ಬೆಂಗಳೂರಿನ ಇತಿಹಾಸದಲ್ಲೇ ಅತ್ಯಧಿಕ ಮಳೆಗಳಲ್ಲಿ ನಿನ್ನೆಯದೂ ಸೇರಿದೆ. ಇದು ಕಳೆದೊಂದು ಶತಮಾನದಲ್ಲೇ ಅತ್ಯಧಿಕವಾಗಿದೆ. 1891, ಜೂನ್ 16ರಂದು ಬೆಂಗಳೂರಿನಲ್ಲಿ 10.16 ಸೆಂ.ಮೀ. ಮಳೆಯಾಗಿದ್ದು ಈವರೆಗಿನ ದಾಖಲೆಯಾಗಿತ್ತು. ಆದರೆ, ನಿನ್ನೆಯ ಮಳೆ 126 ವರ್ಷಗಳ ಹಳೆಯ ದಾಖಲೆಯನ್ನು ಮುಳುಗಿಸಿ ಹೊಸ ಇತಿಹಾಸ ಬರೆದಿದೆ. ಆದರೆ, ನಾಲ್ಕು ವರ್ಷಗಳ ಹಿಂದೆ 2013ರಲ್ಲಿ ಬೆಂಗಳೂರಿನಲ್ಲಿ ಒಂದೇ ದಿನ 10.9 ಸೆಂ.ಮೀ. ಮಳೆಯಾಗಿ ಹೊಸ ದಾಖಲೆ ಸೃಷ್ಟಿಯಾಗಿತ್ತು. ಈಗ ಆ ದಾಖಲೆಯೂ ಬದಿಗೊತ್ತಲ್ಪಟ್ಟಿದೆ.

ಬೆಂಗಳೂರು(ಆ. 14): ಈಗ್ಗೆ ಹಲವು ದಿನಗಳಿಂದ ಭಾರೀ ಮಳೆಯು ಉದ್ಯಾನನಗರಿಗೆ ತಂಪೆರೆಯುತ್ತಿದೆ. ಕಳೆದ ರಾತ್ರಿಯಂತೂ ಬೆಂಗಳೂರಿಗೆ ಸಿಕ್ಕಾಪಟ್ಟೆ ಮಳೆ ರಾಚಿತು. ನಗರದಲ್ಲಿ ರಾತ್ರಿ 13 ಸೆಂ.ಮೀ. ಮಳೆಯಾಗಿದೆ. ಹೆಚ್'ಎಎಲ್ ಬಡಾವಣೆಯಲ್ಲಿ ಅತ್ಯಧಿಕ 14 ಸೆಂ.ಮೀ. ಮಳೆಯಾಗಿದೆ. ಬೆಂಗಳೂರಿನ ಇತಿಹಾಸದಲ್ಲೇ ಅತ್ಯಧಿಕ ಮಳೆಗಳಲ್ಲಿ ನಿನ್ನೆಯದೂ ಸೇರಿದೆ. ಇದು ಕಳೆದೊಂದು ಶತಮಾನದಲ್ಲೇ ಅತ್ಯಧಿಕವಾಗಿದೆ. 1891, ಜೂನ್ 16ರಂದು ಬೆಂಗಳೂರಿನಲ್ಲಿ 10.16 ಸೆಂ.ಮೀ. ಮಳೆಯಾಗಿದ್ದು ಈವರೆಗಿನ ದಾಖಲೆಯಾಗಿತ್ತು. ಆದರೆ, ನಿನ್ನೆಯ ಮಳೆ 126 ವರ್ಷಗಳ ಹಳೆಯ ದಾಖಲೆಯನ್ನು ಮುಳುಗಿಸಿ ಹೊಸ ಇತಿಹಾಸ ಬರೆದಿದೆ.

ಆದರೆ, ನಾಲ್ಕು ವರ್ಷಗಳ ಹಿಂದೆ 2013ರಲ್ಲಿ ಬೆಂಗಳೂರಿನಲ್ಲಿ ಒಂದೇ ದಿನ 10.9 ಸೆಂ.ಮೀ. ಮಳೆಯಾಗಿ ಹೊಸ ದಾಖಲೆ ಸೃಷ್ಟಿಯಾಗಿತ್ತು. ಈಗ ಆ ದಾಖಲೆಯೂ ಬದಿಗೊತ್ತಲ್ಪಟ್ಟಿದೆ.