ಕಬ್ಬಡ್ಡಿ ಜಯರಾಮ್, ಸ್ವಾಮಿ ಎಂಬುವವರ ಜೊತೆ ಬಂದ ಕಾಲಪತ್ತರ್, ನಾಗರಾಜ್ಗೆ ಹಲ್ಲೆ ನಡೆಸಿ, ನಿನ್ನ ಜೀವ ತೆಗೆಯುವುದಾಗಿ ಬೆದರಿಕೆ ಒಡ್ಡಿದ್ದಾನೆ
ಬೆಂಗಳೂರಿನ ಪಾತಕಲೋಕದ ಹಳೇ ಡಾನ್ ಡೆಡ್ಲಿ ಸೋಮನ ಶಿಷ್ಯ ಕಾಲಪತ್ತರ್ ಅಲಿಯಾಸ್ ಗಣೇಶ್ ಮತ್ತೆ ಬುಸುಗುಟ್ಟಿದ್ದಾನೆ. ನಿವೇಶನ ವಿವಾದವೊಂದಕ್ಕೆ ಸಂಬಂಧಿಸಿದ್ದಂತೆ ನಾಗರಾಜ್ ಎಂಬುವವರಿಗೆ ಕಾಲಪತ್ತರ್ ಜೀವ ಬೆದರಿಕೆ ಹಾಕಿದ್ದಾನೆ.
ಕೆಂಗೇರಿ ಮೂಲದ, ನಾಗರಾಜ್ ಎಂಬುವವರಿಗೆ ಸೇರಿದ ಸೈಟ್ ಅನ್ನ ಕಡಿಮೆ ಬೆಲೆಗೆ ತನಗೆ ಮಾರಾಟ ಮಾಡಬೇಕು ಅಂತಾ ನಾಗರಾಜ್ಗೆ ಬೆದರಿಕೆ ಹಾಕಿದ್ದಾನೆ. ಹಲವು ಬಾರಿ ಬೆದರಿಕೆ ಹಾಕಿದ್ದರೂ, ಬಗ್ಗದ ನಾಗರಾಜ್, ಪೊಲೀಸ್ ಠಾಣೆ ಮೆಟ್ಟಿಲೇರುವುದಾಗಿ ಹೇಳಿದಾಗ, ಕಾಲಪತ್ತರ್ ತನ್ನ ಹಳೇ ಖದರ್ ಪ್ರದರ್ಶಿಸಿದ್ದಾನೆ. ಕಬ್ಬಡ್ಡಿ ಜಯರಾಮ್, ಸ್ವಾಮಿ ಎಂಬುವವರ ಜೊತೆ ಬಂದ ಕಾಲಪತ್ತರ್, ನಾಗರಾಜ್ಗೆ ಹಲ್ಲೆ ನಡೆಸಿ, ನಿನ್ನ ಜೀವ ತೆಗೆಯುವುದಾಗಿ ಬೆದರಿಕೆ ಒಡ್ಡಿದ್ದಾನೆ. ನಾಗರಾಜ್ ಕೆಂಗೇರಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ಜೀವ ಬೆದರಿಕೆ ಮತ್ತು ಹಲ್ಲೆ ಪ್ರಕರಣ ದಾಖಲಿಸಿದ್ದಾರೆ. ಕೆಂಗೇರಿ ಪೊಲೀಸರು, ಕಾಲಪತ್ತರ್ ನನ್ನ ಜೈಲಿಗೆ ಕಳಿಸಲು ಆತನಿಗಾಗಿ ಹುಡುಕಾಟ ನಡೆಸಿದ್ದಾರೆ..!
