದಿದೆ. ಉತ್ತರ ಪ್ರದೇಶದ ಮುಜಾಫರ್‌'‌ನಗರ ಜಿಲ್ಲೆಯಲ್ಲಿ ಬಾಂಗ್ಲಾದೇಶದ ಉಗ್ರನೋರ್ವನನ್ನು ಬಂಧಿಸಲಾಗಿದೆ. ಬಂಧಿತ ಉಗ್ರನನ್ನು ಅಬ್ದುಲ್ಲಾ ಅಲ್ ಮಮೋನ್ ಎಂದು ಗುರುತಿಸಲಾಗಿದೆ. ಇಲ್ಲಿನ ಕುಟೇಸರ ಗ್ರಾಮದಲ್ಲಿ ಇಂದು ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಬಾಂಗ್ಲಾದೇಶಿ ಉಗ್ರ ಅಬ್ದುಲ್ಲಾನನ್ನು ಅರೆಸ್ಟ್‌ ಮಾಡಿದ್ದಾರೆ.
ಲಕ್ನೋ(ಆ. 06): ಬೆಂಗಳೂರಿನಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಬಾಂಗ್ಲಾದೇಶೀಯರು ಅಕ್ರಮವಾಗಿ ವಾಸಿಸುತ್ತಿರುವುದನ್ನ ಸುವರ್ಣನ್ಯೂಸ್'ನ ಕವರ್ ಸ್ಟೋರಿ ತಂಡ ಬೆಳಕಿಗೆ ತಂದಿತ್ತು. ಈ ಬಾಂಗ್ಲಾದೇಶೀಯರು ಉಗ್ರ ಚಟುವಟಿಕೆಯ ಸ್ಲೀಪರ್ ಸೆಲ್'ಗಳಾಗಿ ಕಾರ್ಯನಿರ್ವಹಿಸುವ ಅಪಾಯದ ಕುರಿತು ಕವರ್ ಸ್ಟೋರಿಯಲ್ಲಿ ಎಚ್ಚರಿಸಲಾಗಿತ್ತು. ಇದೀಗ ಈ ಭಯವನ್ನು ಇನ್ನಷ್ಟು ಹೆಚ್ಚಿಸುವ ಸುದ್ದಿಯೊಂದು ಬಂದಿದೆ. ಉತ್ತರ ಪ್ರದೇಶದ ಮುಜಾಫರ್'ನಗರ ಜಿಲ್ಲೆಯಲ್ಲಿ ಬಾಂಗ್ಲಾದೇಶದ ಉಗ್ರನೋರ್ವನನ್ನು ಬಂಧಿಸಲಾಗಿದೆ. ಬಂಧಿತ ಉಗ್ರನನ್ನು ಅಬ್ದುಲ್ಲಾ ಅಲ್ ಮಮೋನ್ ಎಂದು ಗುರುತಿಸಲಾಗಿದೆ. ಇಲ್ಲಿನ ಕುಟೇಸರ ಗ್ರಾಮದಲ್ಲಿ ಇಂದು ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಬಾಂಗ್ಲಾದೇಶಿ ಉಗ್ರ ಅಬ್ದುಲ್ಲಾನನ್ನು ಅರೆಸ್ಟ್ ಮಾಡಿದ್ದಾರೆ. ನಿಷೇಧಿತ ಅನ್ಸುರುಲ್ಲಾ ಬಾಂಗ್ಲಾ ಟೀಮ್(ಎಬಿಟಿ) ಎಂಬ ಭಯೋತ್ಪಾದಕ ಸಂಘಟನೆಯೊಂದಿಗೆ ಬಂಧಿತ ಉಗ್ರ ಅಬ್ದುಲ್ಲಾ ಗುರುತಿಸಿಕೊಂಡಿದ್ದಾನೆ. ಈತ ಉಗ್ರರ ಸ್ಲೀಪರ್ ಸೆಲ್'ನ ಭಾಗವಾಗಿದ್ದ. ಭಾರತದಲ್ಲಿ ಬಾಂಗ್ಲಾದೇಶೀಯರಿಗೆ ನಕಲಿ ಗುರುತಿನ ಚೀಟಿ ಹಾಗೂ ಪಾಸ್'ಪೋರ್ಟ್ಗಳನ್ನು ಒದಗಿಸಿ ಇಲ್ಲಿಯೇ ನೆಲೆ ಕಲ್ಪಿಸುವ ಜವಾಬ್ದಾರಿ ಈತನದ್ದಾಗಿತ್ತೆನ್ನಲಾಗಿದೆ. 2011ರಲ್ಲೇ ಉತ್ತರಪ್ರದೇಶಕ್ಕೆ ಬಂದಿದ್ದ ಈತ ಸಹರಾನ್'ಪುರ್ ಮತ್ತು ದೇವೋಬಂದ್'ನಲ್ಲಿ ಹೆಚ್ಚು ಸಕ್ರಿಯನಾಗಿದ್ದ.
ಪೊಲೀಸರು ಈತನಿಂದ ಗ್ರಾಮ ಪಂಚಾಯಿತಿ, ಜಿಲ್ಲಾ ಚುನಾವಣೆ ಅಧಿಕಾರಿ ಮತ್ತಿತರ ಸರಕಾರಿ ಸಂಸ್ಥೆಗಳ ನಕಲಿ ಸ್ಟ್ಯಾಂಪ್'ಗಳನ್ನು ವಶಪಡಿಸಿಕೊಂಡಿದ್ದಾರೆ. ಈತ ಇವುಗಳನ್ನು ಬಳಸಿ ನಕಲಿ ಐಡಿ ಕಾರ್ಡ್'ಗಳನ್ನು ಮಾಡಿಕೊಡುತ್ತಿದ್ದನೆನ್ನಲಾಗಿದೆ.
ಎಬಿಟಿ ಸಂಘಟನೆ ಕುರಿತು:
ಅನ್ಸಾರುಲ್ಲಾ ಬಾಂಗ್ಲಾ ಟೀಮ್ ಸಂಘಟನೆಯು ಅಲ್-ಖೈದಾದಿಂದ ಸ್ಫೂರ್ತಿ ಪಡೆದು ಹುಟ್ಟಿಕೊಂಡ ಇಸ್ಲಾಮೀ ಉಗ್ರ ಸಂಘಟನೆಯಾಗಿದೆ. ಬಾಂಗ್ಲಾದೇಶದಲ್ಲಿ ಯುವಜನತೆಯನ್ನು ಉಗ್ರವಾದಕ್ಕೆ ಸೆಳೆಯುವುದು ಇದರ ಪ್ರಮುಖ ಗುರಿಯಾಗಿದೆ. ಬಾಂಗ್ಲಾದಲ್ಲಿ ಸ್ಥಳೀಯವಾಗಿ ಜಿಹಾದಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಯುವಕರನ್ನು ಸೆಳೆಯುತ್ತದೆನ್ನಲಾಗಿದೆ. ಅಲ್ಲದೇ, ಇಂಟರ್ನೆಟ್'ನಲ್ಲಿ ಉಗ್ರ ದಾಳಿ ನಡೆಸಲು ಯುವಕರಿಗೆ ಈ ಸಂಘಟನೆಯಿಂದ ಮಾರ್ಗದರ್ಶನವೂ ಸಿಕ್ಕುತ್ತದೆ. ಬಾಂಗ್ಲಾದೇಶದಲ್ಲಿ ತನ್ನ ಉಗ್ರ ತತ್ವವನ್ನು ಪ್ರಚಾರ ಮಾಡಲು ಈ ಸಂಘಟನೆಯು ಮಸೀದಿಗಳನ್ನು ಬಳಸಿಕೊಳ್ಳುತ್ತದೆ. ಸದ್ಯ ಈ ಸಂಘಟೆಯನ್ನು ನಿಷೇಧಿಸಲಾಗಿದೆ.
